ಆಮ್ನಿ- ಪಿಕಪ್ ಢಿಕ್ಕಿ: ಚಾಲಕ ಸಾವು
Team Udayavani, Mar 14, 2023, 5:37 AM IST
ಬಂಟ್ವಾಳ: ರಾ.ಹೆ. 75ರ ಬಿ.ಸಿ. ರೋಡು ಸಮೀಪದ ತಲಪಾಡಿಯಲ್ಲಿ ಮಾರುತಿ ಆಮ್ನಿ ಹಾಗೂ ಪಿಕಪ್ ಮಧ್ಯೆ ಮುಖಾಮುಖಿ ಢಿಕ್ಕಿ ಸಂಭವಿಸಿ ಆಮ್ನಿ ಚಾಲಕ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
ಕಳ್ಳಿಗೆ ಗ್ರಾಮದ ಬ್ರಹ್ಮರಕೂಟ್ಲು ಶಾಲಾ ಬಳಿ ನಿವಾಸಿ ಆಮ್ನಿ ಚಾಲಕ ರಾಜೇಶ್ ಶೆಟ್ಟಿ (50) ಮೃತಪಟ್ಟವರು. ಅವರು ಹೆದ್ದಾರಿಯಲ್ಲಿ ಬಿ.ಸಿ. ರೋಡಿನಿಂದ ಬ್ರಹ್ಮರಕೂಟ್ಲು ಕಡೆಗೆ ತೆರಳುತ್ತಿದ್ದು, ತಲಪಾಡಿ ತಲುಪುತ್ತಿದ್ದಂತೆ ಪಿಕಪ್ ಚಾಲಕ ಇರ್ಷಾದ್ ರಾಂಗ್ ಸೈಡಿನಿಂದ ವಾಹನ ಚಲಾಯಿಸಿದ್ದು, ಈ ವೇಳೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಕಾಲಿಗೆ ಗಂಭೀರ ಗಾಯಗೊಂಡಿದ್ದ ರಾಜೇಶ್ ಅವರನ್ನು ತತ್‌ಕ್ಷಣ ಮಂಗಳೂರು ಆಸ್ಪತ್ರೆಗೆ ಸಾಗಿಸಲಾಯಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪಿಕಪ್ ವಾಹನ ರಾಂಗ್ ಸೈಡಿನಿಂದ ತೆರಳಿ ಈ ರೀತಿ ಅಪಘಾತಕ್ಕೆ ಕಾರಣವಾಗಿರುವ ಕುರಿತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಕ್ಕು ಕೂಡ ಸಾವು
ಅನಾರೋಗ್ಯದಿಂದ ಬಳಲುತ್ತಿದ್ದ ಬೆಕ್ಕನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿ ಹಿಂದಿರುಗುವ ವೇಳೆ ಘಟನೆ ನಡೆದಿದ್ದು, ತಮ್ಮ ಪ್ರಾಣಪಕ್ಷಿಯೇ ಹಾರಿ ಹೋಗಿದೆ. ಆಮ್ನಿಯಲ್ಲಿದ್ದ ಬೆಕ್ಕು ಕೂಡ ಸ್ಥಳದಲ್ಲೇ ಮೃತಪಟ್ಟಿದೆ. ಬೆಕ್ಕಿನ ಮೃತದೇಹವೂ ಅ ಬಿದ್ದಿಕೊಂಡಿದ್ದು, ಮನ ಕಲುಕುವಂತಿತ್ತು.
ಪಂಪ್‌ಹೌಸ್ ಆಪರೇಟರ್ ಮೃತ ರಾಜೇಶ್ ಶೆಟ್ಟಿ ಅವರು ಮನಪಾ ತುಂಬೆ ಪಂಪ್‌ಹೌಸ್‌ನಲ್ಲಿ ಆಪರೇಟರ್ ಆಗಿ ಕೆಲಸ ಮಾಡಿಕೊಂಡಿದ್ದು, ವಿವಾಹಿತರಾಗಿದ್ದ ಅವರಿಗೆ ಮಕ್ಕಳಿಲ್ಲ. ಪರೋಪಕಾರಿ ವ್ಯಕ್ತಿತ್ವದ ಅವರು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.