ಏಕದಿನ ಸರಣಿ : ಲಂಕೆಗೆ ವೈಟ್‌ವಾಶ್ ಮಾಡಿದ ವೆಸ್ಟ್ ಇಂಡೀಸ್
Team Udayavani, Mar 15, 2021, 11:20 PM IST
ನಾರ್ತ್ ಸೌಂಡ್ (ಆ್ಯಂಟಿಗುವಾ): ಅಂತಿಮ ಪಂದ್ಯದಲ್ಲೂ ಪ್ರವಾಸಿ ಶ್ರೀಲಂಕಾಕ್ಕೆ ಸೋಲುಣಿಸಿದ ವೆಸ್ಟ್ ಇಂಡೀಸ್ ಏಕದಿನ ಸರಣಿಯನ್ನು ಕ್ಲೀನ್‌ಸ್ವೀಪ್ ಆಗಿ ವಶಪಡಿಸಿಕೊಂಡಿದೆ. ಡ್ಯಾರನ್ ಬ್ರಾವೊ ಅವರ ಶತಕ ಸಾಹಸದಿಂದ ವಿಂಡೀಸ್ ಈ ಮುಖಾಮುಖೀಯಲ್ಲಿ 5 ವಿಕೆಟ್ ಜಯ ಸಾಧಿಸಿತು.
ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ 6 ವಿಕೆಟಿಗೆ 274 ರನ್ ಗಳಿಸಿ ಸವಾಲೊಡ್ಡಿದರೆ, ವಿಂಡೀಸ್ 48.3 ಓವರ್‌ಗಳಲ್ಲಿ 5 ವಿಕೆಟಿಗೆ 276 ರನ್ ಬಾರಿಸಿತು.
ವಿಂಡೀಸ್ ಚೇಸಿಂಗ್ ವೇಳೆ ಡ್ಯಾರನ್ ಬ್ರಾವೊ 102 ರನ್ನಿನೊಂದಿಗೆ 4ನೇ ಶತಕ ಸಂಭ್ರಮ ಆಚರಿಸಿದರು (132 ಎಸೆತ, 5 ಬೌಂಡರಿ, 4 ಸಿಕ್ಸರ್). ಆರಂಭಕಾರ ಹೋಪ್ 64, ನಾಯಕ ಪೊಲಾರ್ಡ್ 53 ರನ್ ಮಾಡಿ ಲಂಕೆಯ ಆಸೆಗೆ ತಣ್ಣೀರೆರಚಿದರು. ಲಂಕೆ ದೊಡ್ಡ ಮೊತ್ತ ದತ್ತ ಸಾಗಿದ್ದೇ 6 ವಿಕೆಟ್ ಉರುಳಿದ ಬಳಿಕ. ಅಶೆನ್ ಬಂಡಾರ-ವನಿಂದು ಹಸರಂಗ ಸೇರಿಕೊಂಡು ಕೊನೆಯ 18.1 ಓವರ್‌ಗಳಿಂದ 123 ರನ್ ಒಟ್ಟು ಗೂಡಿಸಿದರು.
ಇದನ್ನೂ ಓದಿ :ನಾನು ಮುಂದಿನ ಬಾರಿಯೂ ಬಾದಾಮಿ ಕ್ಷೇತ್ರದಿಂದಲೇ ಕಣಕ್ಕಿಳಿಯುತ್ತೇನೆ : ಸಿದ್ದು
ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ-6 ವಿಕೆಟಿಗೆ 274 (ಹಸರಂಗ ಔಟಾಗದೆ 80, ಬಂಡಾರ 55, ಗುಣತಿಲಕ 36, ಅಖೀಲ್ ಹೊಸೈನ್ 33ಕ್ಕೆ 3). ವೆಸ್ಟ್ ಇಂಡೀಸ್-48.3 ಓವರ್‌ಗಳಲ್ಲಿ 5 ವಿಕೆಟಿಗೆ 276 (ಬ್ರಾವೊ 102, ಹೋಪ್ 64, ಪೊಲಾರ್ಡ್ ಔಟಾಗದೆ 53, ಲಕ್ಮಲ್ 56ಕ್ಕೆ 2). ಪಂದ್ಯಶ್ರೇಷ್ಠ: ಡ್ಯಾರನ್ ಬ್ರಾವೊ.
ಸರಣಿಶ್ರೇಷ್ಠ: ಶೈ ಹೋಪ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.