ಏಕದಿನ: ಸರ್ವಾಧಿಕ 481 ರನ್ ಬಳಿಕ ಟಾರ್ಗೆಟ್-500
ಇಂಗ್ಲೆಂಡಿನ ವಿಶ್ವದಾಖಲೆಯ ಬ್ಯಾಟಿಂಗ್ ಪರಾಕ್ರಮಕ್ಕೆ ತುಂಬಿತು ಎರಡು ವರ್ಷ
Team Udayavani, Jun 20, 2020, 5:30 AM IST
ಲಂಡನ್: ಕ್ರಿಕೆಟ್‌ನಲ್ಲಿ ವಿಶ್ವದಾಖಲೆಗಳದ್ದೇ ಒಂದು ಆಟ. ಇಲ್ಲಿ ಯಾವ ದಾಖಲೆಯೂ ಶಾಶ್ವತವಲ್ಲ, ದಾಖಲೆಗಳಿರುವುದೇ ಮುರಿಯಲು ಎಂಬುದು ಕಾಲ ಕಾಲಕ್ಕೆ ಸಾಬೀತಾಗುತ್ತಲೇ ಬಂದಿದೆ.
ಅದೊಂದು ಕಾಲವಿತ್ತು. ಏಕದಿನ ಕ್ರಿಕೆಟ್ ತಲಾ 60 ಓವರ್‌ಗಳ ಪಂದ್ಯವಾಗಿದ್ದರೂ ಅಲ್ಲಿ ಮುನ್ನೂರು ರನ್ನಿಗೂ ಬರಗಾಲವಿತ್ತು. ಭಾರತದ ಸುನೀಲ್ ಗಾವಸ್ಕರ್ ವಿಶ್ವಕಪ್‌ನಲ್ಲಿ ಭರ್ತಿ 60 ಓವರ್ ಆಡಿ ಅಜೇಯ 36 ರನ್ ಹೊಡೆದ ದಾಖಲೆ ಈಗಲೂ ತಮಾಷೆಯಾಗಿ ಕಾಣುತ್ತಿದೆ!
ಆದರಿದು ಟಿ20 ಜಮಾನಾ. ಹೊಡಿಬಡಿ ಆಟಗಾರರ ಸುಗ್ಗಿ. ಸಹಜವಾಗಿಯೇ ಇದು ಉಳಿದೆರಡು ಮಾದರಿಯ ಕ್ರಿಕೆಟ್ ಮೇಲೂ ಪರಿಣಾಮ ಬೀರಿದೆ. ಹೀಗಾಗಿ ಏಕದಿನದಲ್ಲಿ ಸಲೀಸಾಗಿ 400 ರನ್ ಹರಿದು ಬರುತ್ತಿದೆ.
ಆಸೀಸ್ ಎದುರು ಆಂಗ್ಲರ ಸಾಹಸ
ಏಕದಿನ ಇತಿಹಾಸದಲ್ಲಿ ತಂಡವೊಂದು ಗಳಿಸಿದ ಗರಿಷ್ಠ ಗಳಿಕೆ 6ಕ್ಕೆ 481 ರನ್. ಇದು ಬಲಿಷ್ಠರಿಬ್ಬರ ಕದನದ ವೇಳೆ ಕಂಡುಬಂದ ಸಾಹಸವೆಂಬುದು ಉಲ್ಲೇಖನಿಯ. ವಿಶ್ವ ದಾಖಲೆಯ ಈ ಮೊತ್ತವನ್ನು ಪೇರಿಸಿದ ತಂಡ ಇಂಗ್ಲೆಂಡ್. ಎದುರಾಳಿ, ವಿಶ್ವ ಚಾಂಪಿ ಯನ್ ಆಗಿದ್ದ ಆಸ್ಟ್ರೇಲಿಯ. ಆಂಗ್ಲರ ಈ ಸಾಹಸಕ್ಕೆ ಶುಕ್ರವಾರ ಭರ್ತಿ ಎರಡು ವರ್ಷ ತುಂಬಿತು.
2018ರ ಜೂ. 19ರಂದು ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ ಮುಖಾಮುಖಿಯಲ್ಲಿ ಇಂಗ್ಲೆಂಡ್ ತನ್ನದೇ ದಾಖಲೆಯನ್ನು ಮುರಿದು ಮುನ್ನುಗ್ಗಿತ್ತು. ಮೊದಲು ಬ್ಯಾಟಿಂಗ್ ನಡೆಸುವ ಅವಕಾಶ ಪಡೆದ ಆತಿಥೇಯ ಪಡೆ ಬರೋಬ್ಬರಿ 481 ರನ್ ಸೂರೆಗೈದಿತು. ಕಾಂಗರೂ ಬೌಲಿಂಗ್ ದಿಕ್ಕಾಪಾಲಾಗಿತ್ತು. ಬೇರ್‌ಸ್ಟೊ 139, ಹೇಲ್ಸ್ 147, ರಾಯ್ 82, ನಾಯಕ ಮಾರ್ಗನ್ 30 ಎಸೆತಗಳಿಂದ 67 ರನ್ ಬಾರಿಸಿದ್ದರು. ಆಸ್ಟ್ರೇಲಿಯ 239ಕ್ಕೆ ಕುಸಿದು ಇಂಗ್ಲೆಂಡ್ ಎದುರು ದೊಡ್ಡ ಸೋಲಿಗೆ ತುತ್ತಾಯಿತು (242 ರನ್).
ಇದಕ್ಕೂ ಮೊದಲು 2016ರಲ್ಲಿ, ಇದೇ ಅಂಗಳದಲ್ಲಿ ಪಾಕಿಸ್ಥಾನ ವಿರುದ್ಧ 3ಕ್ಕೆ 444 ರನ್ ಪೇರಿಸುವ ಮೂಲಕ ಇಂಗ್ಲೆಂಡ್ ವಿಶ್ವದಾಖಲೆ ನಿರ್ಮಿಸಿತ್ತು. ಮುಂದಿನ ಟಾರ್ಗೆಟ್ 500 ರನ್. ಇದನ್ನು ಯಾವ ತಂಡ ಸಾಧಿಸೀತು ಎಂಬುದು ಎಲ್ಲರ ನಿರೀಕ್ಷೆ ಮತ್ತು ಕುತೂಹಲ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
IPL Mega Auction: ಭರ್ಜರಿ ಬಿಡ್ ಗಳಿಸಿ ಅಯ್ಯರ್ ದಾಖಲೆ ಮುರಿದ ರಿಷಭ್ ಪಂತ್
IPL Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.