ಕೋವಿಡ್ ದೇಣಿಗೆಗೆ ಆನ್‌ಲೈನ್ ಚೆಸ್ : ವಿಶ್ವನಾಥನ್ ಆನಂದ್ ಯೋಜನೆ
Team Udayavani, May 11, 2021, 10:54 PM IST
ಹೊಸದಿಲ್ಲಿ: ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಹಾಗೂ ಇತರ ನಾಲ್ವರು ಭಾರತೀಯ ಗ್ರ್ಯಾನ್‌ಮಾಸ್ಟರ್‌ಗಳು ದೇಶದಲ್ಲಿ ಕೋವಿಡ್-19 ಪರಿಹಾರ ಕಾರ್ಯಗಳಿಗಾಗಿ ಹಣ ಸಂಗ್ರಹಿಸಲು ಮುಂದಾಗಿದ್ದಾರೆ. ಗುರುವಾರ ಇತರ ಚೆಸ್ ಆಟಗಾರರೊಂದಿಗೆ ಏಕಕಾಲದಲ್ಲಿ ಆನ್‌ಲೈನ್ ಪ್ರದರ್ಶನ ಪಂದ್ಯಗಳಲ್ಲಿ ಆಡಲಿದ್ದಾರೆ.
ಅಪೂರ್ವ ಅವಕಾಶ
2000ಕ್ಕಿಂತ ಕಡಿಮೆ ಫಿಡೆ ಸ್ಟಾಂಡರ್ಡ್ ರೇಟ್ ಹೊಂದಿ ರುವ ಅಭಿಮಾನಿಗಳಿಗೆ ಸ್ಟಾರ್ ಆಟಗಾರರೊಂದಿಗೆ ಆಡುವ ಅಪೂರ್ವ ಅವಕಾಶ ಇದಾಗಿದೆ. ಆನಂದ್ ಜತೆ ಆಡಲು 150 ಅಮೆರಿಕನ್ ಡಾಲರ್ ಹಾಗೂ ಇತರ 4 ಜಿಎಂಗಳೊಂದಿಗೆ ಆಡಲು 25 ಅಮೆರಿಕನ್ ಡಾಲರ್ ನೋಂದಣಿ ಮೊತ್ತವಾಗಿ ಪಾವತಿಸಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು.
ಆನಂದ್, ಕೊನೇರು ಹಂಪಿ, ದ್ರೋಣವಲ್ಲಿ ಹರಿಕಾ, ನಿಹಾಲ್ ಸರಿನ್ ಹಾಗೂ ಪ್ರಗ್ನಾನಂದ ರಮೇಶ್‌ಬಾಬು ಅವ ರನ್ನು ಒಳಗೊಂಡ ಪಂದ್ಯಗಳಿಂದ ಬರುವ ಎಲ್ಲ ಆದಾಯ ರೆಡ್‌ಕ್ರಾಸ್ ಇಂಡಿಯಾ ಹಾಗೂ ಅಖೀಲ ಭಾರತ ಚೆಕ್‌ವೆುàಟ್ ಕೋವಿಡ್ ಚೆಸ್ ಫೆಡರೇಶನ್‌ಗೆ (ಎಐಸಿಎಫ್) ಸೇರಲಿದೆ.
ಇದನ್ನೂ ಓದಿ :ಕೋವಿಡ್ ಮೂರನೇ ಅಲೆ ಆತಂಕ : ಲಸಿಕೆ ನೀಡುವ ಕೆಲಸಕ್ಕೆ ಆದ್ಯತೆ ನೀಡಲು ಸಿದ್ದರಾಮಯ್ಯ ಆಗ್ರಹ
ಆನಂದ್ ವಿನಂತಿ: “ನಾವು ಭಾರತದಲ್ಲಿ ಕೋವಿಡ್ ಪರಿಹಾರ ಕಾರ್ಯಕ್ರಮವನ್ನು ಬೆಂಬಲಿಸೋಣ. ನೀವು ಭಾರತದ ಕೆಲವು ಅತ್ಯುತ್ತಮ ಗ್ರ್ಯಾನ್‌ಮಾಸ್ಟರ್‌ಗಳೊಂದಿಗೆ ಆಡಬಹುದು. ಚೆಸ್ ಡಾಟ್ ಕಾಮ್ ನಿಮ್ಮ ದೇಣಿಗೆಗಳನ್ನು ಸಂಗ್ರಹಿಸುತ್ತಿದೆ. ದಯವಿಟ್ಟು ಈ ಗುರುವಾರ ಚೆಕ್‌ವೆುàಟ್ ಕೋವಿಡ್‌ನಲ್ಲಿ ಭಾಗವಹಿಸಲು ಸೈನ್ ಅಪ್ ಮಾಡಿ. ಇದು ನಮ್ಮ ಚೆಸ್ ಭಾÅತೃತ್ವದ ಸಣ್ಣ ಕೊಡುಗೆಯಾಗಿದೆ’ ಎಂದು ಆನಂದ್ ವಿನಂತಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.