ಆನ್ಲೈನ್ ಟಾಸ್ಕ್: ವಂಚನೆ
Team Udayavani, Jun 17, 2023, 5:31 AM IST
ಮಂಗಳೂರು: ಗೂಗಲ್ನಲ್ಲಿ ರಿವ್ಯೂ ಟಾಸ್ಕ್ ಮಾಡಲು ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಕಮಿಷನ್ ನೀಡುವುದಾಗಿ ವ್ಯಕ್ತಿಯೊಬ್ಬರಿಗೆ 1.15 ಲಕ್ಷ ರೂ. ಆನ್ಲೈನ್ ಮೂಲಕ ವಂಚನೆ ಎಸಗಿರುವ ಪ್ರಕರಣ ಇಲ್ಲಿನ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ದೂರುದಾರರ ಫೋನ್ಗೆ ಜೂ. 6ರಂದು ಯಾರೋ ಅಪರಿಚಿತ ವ್ಯಕ್ತಿ ವಾಟ್ಸ್ ಆ್ಯಪ್ ನಂಬರ್ 8964029717 ಇದರಿಂದ ವಾಟ್ಸ ಆ್ಯಪ್ ಸಂದೇಶ ಕಳುಹಿಸಿ ಆನ್ಲೈನ್ ಗೂಗಲ್ ರಿವ್ಯೂ ಕೆಲಸ ಮಾಡಿದರೆ ಕಮಿಷನ್ ನೀಡುವುದಾಗಿ ತಿಳಿಸಿ ಆನ್ಲೈನ್ ಗೂಗಲ್ ರಿವೀವ್ ಟಾಸ್ಕ್ ಟೆಲಿಗ್ರಾಂ ಲಿಂಕ್ ಕಳುಹಿಸಿದ್ದ. ಅನಂತರ ದೂರುದಾರರು ಆ ಲಿಂಕ್ ಮುಖಾಂತರ ಟಾಸ್ಕ್ ಎಂಬ ಟೆಲಿಗ್ರಾಂ ಗ್ರೂಪ್ ಸೇರಿದ್ದರು. ಆ ಗ್ರೂಪ್ನಲ್ಲಿ ಗೂಗಲ್ ರಿವ್ಯೂ ಟಾಸ್ಕ್ಗಳನ್ನು ಕಳುಹಿಸಲಾಗಿದ್ದು, ದೂರುದಾರರು ಮೂರು ಟಾಸ್ಕ್ಗಳನ್ನು ಪೂರ್ಣಗೊಳಿಸಿದ್ದರು. ಅವರಿಗೆ ಒಂದು ಟಾಸ್ಕ್ಗೆ 50 ರೂ.ನಂತೆ ಒಟ್ಟು 150 ರೂ. ಮೊತ್ತವನ್ನು ಪಾವತಿಸಲಾಯಿತು.
ಅನಂತರ ದೂರುದಾರರಿಗೆ ಬೇರೆ ಬೇರೆ ರೀತಿಯ ಗೂಗಲ್ ರಿವ್ಯೂ ಟಾಸ್ಕ್ಗಳನ್ನು ಕಳುಹಿಸಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಕಮಿಷನ್ ನೀಡುವುದಾಗಿ ತಿಳಿಸಿದ್ದರು. ಅದನ್ನು ನಿಜವೆಂದು ನಂಬಿಕೊಂಡು ಜೂ. 7ರಂದು ದೂರುದಾರರು ತಮ್ಮ ಬ್ಯಾಂಕ್ ಖಾತೆಯಿಂದ ಮೊದಲಿಗೆ 7,000 ರೂ., ಆ ಬಳಿಕ 8, 9ರಂದು ತಮ್ಮ ವಿವಿಧ ಖಾತೆಗಳಿಂದ ಹಂತ ಹಂತವಾಗಿ ಹಣ ಪಾವತಿಸಿದ್ಧಾರೆ. ಒಟ್ಟಾರೆಯಾಗಿ 1,15,180 ರೂ.ಗಳನ್ನು ಮೋಸದಿಂದ ಪಾವತಿಸಿಕೊಂಡು ಆನ್ಲೈನ್ ವಂಚನೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kinnigoli: ಕೃತಕ ನೆರೆ ಸಮಸ್ಯೆಗೆ ಪರಿಹಾರ
Mangaluru: ಗುಜ್ಜರಕೆರೆ ನೀರು ಬಳಕೆ ಯೋಗ್ಯವಲ್ಲ; ಪ್ರಯೋಗಾಲಯ ವರದಿಯಿಂದ ಮತ್ತೆ ಸಾಬೀತು
ಆರ್ಯಭಟ ಗಣಿತ ಪರೀಕ್ಷೆ; ಸಾಧನೆಗೈದ ಡಿ.ಪಿ.ಎಸ್. ಶಾಲೆಯ ವಿದ್ಯಾರ್ಥಿಗಳು
Mangaluru ಕಂಬಳ ಸಮಯ ನಿರ್ವಹಣೆಗೆ 2 ದಿನ ಪ್ರತ್ಯೇಕ ಸ್ಪರ್ಧೆ!
Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.