ಅಭಿವೃದ್ಧಿಯ ಎಂಜಿನ್ BJP ಮಾತ್ರ: ಪ್ರಧಾನಿ ಮೋದಿ
Team Udayavani, May 1, 2023, 5:57 AM IST
ರಾಮನಗರ: ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ವಿರುದ್ಧ ವಾಗ್ಧಾಳಿ ಮುಂದುವರಿಸಿದ ಪ್ರಧಾನಿ ನರೇಂದ್ರ ಮೋದಿ, ರಾಜ್ಯದ ಅಭಿವೃದ್ಧಿಯ ಎಂಜಿನ್ ಕೇವಲ ಬಿಜೆಪಿ ಮಾತ್ರ. ಈ ಬಾರಿಯ ಚುನಾವಣೆಯಲ್ಲಿ ಡಬ್ಬಲ್ ಎಂಜಿನ್ ಸರಕಾರವನ್ನು ಗೆಲ್ಲಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.
ಚನ್ನಪಟ್ಟಣ ತಾಲೂಕಿನ ಮತ್ತೀಕೆರೆ ಶೆಟ್ಟಿಹಳ್ಳಿ ಬಳಿ ನಡೆದ ಬಿಜೆಪಿಯ ನವ ಕರ್ನಾಟಕ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಪಕ್ಷಗಳು ನೋಡಲು ಇಲ್ಲಿ ಬೇರೆಯಾಗಿ ಕಂಡರೂ, ದಿಲ್ಲಿಯಲ್ಲಿ ಜತೆಯಲ್ಲಿರುತ್ತವೆ. ಈ ಎರಡೂ ಪಕ್ಷಗಳು ಕೇವಲ ಎಟಿಎಂ. ರಾಜ್ಯದ ಅಭಿವೃದ್ಧಿಯ ಎಂಜಿನ್ ಕೇವಲ ಬಿಜೆಪಿ ಮಾತ್ರ. ಅಭಿವೃದ್ಧಿಯನ್ನು ರಿವರ್ಸ್ ಗೇರ್‌ನಲ್ಲಿ ತೆಗೆದುಕೊಂಡು ಹೋಗುವ ಪಕ್ಷಗಳನ್ನು ಗೆಲ್ಲಿಸಬೇಡಿ ಎಂದರು.
ರಾಜ್ಯದಲ್ಲಿ ಅಸ್ಥಿರ ಸರಕಾರದ ನಾಟಕಗಳನ್ನು ನೀವು ನೋಡಿದ್ದೀರಿ. ಒಂದು ಪಕ್ಷ 15ರಿಂದ 20 ಸೀಟು ಪಡೆದು ಕಿಂಗ್ ಮೇಕರ್ ಆಗಲು ಹವಣಿಸುತ್ತಿದೆ. ಇದಕ್ಕೆ ಅವ ಕಾಶ ನೀಡಬೇಡಿ. ಜೆಡಿಎಸ್‌ಗೆ ನೀಡುವ ಮತ ಕಾಂಗ್ರೆಸ್‌ಗೆ ನೀಡಿದಂತೆ ಎಂದರು.
ಸಾಂಸ್ಕೃತಿಕ ನಗರಿಯಲ್ಲಿ ಮೋದಿ ರೋಡ್ ಶೋ
ಮೈಸೂರು: ವಿಧಾನ ಸಭೆ ಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ರಾಜ್ಯಕ್ಕೆ ಆಗಮಿಸಿರುವ ಪ್ರಧಾನಿ ಮೋದಿ ರವಿವಾರ ಮುಸ್ಸಂಜೆ ಸಾಂಸ್ಕೃತಿಕ ನಗರಿ ಮೈಸೂರಿನ ರಾಜಬೀದಿಯಲ್ಲಿ 4 ಕಿ.ಮೀ. ರೋಡ್ ಶೋ ನಡೆಸುವ ಮೂಲಕ ಧೂಳೆಬ್ಬಿಸಿದರು. ರಾಜ ಮಾರ್ಗದ ಇಕ್ಕೆಲದಲ್ಲಿ ಜಾತಿ-ಧರ್ಮಭೇದ ಮರೆತು ಲಕ್ಷಾಂತರ ಸಂಖ್ಯೆ ಯಲ್ಲಿ ನೆರೆದಿದ್ದ ಜನತೆ ಬೀದಿ ದೀಪದ ಬೆಳಕಿನಲ್ಲಿ ಪ್ರಧಾನಿಯನ್ನು ಕಂಡು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.
ಇಂದು ಬಿಜೆಪಿ ಪ್ರಣಾಳಿಕೆ ಬಿಡುಗಡೆ
ಬೆಂಗಳೂರು: ವಿಧಾನಸಭಾ ಚುನಾವ ಣೆಯ ತನ್ನ ಪ್ರಣಾಳಿಕೆಯನ್ನು ಬಿಜೆಪಿ ಸೋಮವಾರ ಬಿಡುಗಡೆ ಮಾಡಲಿದೆ. ಪ್ರಣಾಳಿಕೆ ಸಂಬಂಧಿ ಮಾಹಿತಿ ಸಂಗ್ರಹ, ಕ್ರೋಡೀಕರಣ, ಚರ್ಚೆ, ವಿಮರ್ಶೆ ಪ್ರಕ್ರಿಯೆಗಳೆಲ್ಲ ಮುಗಿದಿದೆ. ಪಕ್ಷದ ವರಿಷ್ಠರು ಸಹ ಪ್ರಣಾಳಿಕೆಯನ್ನು ಪರಿಶೀಲಿಸಿದ್ದು, ಸಹಮತ ವ್ಯಕ್ತಪಡಿಸಿದ್ದಾರೆ. ಸೋಮವಾರ ಮಧ್ಯಾಹ್ನ ಪಕ್ಷದ ಕಚೇರಿ ಯಲ್ಲಿ ಹಿರಿಯ ನಾಯಕರ ಸಮ್ಮುಖದಲ್ಲಿ ಪ್ರಣಾಳಿಕೆ ಬಿಡುಗಡೆ ಯಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಲೂಟಿಯಲ್ಲಿ ಪಾಲು ಪಡೆಯಲು ಹವಣಿಕೆ
ಹಾಸನ: ಜೆಡಿಎಸ್ ಭದ್ರಕೋಟೆ ಹಾಸನದಲ್ಲಿ ದಳಪತಿಗಳ ವಿರುದ್ಧ ಟೀಕಾ ಪ್ರಹಾರ ನಡೆಸಿದ ಪ್ರಧಾನಿ ಮೋದಿ, ಜೆಡಿಎಸ್ ಪ್ರೈವೇಟ್ ಲಿಮಿಟೆಡ್ ಪಾರ್ಟಿ ಎಂದು ವಂಗ್ಯವಾಡಿದರು. ಜೆಡಿಎಸ್ ಅಧಿಕಾರದ ಕನಸು ಕಾಣುತ್ತಿದೆ. 15-20 ಸ್ಥಾನಗಳನ್ನು ಗೆದ್ದು ರಾಜ್ಯದ ಲೂಟಿಯಲ್ಲಿ ಪಾಲು ಪಡೆಯಲು ಹವಣಿಸುತ್ತಿದೆ ಎಂದು ಆರೋಪಿಸಿದರು.
ಬೇಲೂರಿನ ಇಬ್ಬೀಡು ಗ್ರಾಮದ ಬಳಿ ರವಿವಾರ ಏರ್ಪಡಿಸಿದ್ದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, 2018ರ ಚುನಾವಣೆಗೆ ಮೊದಲು ಕಾಂಗ್ರೆಸ್ ಮತ್ತು ಜೆಡಿಎಸ್ ಹೇಗೆ ಪರಸ್ಪರ ದೂಷಣೆ ಮಾಡಿಕೊಂಡಿದ್ದವು. ಆದರೆ ಚುನಾವಣೆ ಬಳಿಕ ಪರಸ್ಪರ ಕೈ ಜೋಡಿಸಿ ಸರಕಾರ ರಚಿಸಿದವು. ಸರಕಾರ ಪತನದ ಬಳಿಕ ಈ ಎರಡೂ ಪಕ್ಷಗಳು ನಡೆಸಿದ ಕುಸ್ತಿಯನ್ನು ರಾಜ್ಯದ ಜನರು ನೋಡಿದ್ದಾರೆ ಎಂದರು.
ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ವಿಚಿತ್ರ ಸಮಾನತೆ ಇದೆ. ದಿಲ್ಲಿಯ ಒಂದು ಕುಟುಂಬದ ಆಸ್ತಿಯಾಗಿರುವ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿ ಆಯ್ಕೆ, ಮುಖ್ಯಮಂತ್ರಿ ಆಯ್ಕೆಯೂ ದಿಲ್ಲಿಯ ಕುಟುಂಬವೇ ತೀರ್ಮಾನಿಸುತ್ತದೆ. ಜೆಡಿಎಸ್ ಕೂಡ ರಾಜ್ಯದಲ್ಲಿ ತನ್ನ ಕುಟುಂಬದ ರಾಜಕೀಯ ಶಕ್ತಿಯನ್ನು ಗಟ್ಟಿಗೊಳಿಸುವ ಕಾರ್ಯಸೂಚಿಯನ್ನು ವ್ಯವಸ್ಥಿತವಾಗಿ ಜಾರಿಗೊಳಿಸಲು ಪ್ರಯತ್ನಿಸುತ್ತಿದೆ. ಆದರೆ ಬಿಜೆಪಿ ಮಾತ್ರ ಜನ ಸಾಮಾನ್ಯರನ್ನು, ಸಮಸ್ತ ಜನರನ್ನು ತನ್ನ ಕುಟುಂಬ ಎಂದು ಪರಿಗಣಿಸಿದೆ ಎಂದರು.
ಕಾಂಗ್ರೆಸ್‌ನದು ಶೇ. 85 ಕಮಿಷನ್ ಸರಕಾರ
ಕೋಲಾರ: ಕಾಂಗ್ರೆಸ್ ಭ್ರಷ್ಟಾಚಾರವನ್ನು ಎಂದಿಗೂ ವಿರೋಧಿಸುವುದಿಲ್ಲ. ಯಾಕೆಂದರೆ ಕಾಂಗ್ರೆಸ್‌ನ ಪ್ರತಿಯೊಂದು ಯೋಜನೆಯಲ್ಲೂ ಭ್ರಷ್ಟಾಚಾರ ಅಡಗಿದೆ. ದೇಶದ ಜನರ ನಂಬಿಕೆ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಶೇ. 85 ಕಮಿಷನ್ ಸರಕಾರವಾಗಿತ್ತು ಎಂಬುದನ್ನು ಆ ಪಕ್ಷದಿಂದ ಪ್ರಧಾನಿಯಾಗಿದ್ದ ನೇತಾರರೇ ಒಪ್ಪಿಕೊಂಡಿದ್ದಾರೆಂದು ಪ್ರಧಾನಿ ಮೋದಿ ಟೀಕಾಪ್ರಹಾರ ನಡೆಸಿದರು.
ತಾಲೂಕಿನ ಕೆಂದಟ್ಟಿಯಲ್ಲಿ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದ ವಿಕಾಸಕ್ಕೆ ಕಂಟಕವಾದ ಕಾಂಗ್ರೆಸ್, ಜೆಡಿಎಸ್‌ನಿಂದ ಉದ್ಧಾರ ಅಸಾಧ್ಯ. ಆದ್ದರಿಂದ ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರಕಾರ ಆಗಿರಲಿ ಎಂದು ಕರೆ ನೀಡಿದರು. ಕೇಂದ್ರದ ಬಿಜೆಪಿ ಸರಕಾರ ಎಷ್ಟು ಹಣ ನೀಡುತ್ತದೋ ಅದು ಶೇ.100ರಷ್ಟು ಜನ ರಿಗೆ ತಲುಪುತ್ತಿದೆ. ಕಳೆದ 9 ವರ್ಷಗಳಿಂದ ಡಿಜಿಟಲ್ ಇಂಡಿಯಾ ಯೋಜನೆ ಗಳ ಮೂಲಕ 29 ಲಕ್ಷ ಕೋಟಿ ರೂ.ಗಳನ್ನು ಫಲಾನುಭವಿಗಳ ಖಾತೆಗೆ ಹಾಕಲಾಗಿದೆ. ಆದರೆ 9 ವರ್ಷಗಳ ಹಿಂದೆ ಕಾಂಗ್ರೆಸ್ ಸರಕಾರವಿದ್ದಾಗ ಶೇ.15ರಷ್ಟು ಮಾತ್ರ ಜನರಿಗೆ ತಲುಪುತ್ತಿತ್ತು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.