ನೀರಿನ ಬವಣೆ ನೀಗಿಸಲು ಪೊಸ್ರಾಲು ಬಳಿ ತೆರೆದ ಬಾವಿ

Team Udayavani, Apr 6, 2021, 3:35 AM IST

ನೀರಿನ ಬವಣೆ ನೀಗಿಸಲು ಪೊಸ್ರಾಲು ಬಳಿ ತೆರೆದ ಬಾವಿ

ಬೆಳ್ಮಣ್‌ : 24×7 ನೀರು ಪೂರೈಕೆಯ ಮೂಲಕ ಜಿಲ್ಲೆಯಲ್ಲಿಯೇ ಮಾದರಿ ಪಂಚಾಯತ್‌ ಎಂಬ ಹೆಗ್ಗಳಿಕೆೆಗೆ ಪಾತ್ರವಾದ ಮುಂಡ್ಕೂರು ಗ್ರಾ. ಪಂ.ನ ನೀರು ಪೂರೈಕೆ ವ್ಯವಸ್ಥೆಗೆ ಇನ್ನೊಂದು ಗರಿ ಮೂಡಿದೆ. ಸ್ವಜಲಧಾರಾ ಯೋಜನೆಯ ಮೂಲಕ ಪೊಸ್ರಾಲು ಶಾಂಭವಿ ನದಿ ತಟದಲ್ಲಿ ಮತ್ತೂಂದು ಬೃಹತ್‌ ಬಾವಿಯೊಂದನ್ನು ನಿರ್ಮಿಸುವ ಮೂಲಕ ಇಡೀ ಗ್ರಾಮದ ಜನರ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಮುಂದಾಗಿದೆ.

ನೀರಿನ ಸಮಸ್ಯೆಗೆ ಕೊಳವೆ ಬಾವಿಯೊಂದೇ ಪರಿಹಾರ ಎನ್ನುವ ಕಾಲಘಟ್ಟದಲ್ಲಿ ಮುಂಡ್ಕೂರು ಗ್ರಾ. ಪಂ. ಅದಕ್ಕೆ ಪರ್ಯಾಯವಾಗಿ ನದಿ ತಟದಲ್ಲಿ ತೆರೆದ ಬಾವಿ ತೋಡಿ ಇಡೀ ಗ್ರಾಮಕ್ಕೆ ನೀರೊದಗಿಸುವ ಪ್ರಯತ್ನಕ್ಕೆ ಕೈ ಹಾಕಿದೆ.
ಈಗಾಗಲೇ ಮುಂಡ್ಕೂರು ಅಲಂಗಾರು ಬಳಿ ಶಾಂಭವಿ ನದಿ ಪಕ್ಕ ಬೃಹತ್‌ ಬಾವಿ ತೋಡಿ ಪಂಚಾಯತ್‌ನ ಬಹುತೇಕ ಮನೆಗಳಿಗೆ ನೀರೊದಗಿಸಿ ಮನೆ ಮಾತಾಗಿದ್ದರೆ ಇದೀಗ ಪೊಸ್ರಾಲುವಿನ ಬಾವಿ ಸಚ್ಚೇರಿಪೇಟೆ, ಪೊಸ್ರಾಲು, ಬೆನೊìಟ್ಟು, ಆಲಂಗಾರುಗುಡ್ಡೆ, ಬೊಮ್ಮಯ ಲಚ್ಚಿಲ್‌, ಸನಿಲ್‌ ನಗರ, ಆಳಗುಂಡಿ, ಸಚ್ಚೇರಿಪೇಟೆ, ಕುದ್ರಬೆಟ್ಟು, ಪೊಣ್ಣೆದು ಹಾಗೂ ಕಜೆ ಮಾರಿಗುಡಿ ಗಾಂದಡು³ ಭಾಗದ ಜನರ ನೀರಿನ ಬವಣೆ ನೀಗಿಸಲಿದೆ.

12.5 ಲಕ್ಷ ರೂ. ವೆಚ್ಚದ ಬಾವಿ
ಪೊಸ್ರಾಲು ಶಾಂಭವಿ ನದಿಯ ಸಮೀಪ ಈ ಬಾವಿಯು ಸುಮಾರು 12.5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ. ಪಂಚಾಯತ್‌ನ ಹದಿನಾಲ್ಕನೇಯ ಹಣಕಾಸು ಯೋಜನೆಯಲ್ಲಿ ಸುಮಾರು 7.5 ಲಕ್ಷ ರೂ. ಅನುದಾನ ಹಾಗೂ ಉಳಿದ ಮೊತ್ತವನ್ನು ಪಂಚಾಯತ್‌ ನಿಧಿಯಿಂದ ಬಳಕೆ ಮಾಡಿಕೊಂಡು ಇಡೀ ಗ್ರಾಮಕ್ಕೆ ಅನುಕೂಲಕರವಾಗುವ ಬೃಹತ್ ಬಾವಿ ನಿರ್ಮಾಣದ ಕಾಮಗಾರಿ ನಡೆಯುತ್ತಿದೆ. ಇಲ್ಲಿನ ಕಾಮಗಾರಿ ಪೂರ್ಣಗೊಂಡ ಬಳಿಕ ಈ ಭಾಗದ ಗ್ರಾಮಸ್ಥರಿಗೆ ಶುದ್ದ ಕುಡಿಯುವ ನೀರನ್ನು ಪಂಚಾಯತ್‌ ವತಿಯಿಂದ ಮನೆ ಮನೆ ಪೂರೈಸಲಾಗುವುದು ಎಂದು ಯೋಜನೆಯ ರೂವಾರಿ ಸತ್ಯಶಂಕರ ಶೆಟ್ಟಿ ತಿಳಿಸಿದ್ದಾರೆ.

ತೆರೆ‌ದ ಬಾವಿ
17 ಅಡಿಯ ಬಾವಿ ಈಗಾಗಲೇ ನಿರ್ಮಾಣಗೊಂಡಿದ್ದು ಬಾವಿಯಲ್ಲಿ ನೀರು ಒರತೆ ತುಂಬಿ ತುಳುಕುತ್ತಿದೆ.
ಇನ್ನೂ ಆಳವಾಗಿ ಈ ಬಾವಿಯನ್ನು ನಿರ್ಮಿಸಿದಲ್ಲಿ ಸುಮಾರು 4 ಪಂಪ್‌ ಸೆಟ್‌ ಇಟ್ಟು ಇಡೀ ಗ್ರಾಮಕ್ಕೆ ನೀರು ನೀಡಬಹುದು ಎನ್ನುವುದು ಇಲ್ಲಿನ ಜನರ ಅನಿಸಿಕೆ. ಪರಿಸರಕ್ಕೆ ಪೂರೈಕೆಯನ್ನು ನೀಡಲಿದೆ.

ಬಾವಿ ನಿರ್ಮಾಣಕ್ಕೆ ಜಮೀನು ನೀಡಿದ ಕೃಷಿಕ
ಪೊಸ್ರಾಲು ಶಾಂಭವಿ ನದಿಯ ತಟದಲ್ಲಿ ಬಾವಿಯೊಂದನ್ನು ನಿರ್ಮಿಸಲು ಇಲ್ಲಿನ ಪ್ರಗತಿಪರ ಕೃಷಿಕ ಹಾಗೂ ಸಮಾಜಸೇವಕ ಕಡಪುಕರಿಯ ಜಯರಾಮ ಶೆಟ್ಟಿಯವರು ತಮ್ಮ ಸ್ವಂತ ಜಮೀನಿನಲ್ಲಿ ಜಾಗ ನೀಡಿದ್ದಾರೆ.

ನೀರಿನ ಸಮಸ್ಯೆಗೆ ಮುಕ್ತಿ
24×7 ನೀರು ಪೂರೈಕೆ ಮುಂಡ್ಕೂರು ಗ್ರಾ.ಪಂ.ನ ಮೂಲ ಮಂತ್ರ. ತೆರೆದ ಬಾವಿಯ ಮೂಲಕ ಇಡೀ ಗ್ರಾ. ಪಂ.ಗೆ ನೀರುಣಿಸಬೇಕೆಂಬುದೇ ನಮ್ಮ ಮೂಲ ಉದ್ದೇಶ. ಈ ಸದುದ್ದೇಶಕ್ಕೆ ಜಯರಾಮ ಶೆಟ್ಟಿಯಂತವರು ಸಹಕರಿಸಿದ ಪರಿಣಾಮ ಯಶಸ್ಸು ಕಂಡಿದ್ದೇವೆ. ಈ ಬಾವಿಯಿಂದ ಮುಂಡ್ಕೂರಿನ ಸಾಕಷ್ಟು ಭಾಗದ ನೀರಿನ ಸಮಸ್ಯೆಗೆ ಶಾಶ್ವತ ಮುಕ್ತಿ ದೊರಕಲಿದೆ. -ಸತ್ಯಶಂಕರ ಶೆಟ್ಟಿ,, ಮುಂಡ್ಕೂರು ಗ್ರಾಮ ಪಂಚಾಯತ್‌ನ ಸದಸ್ಯ

ಸದುದ್ದೇಶ ಯೋಜನೆಗೆ ಸಹಾಯ
ಇಡೀ ಊರಿನ ಜನರಿಗೆ ಉಪಯೋಗವಾಗುವ ಯೋಜನೆಯಾದ್ದರಿಂದ ನಮ್ಮ ಸ್ವಂತ ಜಾಗದಲ್ಲಿ ಬಾವಿ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ. ಪಂಚಾಯತ್‌ನ ಸದುದ್ದೇಶಿತ ಯೋಜನೆಗೆ ನಾವು ಕೈಜೋಡಿಸಿದ್ದೇವೆ.
-ಪೊಸ್ರಾಲು ಕಡಪುಕರಿಯ ಜಯರಾಮ ಶೆಟ್ಟಿ, ಕೃಷಿಕ

ಟಾಪ್ ನ್ಯೂಸ್

Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ

Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ

Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ

Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ

Kundapura: “ಅವರು ಪ್ರತೀ ದಿನ ಫೋನ್‌ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’

Kundapura: “ಅವರು ಪ್ರತೀ ದಿನ ಫೋನ್‌ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’

Pushpa 2: 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ

Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ

Uttar Pradesh: ಸಂಭಲ್‌ನ ಪ್ರಾಚೀನ ಬಾವಿಯ ಉತ್ಖನನ, ನವೀಕರಣಕ್ಕೆ ಚಾಲನೆ

Uttar Pradesh: ಸಂಭಲ್‌ನ ಪ್ರಾಚೀನ ಬಾವಿಯ ಉತ್ಖನನ, ನವೀಕರಣಕ್ಕೆ ಚಾಲನೆ

Uttarakhand ಹೈಕೋರ್ಟ್‌ ಸಿ.ಜೆ. ಆಗಿ ನರೇಂದ್ರ ಪ್ರಮಾಣ ವಚನ ಸ್ವೀಕಾರ

Uttarakhand ಹೈಕೋರ್ಟ್‌ ಸಿ.ಜೆ. ಆಗಿ ನರೇಂದ್ರ ಪ್ರಮಾಣ ವಚನ ಸ್ವೀಕಾರ

PM Modi: ತಂತ್ರಜ್ಞಾನವನ್ನು ಅರಿತು ಅಳವಡಿಸಿಕೊಳ್ಳಬೇಕು: ಯವಜನಕ್ಕೆ ಮೋದಿ ಕರೆ

PM Modi: ತಂತ್ರಜ್ಞಾನವನ್ನು ಅರಿತು ಅಳವಡಿಸಿಕೊಳ್ಳಬೇಕು: ಯವಜನಕ್ಕೆ ಮೋದಿ ಕರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಶ್ರೀ ಕೃಷ್ಣಮಠಕ್ಕೆ ಮಾಜಿ ಕ್ರಿಕೆಟಿಗ ವಿ.ವಿ.ಎಸ್‌. ಲಕ್ಷ್ಮಣ್‌ ಭೇಟಿ

Udupi: ಶ್ರೀ ಕೃಷ್ಣಮಠಕ್ಕೆ ಮಾಜಿ ಕ್ರಿಕೆಟಿಗ ವಿ.ವಿ.ಎಸ್‌. ಲಕ್ಷ್ಮಣ್‌ ಭೇಟಿ

Padubidri: ಕಾರು ಢಿಕ್ಕಿ; ಪಾದಚಾರಿ ಸಾವು

Padubidri: ಕಾರು ಢಿಕ್ಕಿ; ಪಾದಚಾರಿ ಸಾವು

accident

Shirva: ರಿಕ್ಷಾ ಢಿಕ್ಕಿ; ಸ್ಕೂಟರ್‌ ಸವಾರನಿಗೆ ಗಾಯ

7

Manipal: ಅಪಘಾತ ತಡೆಯಲು ಹೀಗೆ ಮಾಡಿ!

6

ಒಲವಿನ ಊಟಕ್ಕೆ ಅಕ್ಕಂದಿರು ಸಿದ್ಧ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ

Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ

Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ

Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ

Kundapura: “ಅವರು ಪ್ರತೀ ದಿನ ಫೋನ್‌ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’

Kundapura: “ಅವರು ಪ್ರತೀ ದಿನ ಫೋನ್‌ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’

Pushpa 2: 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ

Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ

Uttar Pradesh: ಸಂಭಲ್‌ನ ಪ್ರಾಚೀನ ಬಾವಿಯ ಉತ್ಖನನ, ನವೀಕರಣಕ್ಕೆ ಚಾಲನೆ

Uttar Pradesh: ಸಂಭಲ್‌ನ ಪ್ರಾಚೀನ ಬಾವಿಯ ಉತ್ಖನನ, ನವೀಕರಣಕ್ಕೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.