ನಾಲ್ವರನ್ನು ಬಲಿ ಪಡೆದ ಹುಲಿ ಹತ್ಯೆಗಾಗಿ ‘ಆಪರೇಷನ್ ಎಂಡಿಟಿ 23’ !
Team Udayavani, Oct 2, 2021, 4:13 PM IST
ಸಾಂದರ್ಭಿಕವಾಗಿ ಹುಲಿಯ ಚಿತ್ರ
ನೀಲಗಿರಿ : ತಮಿಳುನಾಡಿನ ನೀಲಗಿರಿ ಜಿಲ್ಲೆಯ ಗುಡಲೂರು ಅರಣ್ಯ ವ್ಯಾಪ್ತಿಯಲ್ಲಿ ನಾಲ್ವರನ್ನು ಬಲಿ ಪಡೆದಿರುವ ನರಭಕ್ಷಕ ಹುಲಿಯ ಹತ್ಯೆಗಾಗಿ ಶುಕ್ರವಾರದಿಂದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಭಾರೀ ಕಾರ್ಯಾಚರಣೆ ಆರಂಭಿಸಿದ್ದಾರೆ.
ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ವನ್ಯಜೀವಿ ವಾರ್ಡನ್ ಆಗಿರುವ ಡಾ. ಶೇಖರ್ ಅವರು ಹುಲಿಯ ಬೇಟೆಗಾಗಿ 1972 ರ ಅರಣ್ಯ ಕಾಯಿದೆ, ಸೆಕ್ಷನ್ 11 (ಎ ) ಅಡಿಯಲ್ಲಿ ಆದೇಶ ನೀಡಿದ್ದಾರೆ.
ಉಡಗಮಂಡಲಂ ಅರಣ್ಯ ವ್ಯಾಪ್ತಿಯಲ್ಲಿ ಭಾರಿ ಕಾರ್ಯಾಚಣೆ ನಡೆಸಲಾಗುತ್ತಿದ್ದು, ನರಭಕ್ಷಕ ಹುಲಿಗೆ ಎಂಡಿಟಿ 23 ಎಂದು ಹೆಸರಿಡಲಾಗಿದೆ.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಇಡೀ ಕಾರ್ಯಾಚರಣೆ ಅತ್ಯಂತ ಸೂಕ್ಷ್ಮವಾಗಿ ನಡೆಸಲಾಗುತ್ತಿದ್ದು , ಕೇರಳದ ನುರಿತ ಅರಣ್ಯ ಸಿಬ್ಬಂದಿಗಳ ತಂಡ ಮತ್ತು ವಿಶೇಷ ಕಾರ್ಯಪಡೆಯಿಂದ ಸಹಾಯ ಪಡೆದುಕೊಳ್ಳಲಾಗಿದೆ.
ಸಂಪೂರ್ಣ ಕಾರ್ಯಾಚರಣೆಯ ವಿಡಿಯೋ ಚಿತ್ರೀಕರಣ ಮತ್ತು ಫೋಟೋಗ್ರಫಿಯನ್ನೂ ಮಾಡಲಾಗುತ್ತಿದೆ.
ಕಳೆದ ಒಂದು ವಾರದಿಂದ ಹುಲಿಯನ್ನು ಜೀವಂತವಾಗಿ ಸೆರೆ ಹಿಡಿಯಲು ನಡೆಸಿದ ಪ್ರಯತ್ನ ಫಲ ನೀಡಿರಲಿಲ್ಲ.
ಸೆಪ್ಟೆಂಬರ್ 24 ರಂದು ದಾನ ಮೇಯಿಸುತ್ತಿದ್ದ 56 ವರ್ಷದ ವ್ಯಕ್ತಿಯೊಬ್ಬರ ಮೇಲೆ ಹುಲಿ ದಾಳಿ ಮಾಡಿತ್ತು, ಆದರೆ ಅರಣ್ಯ ಸಿಬ್ಬಂದಿ ಅವರನ್ನು ರಕ್ಷಿಸಿದ್ದರಾದರೂ ಆಸ್ಪತ್ರೆಗೆ ಸಾಗಿಸುವ ವೇಳೆ ಕೊನೆಯುಸಿರೆಳೆದಿದ್ದರು. ಒಟ್ಟು ನಾಲ್ವರು ವ್ಯಕ್ತಿಗಳು ಸೇರಿ ೨೦ ಕ್ಕೂ ಹೆಚ್ಚು ಸಾಕು ಪ್ರಾಣಿಗಳನ್ನು ಹುಲಿ ಭಕ್ಷಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.