ಭಾರತಕ್ಕೆ ಡಬಲ್ ಸಂಭ್ರಮ ತಂದ ಆಸ್ಕರ್ 95: ಇಲ್ಲಿದೆ ನೋಡಿ ಆಸ್ಕರ್ ವಿಜೇತರ ಸಂಪೂರ್ಣ ಪಟ್ಟಿ
Team Udayavani, Mar 13, 2023, 3:54 PM IST
ಲಾಸ್ ಏಂಜಲೀಸ್: ಸಿನೆಮಾ ಕ್ಷೇತ್ರದಲ್ಲೇ ಅತ್ಯಂತ ಪ್ರತಿಷ್ಟಿತ ಎನಿಸಿಕೊಂಡಿರುವ ಆಸ್ಕರ್ ಪ್ರಶಸ್ತಿ ಪಟ್ಟಿಯಲ್ಲಿ ಈ ಬಾರಿ ಭಾರತವೂ ಸೇರಿಕೊಂಡಿದೆ. ಭಾರತದ RRR ಮತ್ತುʻದಿ ಎಲಿಫೆಂಟ್ ವಿಸ್ಪರರ್ಸ್ʼ ಸೇರಿ ವಿವಿಧ ವಿಭಾಗಗಳಲ್ಲಿ ಬೇರೆ ಬೇರೆ ಚಿತ್ರಗಳು 95 ನೇ ಆಸ್ಕರ್ ಅಕಾಡಮಿ ಪ್ರಶಸ್ತಿಗೆ ಭಾಜನವಾಗಿದೆ.
ಭಾನುವಾರ ಸಂಜೆ ಲಾಸ್ ಏಂಜಲೀಸ್‌ನ ಹಾಲಿವುಡ್‌ನ ಡಾಲ್ಬಿ ಥೀಯೆಟರ್‌ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಪ್ರತಿಷ್ಟಿತ ಆಸ್ಕರ್ ಅವಾರ್ಡ್ 2023 ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ. ಇದರಲ್ಲಿ ʻಎವರಿಥಿಂಗ್ ಎವರಿವೇರ್ ಆಲ್ ಅಟ್ ವನ್ಸ್ʼ ಚಿತ್ರ 95ನೇ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಚಿತ್ರ ಎಂಬ ಖ್ಯಾತಿಗೆ ಪಾತ್ರವಾಯಿತು.
ಅದರ ಜೊತೆಗೆ ಈ ಬಾರಿಯ ಆಸ್ಕರ್ ಪ್ರಶಸ್ತಿ ಸಮಾರಂಭ ಭಾರತದ ಪಾಲಿಗೆ ಅತ್ಯಂತ ಸಂಭ್ರಮದ ಸಮಾರಂಭವಾಗಿತ್ತು. ರಾಜಮೌಳಿ ನಿರ್ದೇಶದ RRR ಚಿತ್ರದ ʻನಾಟು ನಾಟುʼ ಹಾಡಿಗೆ ಆಸ್ಕರ್ ಪ್ರಶಸ್ತಿ ಒಲಿದು ಬಂದಿದೆ. ಈ ಹಾಡನ್ನು ಚಂದ್ರಬೋಸ್ ಅವರು ಬರೆದಿದ್ದು, ಎಂ.ಎಂ. ಕೀರವಾಣಿ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿದೆ. ಅತ್ಯುತ್ತಮ ಒರಿಜಿನಲ್ ಸಾಂಗ್ ವಿಭಾಗದಲ್ಲಿ ʻನಾಟು ನಾಟುʼ ಪ್ರಶಸ್ತಿ ಗೆದ್ದು ಬೀಗಿದೆ.
ಅದೂ ಅಲ್ಲದೇ, ತಮಿಳಿನ ʻ ದಿ ಎಲಿಫೆಂಟ್ ವಿಸ್ಪರರ್ಸ್ʼ ಸಾಕ್ಷ್ಯಚಿತ್ರ ವಿಭಾಗದಲ್ಲಿ ಪ್ರಶಸ್ತಿ ಪಡೆದಿದ್ದು, ಇದೇ ಮೊದಲ ಬಾರಿಗೆ ಆಸ್ಕರ್ ವೇದಿಕೆ ಭಾರತದ ಪಾಲಿಗೆ ಡಬಲ್ ಸಂಭ್ರಮ ನೀಡಿದೆ.
ಆಸ್ಕರ್ ಅವಾರ್ಡ್ 2023 ಯ ಎಲ್ಲಾ ವಿಭಾಗದ ಪ್ರಶಸ್ತಿ ಪುರಸ್ಕೃತರ ಪಟ್ಟಿ
- ಅತ್ಯುತ್ತಮ ಚಿತ್ರ: ʻಎವರಿಥಿಂಗ್ ಎವರಿವೇರ್ ಆಲ್ ಅಟ್ ವನ್ಸ್ʼ
- ಅತ್ಯುತ್ತಮ ನಿರ್ದೇಶಕ : ಡೇನಿಯಲ್ ಕ್ವಾನ್ ಮತ್ತು ಡೇನಿಯಲ್ ಸ್ಕೀನೆರ್ಟ್ (ಎವರಿಥಿಂಗ್ ಎವರಿವೇರ್ ಆಲ್ ಅಟ್ ವನ್ಸ್)
- ಅತ್ಯುತ್ತಮ ನಟ: ಬ್ರೆಂಡನ್ ಫ್ರೇಸರ್ (ದಿ ವೇಲ್)
- ಅತ್ಯುತ್ತಮ ನಟಿ : ಮಿಶೆಲ್ ಯೋಹ್ (ಎವರಿಥಿಂಗ್ ಎವರಿವೇರ್ ಆಲ್ ಅಟ್ ವನ್ಸ್)
- ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ: ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್ (ಜರ್ಮನಿ)
- ಅತ್ಯುತ್ತಮ ಪೋಷಕ ನಟ : ಕೆ. ಹುಯ್ ಕ್ವಾನ್ (ಎವರಿಥಿಂಗ್ ಎವರಿವೇರ್ ಆಲ್ ಅಟ್ ವನ್ಸ್)
- ಅತ್ಯುತ್ತಮ ಪೋಷಕ ನಟಿ: ಜೇಮಿ ಲೀ ಕರ್ಟಿಸ್ (ಎವರಿಥಿಂಗ್ ಎವರಿವೇರ್ ಆಲ್ ಅಟ್ ವನ್ಸ್)
- ಅತ್ಯುತ್ತಮ ಹಾಡು: ನಾಟು ನಾಟು (RRR – ತೆಲುಗು)
- ಅತ್ಯುತ್ತಮ ವಿಷ್ಯುವಲ್ ಎಫೆಕ್ಟ್ :ಅವತಾರ್- ದಿ ವೇ ಆಫ್ ವಾಟರ್
- ಅತ್ಯುತ್ತಮ ಧ್ವನಿ ವಿನ್ಯಾಸ : ಟಾಪ್ ಗನ್ -ಮೇವರಿಕ್
- ಅತ್ಯುತ್ತಮ ಸಂಕಲನ: ಪೌಲ್ ರಾಗರ್ಸ್ (ಎವರಿಥಿಂಗ್ ಎವರಿವೇರ್ ಆಲ್ ಅಟ್ ವನ್ಸ್)
- ಅತ್ಯುತ್ತಮ ಛಾಯಾಗ್ರಹಣ: ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್
- ಅತ್ಯುತ್ತಮ ಮೂಲ ಕಥೆ: ಎವರಿಥಿಂಗ್ ಎವರಿವೇರ್ ಆಲ್ ಅಟ್ ವನ್ಸ್
- ಅತ್ಯುತ್ತಮ ಸಾಕ್ಷ್ಯಚಿತ್ರ: ನವಲ್ನಿ
- ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ: ದಿ ಎಲಿಫೆಂಟ್ ವಿಸ್ಪರರ್ಸ್ (ತಮಿಳು)
- ಅತ್ಯುತ್ತಮ ಕೇಶ ವಿನ್ಯಾಸ ಮತ್ತು ಮೇಕಪ್: ದಿ ವೇಲ್
- ಅತ್ಯುತ್ತಮ ಆನಿಮೇಟಿಡ್ ಚಲನಚಿತ್ರ : ಗಿಲ್ಲರ್ಮೋ ಡೆಲ್ ಟೊರೋ ಅವರ ಪಿನೋಚ್ಚಿಯೋ
- ಅತ್ಯುತ್ತಮ ಅಳವಡಿಸಿದ ಚಿತ್ರಕಥೆ: ವಿಮೆನ್ ಟಾಕಿಂಗ್
- ಅತ್ಯುತ್ತಮ ಆನಿಮೇಟಿಡ್ ಕಿರುಚಿತ್ರ: ದಿ ಬಾಯ್, ದಿ ಮೋಲ್, ದಿ ಫಾಕ್ಸ್ ಆಂಡ್ ದಿ ಹಾರ್ಸ್
- ಅತ್ಯುತ್ತಮ ಉಡುಪು ವಿನ್ಯಾಸ: ಬ್ಲಾಕ್ ಪಾಂಥರ್: ವಾಕಂಡಾ ಫಾರೆವರ್
- ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್: ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್
- ಅತ್ಯುತ್ತಮ ಲೈವ್ ಆಕ್ಷನ್ ಕಿರುಚಿತ್ರ: ಆನ್ ಐರಿಷ್ ಗುಡ್ ಬೈ
- ಅತ್ಯುತ್ತಮ ಒರಿಜಿನಲ್ ಸ್ಕೋರ್ : ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿನೆಮಾ ಪೋಸ್ಟರ್ ಗಳ ಕೋಣೆಯಲ್ಲಿ-ಹಾಲಿವುಡ್ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ
IFFI 2024; ಟಾಕ್ಸಿಕ್ ಗೆ ಅತ್ಯುತ್ತಮ ಪ್ರಶಸ್ತಿ, ವಿಕ್ರಾಂತ್ ಮಸ್ಸೆಗೆ ವಾರ್ಷಿಕ ಪುರಸ್ಕಾರ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.