ನಮ್ಮ ಹಕ್ಕೊತ್ತಾಯ: ಸಂಕಷ್ಟದಲ್ಲಿರುವ ದ್ರಾಕ್ಷಿ ಬೆಳೆಗಾರರಿಗೆ ತುರ್ತು ನೆರವಾಗಲಿ


Team Udayavani, Mar 25, 2023, 7:42 AM IST

grapes

~ ಡಾ| ಕೆ.ಎಚ್‌. ಮುಂಬಾರಡ್ಡಿ, ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ದ್ರಾಕ್ಷಿ ಬೆಳೆಗಾರರ ಸಂಘ, ವಿಜಯಪುರ

ಐತಿಹಾಸಿಕ ಮಹತ್ವ ಪಡೆದಿರುವ ವಿಜಯಪುರ ಜಿಲ್ಲೆಯ ರೈತರು ಶ್ರಮ ವಹಿಸಿ ದ್ರಾಕ್ಷಿ ಬೆಳೆಯುವ ಕಾರಣ ದ್ರಾಕ್ಷಿ ಕಣಜ ಎಂಬ ಅಭಿದಾನ ಲಭ್ಯವಾಗಿದೆ. ಆದರೆ ದ್ರಾಕ್ಷಿ ಕಣಜದ ಕೀರ್ತಿ ತಂದಿರುವ ರೈತರು ಮಾತ್ರ ಸಂಕಷ್ಟದಲ್ಲಿದ್ದಾರೆ.

ರಾಜ್ಯದಲ್ಲಿ ಬೆಳೆಯುವ ದ್ರಾಕ್ಷಿ ಪ್ರದೇಶದಲ್ಲಿ ಬಹುತೇಕ ಭಾಗ ವಿಜಯಪುರ ಜಿಲ್ಲೆಯಲ್ಲೇ ಇದ್ದು, 70 ಸಾವಿರ ಎಕ್ರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ರಾಜ್ಯದಲ್ಲೇ ಅತೀ ಹೆಚ್ಚು ದ್ರಾಕ್ಷಿ ಬೆಳೆದರೂ ಅದರಲ್ಲೂ ಒಣ ದ್ರಾಕ್ಷಿ ಉತ್ಪಾದಿಸಿದರೂ ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಷಡ್ಯಂತ್ರದಿಂದ ಬೆಲೆ ಏರಿಳಿತವಾಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಒಣ ದ್ರಾಕ್ಷಿ ಮಾರಾಟಕ್ಕೆ ಆನ್‌ಲೈನ್‌ ವ್ಯವಸ್ಥೆ ಇದ್ದರೂ ಸಮರ್ಥ ನಿರ್ವಹಣೆ ಇಲ್ಲದೇ ರೈತರು ವಂಚನೆಗೆ ಗುರಿಯಾಗುತ್ತಿದ್ದಾರೆ.

ಬೆಲೆ ಕುಸಿತ ಹಾಗೂ ಸಂಕಷ್ಟದ ಪರಿಸ್ಥಿತಿಯಲ್ಲಿ ಒಣ ದ್ರಾಕ್ಷಿ ಸಂರಕ್ಷಣೆಗೆ ಉತ್ಪಾದನೆಗೆ ತಕ್ಕಂತೆ ವಿಜಯಪುರ ಜಿಲ್ಲೆಯಲ್ಲಿ ಅಗತ್ಯ ಪ್ರಮಾಣದ ಶೈತ್ಯಾಗಾರ ಇಲ್ಲ. ಪರಿಣಾಮ ಜಿಲ್ಲೆಯಲ್ಲಿ ಉತ್ಪಾದನೆಯಾಗುವ ಶೇ.70 ಒಣ ದ್ರಾಕ್ಷಿಯನ್ನು ಮಹಾರಾಷ್ಟ್ರದ ಶೈತ್ಯಾಗಾರದಲ್ಲಿ ದಾಸ್ತಾನು ಮಾಡಲಾಗುತ್ತಿದೆ. ಇದರಿಂದ ರಾಜ್ಯದ ರೈತರ ಬೆವರಿನ ಫಲದ ಆದಾಯ ಅನ್ಯ ರಾಜ್ಯದ ಸರಕಾರದ ಪಾಲಾಗುತ್ತಿದೆ. ಇದನ್ನು ತಡೆಯಲು ತ್ವರಿತವಾಗಿ ಅಗತ್ಯ ಪ್ರಮಾಣದ ಶೈತ್ಯಾಗಾರ ನಿರ್ಮಾಣಕ್ಕೆ ಮುಂದಾಗಬೇಕು.

ಮಾರುಕಟ್ಟೆಯಲ್ಲಿ ಪ್ರಸ್ತುತ ಸಂದರ್ಭದಲ್ಲಿ ಎಲ್ಲ ಬೆಲೆಗಳು ಕೃಷಿಗೆ ಸಂಬಂ ಧಿಸಿದ ಎಲ್ಲ ವಸ್ತುಗಳ ಬೆಲೆ ಹೆಚ್ಚಿದ್ದು ದ್ರಾಕ್ಷಿ ಬೆಳೆಗಾರರಿಗೆ ಸಂಕಷ್ಟ ತಂದಿದೆ. ಮತ್ತೂಂದೆಡೆ ಕಾರ್ಮಿಕರ ಕೊರತೆ, ಕೂಲಿ ಹೆಚ್ಚಳದಿಂದ ದ್ರಾಕ್ಷಿ ಉತ್ಪಾದನ ವೆಚ್ಚವೂ ಸಹಜವಾಗಿ ಹೆಚ್ಚಿ, ವೆಚ್ಚಕ್ಕೆ ತಕ್ಕಂತೆ ವೈಜ್ಞಾನಿಕ ಹಾಗೂ ಸ್ಪರ್ಧಾತ್ಮಕ ಬೆಲೆ ಸಿಗದೇ ದ್ರಾಕ್ಷಿ ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ದ್ರಾಕ್ಷಿ ಉತ್ಪಾದನೆ, ರಫ್ತು ಪ್ರೋತ್ಸಾಹಕ್ಕಾಗಿ ಸರಕಾರ ವಿಶೇಷ ಯೋಜನೆ ರೂಪಿಸಬೇಕು. ದ್ರಾಕ್ಷಾ ರಸವನ್ನು ಅಬಕಾರಿ ನೀತಿಯಿಂದ ಕೈ ಬಿಟ್ಟು ಅಹಾರ ನಿಯಮದಲ್ಲಿ ಸೇರಿಸಬೇಕು. ದೇಶದಲ್ಲೇ ತೋಟಗಾರಿಕೆ-ದ್ರಾಕ್ಷಿ ಉತ್ಪಾದನೆ ಯಲ್ಲಿ ಎರಡನೇ ಸ್ಥಾನದಲ್ಲಿದ್ದರೂ ಕರ್ನಾಟಕದ ವಾಣಿಜ್ಯ ಉತ್ಪಾದನೆ, ಆದಾಯ ತರುವಲ್ಲಿ ಸಹ ಕಾರಿ ಆಗಿರುವ ದ್ರಾಕ್ಷಿ ಬೆಳೆಗಾರರಿಗೆ ಸೂಕ್ತ ಸೌಲಭ್ಯ ಕಲ್ಪಿಸುವಲ್ಲಿ ಸರಕಾರ ಕಾಳಜಿ ವಹಿಸುತ್ತಿಲ್ಲ. ಈ ಬಗ್ಗೆ ತುರ್ತಾಗಿ ನಿಗಾ ವಹಿಸಬೇಕು.
ಸರಕಾರದ ಸೌಲಭ್ಯಗಳ ಕೊರತೆ ಮಧ್ಯೆಯೂ ಹಿಡಿಕಾಳು ಬೆಳೆಯದ ಬಂಜರು ಜಮೀನಿನಲ್ಲಿ ರೈತರು ಏನೆಲ್ಲ ಸಂಕಷ್ಟಗಳನ್ನು ಎದುರಿಸಿಯೂ ವಿಜಯಪುರ ಜಿಲ್ಲೆಯಲ್ಲಿ ಬೆಳೆಯುವ ದ್ರಾಕ್ಷಿ, ಒಣ ದ್ರಾಕ್ಷಿಗೆ ಬಾಂಗ್ಲಾದೇಶ, ಅರಬ್‌ ದೇಶಗಳಲ್ಲಿ ಭಾರೀ ಬೇಡಿಕೆ ಇದೆ. ಆದರೆ ಉತ್ಪಾದಕರಿಗೆ ರಫ್ತು ಮಾಡುವ ಶಕ್ತಿ, ಇತರ ಸೌಲಭ್ಯಗಳ ಕೊರತೆ ಕಾರಣ ಮಧ್ಯವರ್ತಿಗಳ ಹಾವಳಿಯಿಂದ ದ್ರಾಕ್ಷಿ ಬೆಳೆಗಾರರು ಆರ್ಥಿಕ ಸಂಕಷ್ಟದಲ್ಲಿದ್ದಾರೆ.

ಭೀಕರ ಬರ ಆವರಿಸಿದಾಗ ಟ್ಯಾಂಕರ್‌ ಮೂಲಕ ನೀರು ಹಾಕಿ, ಅತಿವೃಷ್ಟಿ ಹಾಗೂ ಅಕಾಲಿಕ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಲಕ್ಷಾಂತರ ರೂ. ಹಾನಿ ಅನುಭವಿಸಿದರೂ ಸರಕಾರದಿಂದ ಸೂಕ್ತ ಪರಿಹಾರ ಸಿಕ್ಕಿಲ್ಲ.

l ಮಹಾರಾಷ್ಟ್ರ ಮಾದರಿಯಲ್ಲಿ ಒಣ ದ್ರಾಕ್ಷಿ ಬೆಳೆಗಾರರಿಗೆ 0.10 ಸೆಸ್‌, ಮಾರಾಟ ತೆರಿಗೆಯಿಂದ ವಿನಾಯಿತಿ ನೀಡಬೇಕು.
l ಆನ್‌ಲೈನ್‌ ಮಾರುಕಟ್ಟೆ ಹಾಗೂ ಪಾರದರ್ಶಕ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಬೇಕು.
l ವಿಜಯಪುರ ಜಿಲ್ಲೆಯಲ್ಲಿ ಒಣದ್ರಾಕ್ಷಿ ಸಂರಕ್ಷಣೆಗೆ ಅಗತ್ಯ ಸಾಮರ್ಥ್ಯದ ಶೈತ್ಯಾಗಾರ ನಿರ್ಮಾಣ.
l ವಿಜಯಪುರ ಜಿಲ್ಲೆಯಲ್ಲಿ ರಾಷ್ಟ್ರಿಯ ತೋಟಗಾರಿಕೆ ಮಂಡಳಿ ಉಪ ಕೇಂದ್ರ ಕಚೇರಿ ಸ್ಥಾಪಿಸಬೇಕು.
l ದ್ರಾಕ್ಷಿ ಬೆಳೆಯುವ ಉತ್ತರ ಕರ್ನಾಟಕದ ವಿಜಯಪುರ ಸಹಿತ ಯಾವುದೇ ಜಿಲ್ಲೆಯಲ್ಲಾದರೂ ರಾಷ್ಟ್ರೀಯ ದ್ರಾಕ್ಷಿ ಸಂಶೋಧನ ಕೇಂದ್ರ ಸ್ಥಾಪಿಸಬೇಕು.
l ದ್ರಾಕ್ಷಿ ಬೆಳೆಗಾರರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮಾಡಿರುವ ಸಾಲ-ಬಡ್ಡಿ ಸಂಪೂರ್ಣ ಮನ್ನಾ ಮಾಡಬೇಕು.
l ದ್ರಾಕ್ಷಿ, ಒಣ ದ್ರಾಕ್ಷಿ ಬೆಳೆ ಉತ್ಪಾದನ ಹಾಗೂ ರಫ್ತು ಪ್ರೋತ್ಸಾಹ ಧನ ನೀಡಬೇಕು.
l ಒಣ ದ್ರಾಕ್ಷಿ ರಫ್ತು¤ ನೀತಿ, ಬೆಳೆ ನಷ್ಟವಾದಾಗ ನೀಡುವ ವಿಮಾ ನೀತಿಯಲ್ಲಿ ಬದಲಾವಣೆ ಹಾಗೂ ತ್ವರಿತವಾಗಿ ಪರಿಹಾರ ಪಾವತಿ ವ್ಯವಸ್ಥೆಯಾಗಬೇಕು.
l ಸರಕಾರಕ್ಕೆ ಸಲ್ಲಿಕೆಯಾಗಿರುವ 2009ರಿಂದ 2012ರ ವರೆಗೆ ಪ್ರಕೃತಿ ವಿಕೋಪ ನಷ್ಟದ ಜಂಟಿ ಸಮೀಕ್ಷಾ ವರದಿ ಬಗ್ಗೆ ಕ್ರಮವಾಗಲಿ.
l ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬಕ್ಕೆ ಪರಿಹಾರ ನೀಡಬೇಕು.
l 30 ಎಚ್‌ಪಿ ಟ್ರಾಕ್ಟರ್‌ ಖರೀದಿಗೆ ರಿಯಾಯಿತಿ ನೀಡಬೇಕು.
l ಒಣ ದ್ರಾಕ್ಷಿ ಉತ್ಪಾದನ ಘಟಕ ವೆಚ್ಚವನ್ನು ಪ್ರಸ್ತುತ ದರಕ್ಕೆ ತಕ್ಕಂತೆ ಪರಿಷ್ಕರಿಸಬೇಕು.
l ಸಮುದಾಯದ ಹೊಂಡದ ಬದಲಾಗಿ ವೈಯಕ್ತಿಕ ಹಾಗೂ ಎಲ್ಲ ವರ್ಗದ ರೈತರಿಗೆ ಕೃಷಿ ಹೊಂಡಕ್ಕೆ ಅವಕಾಶ ಕಲ್ಪಿಸಬೇಕು.
l ಕ್ಷೇತ್ರ ವಿಸ್ತರಣೆಗೆ ರಾಷ್ಟ್ರೀಯ ತೋಟಗಾರಿಕೆ ಮಿಷನ್‌ನಿಂದ ಎಲ್ಲ ರೈತರಿಗೂ ಅವಕಾಶ ಕಲ್ಪಿಸಬೇಕು.
l ರಾಷ್ಟ್ರೀಯ ತೋಟಗಾರಿಕೆ ಮಂಡಳಿಯಿಂದ ಸಣ್ಣ-ದೊಡ್ಡ ಪ್ರಮಾಣದ ದ್ರಾಕ್ಷಿ ಬೆಳೆಗಾರರಿಗೆ ರಿಯಾಯಿತಿ ನೀಡಬೇಕು.
l ಒಣ ದ್ರಾಕ್ಷಿ ಗಾತ್ರ ವಿಂಗಡಣೆಗೆ ಅಂತಾರಾಷ್ಟ್ರೀಯ ಗುಣಮಟ್ಟದ ಘಟಕ ಸ್ಥಾಪಿಸಬೇಕು.
l ದ್ರಾಕ್ಷಿ ಗ್ರೇಡಿಂಗ್‌ ಯಂತ್ರ, ಔಷ ಧ ಸಿಂಪಡಣೆ ಯಂತ್ರ ಸಹಿತ ಇತರ ಘಟಕಗಳಿಗೆ ಗುಣಮಟ್ಟದ ಸಂಪೂರ್ಣ ಉಚಿತ ವಿದ್ಯುತ್‌ ನೀಡಬೇಕು.
l ಎಲ್ಲ ದ್ರಾಕ್ಷಿ ಬೆಳೆಗಾರರಿಗೆ ಪ್ಯಾಕ್‌ಹೌಸ್‌ ನಿರ್ಮಾಣಕ್ಕೆ ಅವಕಾಶ ಹಾಗೂ ಹೋಬಳಿ ಮಟ್ಟದಲ್ಲಿ ಶೈತ್ಯಾಗಾರ ನಿರ್ಮಿಸಬೇಕು.
l ವೈನ್‌ ತಯಾರಿಕೆ-ಮಾರಾಟವನ್ನು ಅಬಕಾರಿ ಕಾನೂನಿನಿಂದ ಹೊರತಂದು, ಆಹಾರ ಕಾಯ್ದೆಯಡಿ ಸೇರಿಸಬೇಕು.
l ವಿಜಯಪುರದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ವೈನ್‌ ಪಾರ್ಕ್‌ ತ್ವರಿತ ಅನುಷ್ಠಾನ ಹಾಗೂ ಒಣ ದ್ರಾಕ್ಷಿ ಸಂಸ್ಕರಣ ಘಟಕ ಸ್ಥಾಪಿಸಬೇಕು.

ಟಾಪ್ ನ್ಯೂಸ್

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

dk shivakumar

CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್

dk shivakumar siddaramaiah rahul gandhi

ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!

Ramanath-rai

ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ

1-wwe

ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್‌ ಕಾರಣವೇ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

3(1

Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು

Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು

Gurunandan

Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್‌ ಬಾಂಡ್‌’ ಚಿತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.