ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇದೆ : ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತು ಬೇರೊಂದಿಲ್ಲ
Team Udayavani, Apr 7, 2021, 1:53 AM IST
ಆರೋಗ್ಯದ ಕಾಳಜಿ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರತೀ ವರ್ಷ ಎ. 7ರಂದು “ವಿಶ್ವ ಆರೋಗ್ಯ ದಿನ’ವನ್ನು ಆಚರಿಸುತ್ತದೆ. ಈ ದಿನದಂದು ಸಾರ್ವಜನಿಕರಿಗೆ ಆರೋಗ್ಯ ಮತ್ತು ಹಲವು ಕೆಡುಕುಗಳ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಲಾಗುತ್ತದೆ. ನೈರ್ಮಲ್ಯಯುಕ್ತ ಸಮಾಜಕ್ಕೆ ಅಗತ್ಯವಾದ ಸ್ವತ್ಛತ ಅಭ್ಯಾಸಗಳು, ನೀರಿನ ಸಂರಕ್ಷಣೆ, ಪರಿಸರ ಸ್ವತ್ಛತೆ ಹಾಗೂ ಸೂಕ್ತ ಕಾಲಕ್ಕೆ ತೆಗೆದುಕೊಳ್ಳಬೇಕಾದ ಔಷಧಗಳು ಮುಂತಾದ ವಿಷಯಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ.
1950 ಎಪ್ರಿಲ್ 7ರಂದು ಆರಂಭವಾದ ವಿಶ್ವ ಆರೋಗ್ಯ ದಿನವನ್ನು ಪ್ರತೀ ವರ್ಷ ಒಂದು ವಿಶೇಷ ಧ್ಯೇಯವಾಕ್ಯ ಇಟ್ಟುಕೊಂಡು ಆಚರಿಸಲಾಗುತ್ತದೆ. ಈ ವರ್ಷ “ಉತ್ತಮ ಮತ್ತು ಆರೋಗ್ಯಕರ ಜಗತ್ತಿಗಾಗಿ ಒಗ್ಗೂಡೋಣ’ ಎಂಬ ಘೋಷವಾಕ್ಯವನ್ನು ಇಟ್ಟುಕೊ ಳ್ಳಲಾಗಿದೆ. ಕೋವಿಡ್ 19ರ ಬಳಿಕ ಜನರಿಗೆ ತಮ್ಮ ಆರೋಗ್ಯದ ಕುರಿತು ಹೆಚ್ಚು ಕಾಳಜಿ ಬಂದಂತಿದೆ. ವಿಶೇಷವಾಗಿ 2020ರಲ್ಲಿ ಜನರು ತೋರಿದ ಆರೋಗ್ಯ ಕಾಳಜಿ ಅಭೂತಪೂರ್ವವಾದುದು. ಆದರೆ ಈಗ ಕೋವಿಡ್‌ನ 2ನೇ ಅಲೆ ಹೆಚ್ಚಾಗುತ್ತಿದ್ದು ಜನರು ಇನ್ನೂ ಹೆಚ್ಚು ಜಾಗೃತ ಸ್ಥಿತಿಗೆ ಬರಬೇಕಾಗಿದೆ.
ಎಚ್ಚರ ತಪ್ಪುವಂತಿಲ್ಲ: ವಿಶ್ವ ಆರೋಗ್ಯ ದಿನ ಉನ್ನತ ವೈದ್ಯಕೀಯ ಸೌಲಭ್ಯಗಳು, ಸಲಕರಣೆಗಳು ಮತ್ತು ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನ ಕೂಡ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವ ಗುರುತರ ಉದ್ದೇಶ ಹೊಂದಿದೆ. ಸತತವಾಗಿ ಕಾಡುವ ರೋಗಗಳ ಬಗ್ಗೆ ಜನರಲ್ಲಿ ಜಾಗೃತಿ, ಅರಿವು ಮೂಡಿಸಿ ರೋಗದ ಚಿಕಿತ್ಸೆಗಿಂತ ರೋಗ ತಡೆಗಟ್ಟುವುದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ಜನರನ್ನು ಜಾಗೃತರ ನ್ನಾಗಿಸುವುದೇ ವೈದ್ಯಕೀಯ ನೆರವಾಗಿದೆ.
ಜೀವನ ಶೈಲಿಯೇ ಶತ್ರು: ಇಂದಿನ ಆನಾರೋಗ್ಯಕ್ಕೆ ಆಧುನಿಕ ಜೀವನ ಶೈಲಿಯೇ ಪ್ರಮುಖ ಕಾರಣವಾಗಿದೆ. ಬದಲಾದ ಜೀವನಶೈಲಿ ಆಹಾರ ಪದ್ಧತಿಯಿಂದಾಗಿ ದಿನಕ್ಕೊಂದರಂತೆ ಹೊಸ ಹೊಸ ರೋಗಗಳು ಹುಟ್ಟಿಕೊಳ್ಳುತ್ತಿವೆ. ಇಂದಿನ ಧಾವಂತದ, ಒತ್ತಡದ ಜೀವನ ಕ್ರಮ ದಿಂದಾಗಿ ಯಾರಿಗೂ ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಲು ಸಮಯವಿಲ್ಲದಂತಾಗಿರುವುದು ಬಹುದೊಡ್ಡ ದುರಂತ.
ನಿರ್ಲಕ್ಷ್ಯ ಸಲ್ಲದು: ಉತ್ತಮ ರೀತಿಯ ಬದುಕಿಗೆ ಆರೋಗ್ಯವೂ ಅತ್ಯಗತ್ಯ. ಆರೋಗ್ಯ ಸುಧಾರಣೆಗಳಿಗೆ ಸತತವಾಗಿ ಕ್ರಮಗಳನ್ನು ತೆಗೆದುಕೊಂಡಿದ್ದರೂ ನಿರೀಕ್ಷಿಸಿದಷ್ಟು ಫಲಕೊಡುತ್ತಿಲ್ಲ. ಹೆಚ್ಚಾಗಿ ಮಹಿಳೆಯರಲ್ಲಿ ಅನೀಮಿಯಾ, ಮಕ್ಕಳಲ್ಲಿ ಅಪೌಷ್ಟಿಕತೆ, ಕುಂಠಿತ ಬೆಳವಣಿಗೆ, ರಕ್ತ ಕಣಗಳ ಕೊರತೆ, ಸಾಂಕ್ರಾಮಿಕ ರೋಗಗಳ ನಿರ್ಲಕ್ಷ್ಯ ನಿವಾರಣೆಯಾಗಿಲ್ಲ. ಸಾಮಾಜಿಕ ಹಾಗೂ ಆರ್ಥಿಕ ಕಾರಣಗಳು ಬಡತನ ಮತ್ತು ಶಿಕ್ಷಣದ ಕೊರತೆ ಹಾಗೂ ಮೂಲ ಸೌಕರ್ಯಗಳ ಕೊರತೆಗಳೇ ಆರೋಗ್ಯದ ಕೆಡುಕಿಗೆ ತಳಹದಿಯಾಗಿದೆ.
ಸಾರ್ವಜನಿಕರ ಪಾತ್ರ
ಸ್ವತ್ಛಗಾಳಿ, ಶುದ್ಧ ನೀರು, ಶುಭ್ರ ಬೆಳಕು ಇವೆಲ್ಲವನ್ನು ಪಡೆಯಲು ಸರಕಾರದ ಜತೆಗೆ ನಾವೂ ಕೈಗೂಡಿಸಬೇಕು. ತಮ್ಮ ಪರಿಸರವನ್ನು ಸ್ವತ್ಛವಾಗಿರಿಸಿಕೊಳ್ಳಬೇಕು. ಯಾಕೆಂದರೆ ಸಾಂಕ್ರಾಮಿಕ ರೋಗಗಳಿಗೆ ಇದೇ ಕಾರಣ. ಶುದ್ಧ ನೀರು, ಗಾಳಿ ಪಡೆಯಲು ಪರಿಸರದ ನೈರ್ಮಲ್ಯ ಕಾಪಾಡುವುದು ಅತೀ ಮುಖ್ಯ.
ಆರೋಗ್ಯಕ್ಕೆ 5 ನಿಯಮಗಳು
1 ಆರೋಗ್ಯಕರ ಆಹಾರ: ಆರೋಗ್ಯಕರ ಜೀವನಕ್ಕೆ ಅಗತ್ಯ ವಾದ ಅಂಶಗಳಲ್ಲಿ ಸಮತೋಲಿತ ಆಹಾರವು ಒಂದು. ದಿನಕ್ಕೆ ಕನಿಷ್ಠ ಮೂರು ಬಾರಿ ಆರೋಗ್ಯಕರ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಿ.ನಿಮ್ಮ ಬಹುಪಾಲು ಆಹಾರ ಸೇವನೆಯು ಆರೋಗ್ಯಕರ ಆಹಾರಗಳಾದ ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಪ್ರೊಟೀನ್ ಭರಿತ ಆಹಾರ ಗಳನ್ನು ಒಳಗೊಂಡಿರಬೇಕು. ಸಮತೋಲಿತ ಆಹಾರವು ಎಲ್ಲ ಅಗತ್ಯ ಪೋಷಕಾಂಶಗಳನ್ನು ನೀಡುತ್ತದೆ.
2 ಉತ್ತಮ ನಿದ್ರೆ: ಒಟ್ಟಾರೆ ಯೋಗಕ್ಷೇಮದಲ್ಲಿ ನಿದ್ರೆ ಪ್ರಮುಖ ಪಾತ್ರ ವಹಿಸುತ್ತದೆ. ಸ್ಥೂಲಕಾಯತೆ ಮತ್ತು ಹೃದ್ರೋಗ ಸಹಿತ ಅನೇಕ ಕಾಯಿಲೆಗಳಿಗೆ ನಿದ್ರಾಹೀನತೆಯು ಸಂಬಂಧಿಸಿದ್ದಾಗಿದೆ. ಎಲ್ಲ ವಯಸ್ಸಿನ ಜನರಿಗೆ ಉತ್ತಮ, ಗುಣಮಟ್ಟದ ನಿದ್ದೆಯನ್ನು ಹೆಚ್ಚು ಶಿಫಾರಸು ಮಾಡಲಾಗಿದೆ. ಏಕೆಂದರೆ ಇದು ಆರೋಗ್ಯವನ್ನು ನೀವು ಊಹಿಸಿ ಕೊಳ್ಳುವುದಕ್ಕಿಂತ ಹೆಚ್ಚಿನ ರೀತಿಯಲ್ಲಿ ಸುಧಾರಿಸುತ್ತದೆ.
3 ಒತ್ತಡ ನಿವಾರಣೆ: ಒತ್ತಡವು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಬೊಜ್ಜು ಮತ್ತು ಹಲವು ವಿವಿಧ ಕಾಯಿಲೆಗಳಿಗೆ ಕಾರಣವಾಗುತ್ತದೆ. ಒತ್ತಡವನ್ನು ಕಡಿಮೆ ಮಾಡಲು, ವ್ಯಾಯಾಮ, ಧ್ಯಾನ, ಈಜು, ಯೋಗಗಳನ್ನು ಮಾಡಬಹುದಾಗಿದೆ. ಅತಿಯಾದ ಒತ್ತಡಕ್ಕೆ ಒಳಗಾಗದಿದ್ದರೂ ದಿನನಿತ್ಯದ ಜೀವನವನ್ನು ನಿಭಾಯಿಸಲು ಸಂಪೂರ್ಣವಾಗಿ ಸಾಧ್ಯವಾಗದಿದ್ದರೆ, ಮನಶಾಸ್ತ್ರಜ್ಞರನ್ನು ಭೇಟಿಯಾಗಿ.
4 ಮಾನಸಿಕ ಆರೋಗ್ಯದತ್ತ ಗಮನ ನೀಡಿ; ಒಟ್ಟಾರೆ ಯೋಗಕ್ಷೇಮಕ್ಕೆ ಉತ್ತಮ ಮಾನಸಿಕ ಆರೋಗ್ಯವು ಅಷ್ಟೇ ಮುಖ್ಯ. ಮಾನಸಿಕ ಆರೋಗ್ಯವು ಒಟ್ಟಾರೆ ಆರೋಗ್ಯದ ಅಡಿ ಪಾಯ. ಇದನ್ನು ಪ್ರತಿದಿನವೂ ನಿರ್ವಹಿಸುವುದು ಮತ್ತು ನಿರ್ಣಯಿಸುವುದು ಬಹಳ ಮುಖ್ಯ.
5 ವ್ಯಾಯಾಮ: ಆರೋಗ್ಯಕರವಾಗಿ ಮತ್ತು ಸಕ್ರಿಯವಾಗಿ ಡಲು ವ್ಯಾಯಾಮ ಉತ್ತಮ ಮಾರ್ಗ. ಅಮೆರಿಕನ್ ಹಾರ್ಟ್ ಅಸೋಸಿಯೇಶನ್ ಪ್ರತೀ ವಾರ 150 ನಿಮಿಷಗಳ ವ್ಯಾಯಾಮವನ್ನು ಶಿಫಾರಸು ಮಾಡುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.