ನಮ್ಮ ವಿದ್ಯಾರ್ಥಿಗಳಿಗೆ ನಮ್ಮ ದೇಶದ ವಿಚಾರಗಳನ್ನು ಕಲಿಸಬೇಕು : ಪ್ರೊ|ಎಸ್. ಸಡಗೋಪನ್
ಕರ್ಣಾಟಕ ಬ್ಯಾಂಕ್ 100ನೇ ವರ್ಷಕ್ಕೆ ಪಾದಾರ್ಪಣೆ; ಸ್ಥಾಪಕರ ದಿನಾಚರಣೆ
Team Udayavani, Feb 18, 2023, 8:14 PM IST
ಮಂಗಳೂರು: ”ಕಳೆದ ಹಲವು ವರ್ಷಗಳಿಂದ ನಮ್ಮ ವಿದ್ಯಾರ್ಥಿಗಳಿಗೆ ಪಾಶ್ಚಾತ್ಯ ತಂತ್ರಜ್ಞಾನಗಳನ್ನು ಕಲಿಸಿದ್ದೇವೆ ಹೊರತು ನಮ್ಮ ದೇಶದ ವಿಚಾರಗಳನ್ನು ಕಲಿಸಿಲ್ಲ” ಎಂದು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಅನುಭವಿ, ಬೆಂಗಳೂರು ಐಐಐಟಿ ಮಾಜಿ ನಿರ್ದೇಶಕ ಪ್ರೊ|ಎಸ್. ಸಡಗೋಪನ್ ವಿಷಾದ ವ್ಯಕ್ತಪಡಿಸಿದರು.
ಕರ್ಣಾಟಕ ಬ್ಯಾಂಕ್ ಫೆ.18ಂದು 100ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ದಿನದಂದು ಬ್ಯಾಂಕಿನ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ಸ್ಥಾಪಕರ ದಿನಾಚರಣೆಯಲ್ಲಿ ಪ್ರೊ|ಎಸ್. ಸಡಗೋಪನ್ ಅವರು ತಂತ್ರಜ್ಞಾನ ಮತ್ತು ಬದುಕು ವಿಷಯದಲ್ಲಿ ಸ್ಥಾಪಕರ ದಿನದ ಉಪನ್ಯಾಸದಲ್ಲಿ ಸಮಕಾಲೀನ ನಾಳೆಯ ಕುರಿತು ಮಾತನಾಡಿದ ಅವರು ಕೃಷಿ ,ಶಿಕ್ಷಣ ಸಂಶೋಧನೆ ಸೇರಿ ಹಲವು ವಿಚಾರಗಳ ಕುರಿತು ಉಪನ್ಯಾಸ ನೀಡಿದರು.
”ನಾವು ಜಗತ್ತಿನ ಅತೀ ದೊಡ್ಡ ಹಾಲು ಉತ್ಪಾದಕರು ಎನ್ನುವುದು ಹೆಮ್ಮೆಯ ವಿಚಾರ ಎಂದರು. ಅಮೆರಿಕ, ಇಸ್ರೇಲ್ ನಲ್ಲಿ ಲಭ್ಯವಿರುವ ಡ್ರೋನ್ ತಂತ್ರಜ್ಞಾನವನ್ನು ಭಾರತದಲ್ಲಿ ಬಳಸಲಾಗುತ್ತಿದೆ. ಬೆಳೆ ರೋಗ ಪತ್ತೆ ಮಾಡುವಲ್ಲಿ ಇದು ನೆರವಾಗುತ್ತದೆ” ಎಂದರು.
”ಕಲ್ಲನೈ ಚೋಳ ರಾಜವಂಶದ ಕರಿಕಾಲ ನಿರ್ಮಿಸಿದ ಪ್ರಾಚೀನ ಅಣೆಕಟ್ಟು(150 CE) ಇಂದಿಗೂ ಬಳಕೆಯಾಗುತ್ತಿದೆ” ಎಂದರು. ”ನಮಸ್ತೆ ನಮ್ಮ ಮಂತ್ರವಾಗಿದೆ” ಎಂದರು.
”ಐಟಿ ಎನ್ನುವುದು ಮೂರನೇ ಟಿ ಮೊದಲನೆಯದು ಟೆಕ್ಸ್ ಟೈಲ್ ಎರಡನೆಯದು ಕುಡಿಯುವ ಪಾನೀಯ ಟೀ ಮೂರನೆಯದು ಐಟಿ. ನಾಲ್ಕನೇ ಟಿ ಅನ್ನುವುದು ಟೂರಿಸಂ ಎಂದು ನಾನು ಯಾವಾಗಲೂ ವಿದ್ಯಾರ್ಥಿಗಳಿಗೆ ಹೇಳುತ್ತೇನೆ” ಎಂದರು.
ಕರ್ಣಾಟಕ ಬ್ಯಾಂಕಿಗೆ ಇದೊಂದು ಐತಿಹಾಸಿಕ ಕ್ಷಣ. ಇದನ್ನು ಇನ್ನಷ್ಟು ಸ್ಮರಣೀಯ ಹಾಗೂ ಅರ್ಥಪೂರ್ಣಗೊಳಿಸುವಲ್ಲಿ ಶತಮಾನ ವರ್ಷಪೂರ್ತಿ ಹಲವಾರು ದೂರಗಾಮಿ ಉಪಕ್ರಮಗಳನ್ನು ಬ್ಯಾಂಕ್ ಹಮ್ಮಿಕೊಂಡಿದ್ದು, ತನ್ನ ದ್ವಿತೀಯ ಶತಮಾನದ ಯಾನಕ್ಕೆ ಭದ್ರ ಬುನಾದಿಯನ್ನು ಹಾಕಿ ಮುನ್ನುಗ್ಗುತ್ತಿದೆ ಎಂದು ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿಇಒ ಮಹಾಬಲೇಶ್ವರ ಎಂ. ಎಸ್. ಅವರು ಹೇಳಿದರು. ಗಣ್ಯಾತಿಗಣ್ಯರು, ಬ್ಯಾಂಕಿನ ಹಿರಿಯ ಗ್ರಾಹಕರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಬ್ಯಾಂಕಿನ ಅಧ್ಯಕ್ಷ ಪಿ.ಪ್ರದೀಪ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಉಪನ್ಯಾಸದ ಅನಂತರ “ಸ್ಟ್ರಿಂಗ್ಸ್ ಅಟ್ಯಾಚ್ಡ್ ‘ ವಯೋಲಿನ್ ಹಾಗೂ ವೀಣಾ ವಾದನ ಕಛೇರಿಯನ್ನು ವಿ| ಆರ್. ಕುಮರೇಶ್ ಹಾಗೂ ಡಾ| ಜಯಂತಿ ಕುಮರೇಶ್ ನಡೆಸಿಕೊಟ್ಟರು. ವಿ| ಕೆ.ಯು.ಜಯಚಂದ್ರ ರಾವ್ ಮೃದಂಗದಲ್ಲಿ ಹಾಗೂ ವಿ| ಪ್ರಮಥ್ ಕಿರಣ್ ತಬಲಾ ಮತ್ತು ಮೋರ್ಚಿಂಗ್‌ನಲ್ಲಿ ಸಹಕಾರ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.