![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, Mar 24, 2023, 6:56 AM IST
ನವದೆಹಲಿ: ಈ ವರ್ಷದ ಆರಂಭದಲ್ಲಿ ಭುವನೇಶ್ವರ ಮತ್ತು ರೂರ್ಕೆಲಾದಲ್ಲಿ ಎಫ್‌ಐಎಚ್ ಪುರುಷರ ವಿಶ್ವಕಪ್ ಅನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಹಾಕಿ ಇಂಡಿಯಾಗೆ ಏಷ್ಯನ್ ಹಾಕಿ ಒಕ್ಕೂಟ (ಎಎಚ್‌ಎಫ್) ಅತ್ಯುತ್ತಮ ಸಂಘಟಕ ಪ್ರಶಸ್ತಿಯನ್ನು ಗುರುವಾರ ನೀಡಿದೆ. ಕೊರಿಯಾದ ಮುಂಗ್‌ಯೆಯಾಂಗ್‌ನಲ್ಲಿ ನಡೆದ ಎಎಚ್‌ಎಫ್ ಅಧಿವೇಶನದಲ್ಲಿ ಹಾಕಿ ಇಂಡಿಯಾ ಪ್ರಧಾನ ಕಾರ್ಯದರ್ಶಿ ಭೋಲಾನಾಥ್ ಸಿಂಗ್ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.
ಭುವನೇಶ್ವರದಲ್ಲಿರುವ ಕಳಿಂಗ ಹಾಕಿ ಕ್ರೀಡಾಂಗಣವು ಈ ಹಿಂದೆ 2018ರಲ್ಲಿ ಎಫ್‌ಐಎಚ್ ವಿಶ್ವಕಪ್ ಅನ್ನು ಆಯೋಜಿಸಿದ್ದರೆ, ರೂರ್ಕೆಲದಲ್ಲಿ ಹೊಸದಾಗಿ ನಿರ್ಮಿಸಲಾದ ಬಿರ್ಸಾ ಮುಂಡಾ ಕ್ರೀಡಾಂಗಣವು ಅದರ ಬೃಹತ್ ಆಸನ ಸಾಮರ್ಥ್ಯದಿಂದ ಹಾಕಿಪ್ರಿಯರ ಮನಗೆದ್ದಿತು. ಬಿರ್ಸಾ ಮುಂಡಾ ಹಾಕಿ ಕ್ರೀಡಾಂಗಣವು ಒಲಿಂಪಿಕ್ ಶೈಲಿಯ ಹಾಕಿ ಗ್ರಾಮವನ್ನು ಸಹ ಒಳಗೊಂಡಿದೆ, ಈ ಕ್ರೀಡಾಗ್ರಾಮದಲ್ಲಿ ಒಲಿಂಪಿಕ್ಸ್ ,ಕಾಮನ್‌ವೆಲ್ತ ಮತ್ತು ಏಷ್ಯನ್ ಕ್ರೀಡಾಕೂಟಗಳಂತಹ ಬಹುರಾಷ್ಟ್ರೀಯ ಕ್ರೀಡಾಕೂಟಗಳನ್ನು ಆಯೋಜಿಸಬಹುದಾಗಿದೆ.
ನಮ್ಮ ಸಾಧನೆಯನ್ನು ಗುರುತಿಸಿ ಗೌರವಿಸಿದ ಏಷ್ಯನ್ ಹಾಕಿ ಫೆಡರೇಶನ್‌ಗೆ ನಾವು ಕೃತಜ್ಞರಾಗಿದ್ದೇವೆ. ತವರಿನಲ್ಲಿ ವಿಶ್ವಕಪ್ ಆಯೋಜಿಸುವುದು ಹಾಕಿ ಇಂಡಿಯಾ ಪಾಲಿಗೆ ವಿಶೇಷವೆಂದು ಭಾವಿಸುತ್ತೇವೆ. ಪ್ರತಿಯೊಬ್ಬರಿಗೆ ಸ್ಮರಣೀಯ ಅನುಭವ ಸಿಗುವುದೇ ನಮ್ಮ ಪಾಲಿಗೆ ಪ್ರಮುಖ ಆದ್ಯತೆಯಾಗಿತ್ತು ಎಂದು ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕೆ ತಿಳಿಸಿದ್ದಾರೆ.
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್ ಅಭಿಮಾನಿಗಳು ಕರೆ
You seem to have an Ad Blocker on.
To continue reading, please turn it off or whitelist Udayavani.