ವಿಶ್ವಸಂಸ್ಥೆಯಲ್ಲಿ ಎಡವಿ ಬಿದ್ದ ಪಾಕಿಸ್ಥಾನ
ಭಾರತ ವಿರುದ್ಧ ಗುಂಪು ಕಟ್ಟುವ ಯತ್ನಕ್ಕೆ ಮಾಲ್ಡೀವ್ಸ್ , ಯುಎಇ ತಡೆ
Team Udayavani, May 30, 2020, 6:30 AM IST
ಹೊಸದಿಲ್ಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪದೇ ಪದೆ ಕೇಡಿಗೆ ಗುರಿ ಪಡಿಸಲು ಹೋಗಿ ಅವಮಾನ ಅನುಭವಿಸಿದರೂ ಪಾಕಿಸ್ಥಾನ ಪಾಠ ಕಲಿತಂತೆ ಕಾಣಿಸುತ್ತಿಲ್ಲ. ಈಗ ವಿಶ್ವಸಂಸ್ಥೆಯಲ್ಲಿ ಮತ್ತೂಮ್ಮೆ ಇಂತಹ ಒಂದು ಯತ್ನಕ್ಕೆ ಮುಂದಾಗಿ ಅದು ಎಡವಟ್ಟು ಮಾಡಿ ಕೊಂಡಿದೆ.
ಇಸ್ಲಾಮೋಫೋಬಿಯಾ ವಿರುದ್ಧ ವಿಶ್ವಸಂಸ್ಥೆಯಲ್ಲಿ ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ)ಯ ರಾಯಭಾರಿಗಳ ಅನೌಪಚಾರಿಕ ಗುಂಪು ಹುಟ್ಟುಹಾಕುವ ಪಾಕ್ ಯತ್ನವನ್ನು ಯುಎಇ ಮತ್ತು ಮಾಲ್ಡೀವ್ಸ್ ವಿಫಲಗೊಳಿಸಿವೆ ಎಂದು ಸ್ವತಃ ಪಾಕಿಸ್ಥಾನದ ಪತ್ರಿ ಕೆ “ಡಾನ್’ ವರದಿ ಮಾಡಿದೆ.
ಕೋವಿಡ್ 19 ಹಿನ್ನೆಲೆಯಲ್ಲಿ ಒಐಸಿ ಸದಸ್ಯ ದೇಶಗಳ ರಾಯಭಾರಿಗಳ ಸಭೆ ಯನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆಸ ಲಾಗಿತ್ತು. ಈ ಸಭೆಯಲ್ಲಿ ಪಾಕ್ ಅನೌಪ ಚಾರಿಕ ಸಂಘಟನೆಯನ್ನು ಹುಟ್ಟುಹಾಕುವ ಪ್ರಸ್ತಾವ ವನ್ನು ಮುಂದಿಟ್ಟಿತ್ತು. ಆದರೆ ಇದನ್ನು ವಿರೋಧಿಸಿದ ಮಾಲ್ಡೀವ್ಸ್, ಇಸ್ಲಾಮೋ ಫೋಬಿಯಾಕ್ಕಾಗಿ ಭಾರತವನ್ನು ಪ್ರತ್ಯೇಕಿಸುವುದು ವಾಸ್ತವಿಕವಾಗಿ ಸಮಂಜಸವಲ್ಲ. ಅಲ್ಲದೆ ಇಂತಹ ಕ್ರಮ ದಕ್ಷಿಣ ಏಷ್ಯಾ ವಲಯದಲ್ಲಿ ಧಾರ್ಮಿಕ ಸಾಮರಸ್ಯಕ್ಕೆ ಕೂಡ ಹಾನಿ ಉಂಟು ಮಾಡುತ್ತದೆ ಎಂದು ಪ್ರತಿಪಾದಿಸಿತು. ಜತೆಗೆ ಭಾರತದ ವಿರುದ್ಧ ಕೈಗೊಳ್ಳುವ ಯಾವುದೇ ನಿರ್ಧಾರವನ್ನು ಬೆಂಬಲಿಸಲು ಮಾಲ್ಡೀವ್ಸ್ ನಿರಾಕರಿಸಿತು ಎಂದು ಮೂಲಗಳನ್ನು ಉಲ್ಲೇಖೀಸಿ “ಡಾನ್’ ಪತ್ರಿಕೆ ವರದಿ ಮಾಡಿದೆ.
ಯುಎಇ ವಿರೋಧ
ಯುಎಇ (ಯುನೈಟೆಡ್ ಅರಬ್ ಎಮಿರೇಟ್ಸ್) ಕೂಡ ಪಾಕಿಸ್ಥಾನದ ಈ ನಿಲುವನ್ನು ಬೆಂಬಲಿಸಲಿಲ್ಲ. ಕೇವಲ ವಿದೇಶಾಂಗ ಸಚಿವರು ಮಾತ್ರ ಇಂತಹ ಗುಂಪನ್ನು ರಚಿಸಿಕೊಳ್ಳಬಹುದು ಎಂದು ಅದು ಪ್ರತಿಪಾದಿಸಿದೆ ಎಂದು “ಡಾನ್’ ವರದಿ ಮಾಡಿದೆ.
ಮಾಲ್ಡೀವ್ಸ್ ಖಡಕ್ ಖಂಡನೆ
ವಿಶ್ವಸಂಸ್ಥೆಯಲ್ಲಿ ಮಾಲ್ಡೀವ್ಸ್‌ನ ಖಾಯಂ ಪ್ರತಿನಿಧಿ ಥಿಲ್ಮೀಜಾ ಹುಸೇನ್ ಮಾತನಾಡಿ, ಇಸ್ಲಾಮೋಫೋಬಿಯಾ ಅಥವಾ ಇನ್ನಿತರ ಯಾವುದೇ ರಾಜಕೀಯ ಅಥವಾ ಇತರ ಕಾರಣ ಗಳಿಗಾಗಿ ಹಿಂಸೆಯನ್ನು ಪ್ರಚೋದಿಸುವ ಯತ್ನವನ್ನು ಮಾಲ್ಡೀವ್ಸ್ ಖಂಡಿಸುತ್ತದೆ. ಇಂತಹ ಯತ್ನದ ವಿರುದ್ಧ ಕ್ರಮ ಕೈಗೊಳ್ಳಲು ನಾವು ಸಿದ್ಧ. ಆದರೆ ನಿರ್ದಿಷ್ಟವಾಗಿ ಒಂದು ದೇಶವನ್ನು ಗುರಿಯಾಗಿಸಿ ಗುಂಪು ರಚನೆಗೆ ಸಿದ್ಧರಿಲ್ಲ ಎಂದರು.
ಯಾವುದೋ ಪ್ರಚೋದನೆಗೆ ಒಳಗಾಗಿ ಒಂದಷ್ಟು ಜನರು ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವ ಬರಹಗಳು, ಹೇಳಿಕೆಗಳು, ತಪ್ಪು ಮಾಹಿತಿಯ ಅಭಿಯಾನವನ್ನು ಭಾರತದ 130 ಕೋಟಿ ಜನರ ಭಾವನೆಗಳ ಪ್ರತಿನಿಧಿಯಾಗಿ ನಿರ್ಣ ಯಿಸ ಬಾರದು ಎಂದೂ ಥಿಲ್ಮೀಜಾ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್ ಜೈಲಿಗೆ
Road Project: ಶಿರಾಡಿ ಘಾಟ್ ಸುರಂಗ ಯೋಜನೆಗೆ ಡಿಪಿಆರ್ ರಚಿಸಿ: ಕೇಂದ್ರ ಸೂಚನೆ
Hosur ವಿಮಾನ ನಿಲ್ದಾಣಕ್ಕೆ 2 ಸ್ಥಳ ನಿಗದಿಪಡಿಸಿದ ತಮಿಳುನಾಡು
GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.