ಮೇ 7ರಂದು ಪಾಂಡ್ಯ ಬ್ರದರ್ಸ್ ಮುಖಾಮುಖಿ!
Team Udayavani, May 6, 2023, 7:50 AM IST
ಅಹ್ಮದಾಬಾದ್: ರವಿವಾರದ ಗುಜರಾತ್ ಟೈಟಾನ್ಸ್-ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಐಪಿಎಲ್ ಪಂದ್ಯ ನಾಯಕತ್ವದ ವಿಚಾರದಲ್ಲಿ ವಿಶೇಷವೆನಿಸಲಿದೆ. ಸಹೋದರರ ಸವಾಲ್‌ಗೆ ಈ ಪಂದ್ಯ ಸಾಕ್ಷಿಯಾಗಲಿದೆ. ಈ ಎರಡು ತಂಡಗಳನ್ನು ಕ್ರಮವಾಗಿ ಹಾರ್ದಿಕ್ ಪಾಂಡ್ಯ ಮತ್ತು ಕೃಣಾಲ್ ಪಾಂಡ್ಯ ಮುನ್ನಡೆಸುವುದು ಐಪಿಎಲ್‌ನ ಸ್ವಾರಸ್ಯಗಳಲ್ಲೊಂದಾಗಿ ದಾಖಲಾಗಲಿದೆ.
ಗುಜರಾತ್ ಹಾರ್ದಿಕ್ ಪಾಂಡ್ಯ ಸಾರಥ್ಯದಲ್ಲಿ ಮೊದಲ ಪ್ರಯತ್ನದಲ್ಲೇ ಕಪ್ ಎತ್ತಿದ ತಂಡ. ಈ ಬಾರಿಯೂ ಅಗ್ರಸ್ಥಾನವನ್ನು ಕಾಯ್ದುಕೊಳ್ಳುವ ಹಾದಿಯಲ್ಲಿದೆ. ಬೆನ್ನಲ್ಲೇ ಲಕ್ನೋ ತಂಡವಿದೆ. ಆರ್‌ಸಿಬಿ ಎದುರಿನ ಪಂದ್ಯದ ವೇಳೆ ನಾಯಕ ಕೆ.ಎಲ್. ರಾಹುಲ್ ಗಾಯಾಳಾಗಿ ಕೂಟದಿಂದಲೇ ಹೊರಬಿದ್ದುದರಿಂದ ತಂಡದ ಸಾರಥ್ಯವನ್ನು ಕೃಣಾಲ್ ಪಾಂಡ್ಯ ಅವರಿಗೆ ವಹಿಸಲಾಗಿದೆ. ಉಳಿದ ಪಂದ್ಯಗಳಲ್ಲೂ ಕೃಣಾಲ್ ಅವರೇ ನಾಯಕರಾಗಿ ಮುಂದುವರಿಯು ವರೋ ಅಥವಾ ಬೇರೆಯವರನ್ನು ನೇಮಿಸಲಾಗುವುದೋ ಎಂಬುದು ಇನ್ನೂ ಖಾತ್ರಿಯಾಗಿಲ್ಲ. ಸದ್ಯ ಕೃಣಾಲ್ ಅವರೇ ಮುಂದುವರಿಯುವ ಸಾಧ್ಯತೆ ಇದೆ.
ಆಘಾತಕಾರಿ ಆರಂಭ
ಆದರೆ ಐಪಿಎಲ್ ನಾಯಕನಾಗಿ ಕೃಣಾಲ್ ಪಾಂಡ್ಯ ಅವರದು ಆಘಾತಕಾರಿ ಆರಂಭವೆನಿಸಿತು. ಚೆನ್ನೈ ವಿರುದ್ಧ ಮೇ 3ರಂದು ತವರಿನ ಲಕ್ನೋ ಅಂಗಳದಲ್ಲಿ ನಡೆದ ಈ ಪಂದ್ಯ ಮಳೆಯಿಂದ ರದ್ದುಗೊಂಡಿತು. ವನ್‌ಡೌನ್‌ನಲ್ಲಿ ಬ್ಯಾಟಿಂಗ್‌ಗೆ ಬಂದ ಕೃಣಾಲ್ ಪಾಂಡ್ಯ ಗೋಲ್ಡನ್ ಡಕ್ ಸಂಕಟಕ್ಕೆ ಸಿಲುಕಿದರು. ಮಹೀಶ್ ತೀಕ್ಷಣ ಎಸೆತವನ್ನು ಅಜಿಂಕ್ಯ ರಹಾನೆಗೆ ಕ್ಯಾಚ್ ನೀಡಿ ವಾಪಸಾದರು.
ಐಪಿಎಲ್ ಇತಿಹಾಸದಲ್ಲಿ ನಾಯಕನೊಬ್ಬ ಮೊದಲ ಪಂದ್ಯದಲ್ಲೇ “ಗೋಲ್ಡನ್ ಡಕ್’ಗೆ ಔಟಾದ 3ನೇ ನಿದರ್ಶನ ಇದಾಗಿದೆ. ಹಾಗೆಯೇ 2023ರ ಋತುವಿನ 2ನೇ ದೃಷ್ಟಾಂತವೂ ಹೌದು. ಹೈದರಾಬಾದ್ ತಂಡವನ್ನು ಮುನ್ನಡೆಸಿದ ಐಡನ್ ಮಾರ್ಕ್‌ರಮ್ ಲಕ್ನೋ ಎದುರಿನ ಪಂದ್ಯದಲ್ಲಿ ಈ ಅವಮಾನಕ್ಕೆ ಸಿಲುಕಿದ್ದರು.
ಐಪಿಎಲ್‌ನ ಆರಂಭಿಕ ಸೀಸನ್‌ನಲ್ಲೇ ಇದಕ್ಕೆ ಮೊದಲ ದೃಷ್ಟಾಂತ ಲಭಿಸುತ್ತದೆ. ಅಂದು ಡೆಕ್ಕನ್ ಚಾರ್ಜರ್ ತಂಡವನ್ನು ಮುನ್ನಡೆಸಿದ ವಿವಿಎಸ್ ಲಕ್ಷ್ಮಣ್ ಕೆಕೆಆರ್ ವಿರುದ್ಧ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.