ಪರ್ಕಳ ರಾ.ಹೆ. ವಿಸ್ತರಣೆ ಕಾಮಗಾರಿ : ಖಾಲಿ ಕಟ್ಟಡಗಳ ತೆರವು ಕಾರ್ಯಾಚರಣೆ ಪ್ರಗತಿಯಲ್ಲಿ
Team Udayavani, Apr 12, 2021, 7:20 PM IST
ಉಡುಪಿ : ಕಳೆದ ಒಂದುವರೆ ವರ್ಷದಿಂದ ಸ್ಥಗಿತಗೊಂಡ ಪರ್ಕಳದ ರಾ.ಹೆ. ಕಾಮಗಾರಿಗೆ ಚಾಲನೆ ದೊರಕಿದ್ದು, ಸೋಮವಾರ ಪೇಟೆಯಲ್ಲಿನ ಹಳೆ ಖಾಲಿ ಕಟ್ಟಡಗಳನ್ನು ನೆಲ ಸಮಗೊಳಿಸಲಾಗಿದೆ.
ಪ್ರಸ್ತುತ ಪೇಟೆಯ ಮುಖ್ಯ ರಸ್ತೆಗೆ ಹೊಂದಿಕೊಂಡು ಹತ್ತಾರು ವಾಣಿಜ್ಯ ಮಳಿಗೆ ಹಾಗೂ ಕಟ್ಟಡಗಳಿವೆ. ಅವುಗಳಲ್ಲಿ ಈಗಾಗಲೇ ಖಾಲಿ ಇರುವ ಕಟ್ಟಡಗಳನ್ನು ಈಗಾಗಲೇ ನೆಲಸಮಗೊಳಿಸಿದ್ದು, ಅವಶೇಷಗಳನ್ನು ಸ್ಥಳಾಂತರಿಸುವ ಕೆಲಸ ಭರದಿಂದ ಸಾಗುತ್ತಿದೆ.
ಪೇಟೆಯಲ್ಲಿ ಹಳೆಕಾಲದ 10 ರಿಂದ 14 ಕಟ್ಟಡಗಳು ತೆರವುಗೊಳ್ಳಲಿದೆ. ಕೆಲ ವಾಣಿಜ್ಯ ಮಳಿಗೆಗಳು ಇನ್ನೂ ಕಾರ್ಯಾಚರಿಸುತ್ತಿದ್ದು, ಇವುಗಳ ತೆರವಿಗೆ ಒಂದು ವಾರ ಕಾಲಾವಕಾಶ ನೀಡಲಾಗಿದೆ.
ಕೇಂದ್ರ ಸರಕಾರದಿಂದ ಪರ್ಕಳ ರಾ.ಹೆ. ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ 3ಡಿ ನೋಟಿಫಿಕೇಶನ್ ಆಗಿದೆ. ಭೂಸಂತ್ರಸ್ತರಿಗೆ 21. 84 ಕೋ.ರೂ ಹಾಗೂ ರಾ.ಹೆ. ಇಲಾಖೆ ಆಡಳಿತಾತ್ಮಕ ವೆಚ್ಚ 54.60 ಲ. ರೂ. ಸೇರಿದಂತೆ ಒಟ್ಟು 22.38 ಕೋ. ರೂ. ಪರಿಹಾರಧನ ಬಿಡುಗಡೆಯಾಗಿದೆ. 900 ಮೀ.ನಲ್ಲಿ 72 ಸರ್ವೇ ನಂಬರ್ ಭೂಮಿಗಳು ಭೂ ಸ್ವಾಧೀನಕ್ಕೆ ಒಳಪಡುತ್ತದೆ.
ಒಂದು ಸರ್ವೇ ನಂಬರ್‌ಗೆ ಕನಿಷ್ಠ 1 ಲ.ರೂ.ನಿಂದ ಗರಿಷ್ಠ 2.85 ಕೋ.ರೂ.ವರೆಗೆ ಪರಿಹಾರ ಮೊತ್ತ ಮಂಜೂರಾಗಿದೆ. ನೋಟಿಫಿಕೇಶನ್ ಆದ 30 ದಿನದೊಳಗಡೆ ಸಂತ್ರಸ್ತರು ದಾಖಲೆಗಳನ್ನುನೀಡಿ ಪರಿಹಾರ ಪಡೆಯಬೇಕು. ಗಡುವು ಮುಗಿದರೆ ಪರಿಹಾರ ಮೊತ್ತವನ್ನು ನ್ಯಾಯಾಲಯಕ್ಕೆ ಕಟ್ಟಲಾಗುತ್ತದೆ. ಅನಂತರ ಸಂತ್ರಸ್ತರು ಪರಿಹಾರವನ್ನು ಅಲ್ಲಿಯೇ ಪಡೆದುಕೊಳ್ಳಬೇಕಾಗುತ್ತದೆ. ಸರಕಾರದಿಂದ ನಿಗದಿಪಡಿಸಿದ ಪರಿಹಾರ ಕಡಿಮೆ ಅನಿಸಿದರೆ, ಪರಿಹಾರ ಪಡೆದ 45 ದಿನದೊಳಗಡೆ ಜಿಲ್ಲಾಧಿಕಾರಿ ಅವರಿಗೆ ಮೇಲ್ಮನವಿ ಸಲ್ಲಿಸಬಹುದು ಎಂದು ಅಧಿಕಾರಿಗಳು ತಿಳಿಸಿದರು.
ಹಂತ ಹಂತವಾಗಿ ಕಟ್ಟಡಗಳ ತೆರವು ಕೆಲಸ ಪ್ರಾರಂಭವಾಗಲಿದೆ. ಸೋಮವಾರ ನಾಲ್ಕು ಕಟ್ಟಡ ತೆರವುಗೊಳಿಸಲಾಗಿದೆ. 3ಡಿ ನೋಟಿಫಿಕೇಶನ್ ಜಾರಿಯಾಗಿದ್ದು, ಇದೀಗ ಜಾಗವು ಕೇಂದ್ರ ಸರಕಾರದ ಸ್ವಾಧೀನಕ್ಕೆ ಬಂದಿದೆ.
-ಮಂಜುನಾಥ್ ನಾಯಕ್, ಎಂಜಿನಿಯರ್ ರಾ.ಹೆ. ಇಲಾಖೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.