![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Dec 14, 2023, 10:40 AM IST
ನವದೆಹಲಿ: ಸಂಸತ್ ಭವನದ ಭದ್ರತಾಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ವಿಶೇಷ ಸೆಲ್ ಐದನೇ ಆರೋಪಿಯನ್ನು ಗುರುವಾರ (ಡಿ.14) ಬೆಳಗ್ಗೆ ಬಂಧಿಸಿರುವುದಾಗಿ ಪಿಟಿಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಇದನ್ನೂ ಓದಿ:Arrested: ಅತ್ತಿಬೆಲೆ ಪಟಾಕಿ ದುರಂತ; ಮತ್ತೂಬ್ಬ ಆರೋಪಿ ಲಾರಿ ಚಾಲಕನ ಬಂಧನ
2001ರಲ್ಲಿ ಸಂಸತ್ ಮೇಲೆ ದಾಳಿ ನಡೆಸಿದ್ದ ಸಂದರ್ಭದ 9 ಮಂದಿ ಸಾವನ್ನಪ್ಪಿದ್ದರು. ಈ ದಾಳಿಯ 22ನೇ ವರ್ಷಾಚರಣೆಯ ದಿನ(ಬುಧವಾರ ಡಿ.13)ದಂದೇ ಕಲಾಪ ನಡೆಯುತ್ತಿದ್ದಾಗಲೇ ಇಬ್ಬರು ಸಂಸತ್ ನೊಳಗೆ ನುಗ್ಗಿ ದುಷ್ಕೃತ್ಯ ಎಸಗಿದ್ದರು. ಈ ಪ್ರಕರಣದಲ್ಲಿ ಆರು ಮಂದಿ ಶಾಮೀಲಾಗಿದ್ದು, ಅದರಲ್ಲಿ ನಾಲ್ವರನ್ನು ಬುಧವಾರ ಬಂಧಿಸಲಾಗಿತ್ತು.
ತನಿಖೆಯಲ್ಲಿ ಆರು ಮಂದಿ ಆರೋಪಿಗಳು ನಾಲ್ಕು ವರ್ಷಗಳ ಹಿಂದೆಯೇ ಪರಿಚಿತರಾಗಿದ್ದು, ಡಿ.13ರಂದು ಸಂಸತ್ ಭವನದೊಳಕ್ಕೆ ನುಗ್ಗಿ ದುಷ್ಕೃತ್ಯ ಎಸಗುವ ಬಗ್ಗೆ ಯೋಜನೆ ರೂಪಿಸಿರುವುದಾಗಿ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಸಂವಹನ ನಡೆಸುತ್ತಿದ್ದ ಆರು ಮಂದಿ, ಸಂಸತ್ ಕಲಾಪದ ವೇಳೆ ಒಳಹೋಗಿ ಹೊಗೆ ಬಾಂಬ್ ಎಸೆಯುವ ಕುರಿತು ಸ್ಕೆಚ್ ಹಾಕಿದ್ದರು.
ಪ್ರಕಣದಲ್ಲಿ ಮೈಸೂರು ಮೂಲದ ಮನೋರಂಜನ್, ಲಕ್ನೋದ ಇ-ರಿಕ್ಷಾ ಚಾಲಕ ಸಾಗರ್ ಶರ್ಮಾ, ಗುರುಗ್ರಾಮದ ಲಲಿತ್ ಝಾ, ಹರಿಯಾಣದ ನೀಲಂ, ಮಹಾರಾಷ್ಟ್ರ ಲಾತೂರ್ ನ ಅಮೋಲ್ ಶಿಂಧೆ ಹಾಗೂ ಗುರುಗ್ರಾಮದ ವಿಕ್ರಮ್ ಸೇರಿ ಆರು ಮಂದಿ ಆರೋಪಿಗಳು ಶಾಮೀಲಾಗಿದ್ದರು.
ಐದನೇ ಆರೋಪಿ ವಿಕ್ರಮ್ ಎಂಬಾತನನ್ನು ಬಂಧಿಸಲಾಗಿದ್ದು, ಲಲಿತ್ ಝಾ ಬಂಧನಕ್ಕೆ ಬಲೆ ಬೀಸಲಾಗಿದೆ. ಆರು ಮಂದಿ ಆರೋಪಿಗಳ ವಿರುದ್ಧ ಭಯೋತ್ಪಾದಕ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಗುತ್ತಿದೆ ಎಂದು ವರದಿ ವಿವರಿಸಿದೆ.
ಆರೋಪಿಗಳ ವಿರುದ್ಧ ಅತಿಕ್ರಮ ಪ್ರವೇಶ, ಅಪರಾಧ ಸಂಚು, ಗಲಭೆ ಪ್ರಚೋದನೆ ಸಂಚು, ಯುಎಪಿಎ ಸೇರಿದಂತೆ ಭಯೋತ್ಪಾದನಾ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತನಿಖೆಯಲ್ಲಿ ಹೇಳಿದ್ದೇನು?
ಆರು ಮಂದಿ ಆರೋಪಿಗಳು ಸಾಮಾಜಿಕ ಜಾಲತಾಣದಲ್ಲಿ ಭಗತ್ ಸಿಂಗ್ ಫ್ಯಾನ್ ಕ್ಲಬ್ ಗೆಳೆಯರಾಗಿದ್ದು, ಸುಮಾರು ಒಂದೂವರೆ ವರ್ಷಗಳ ಹಿಂದೆ ಆರು ಮಂದಿ ಮೈಸೂರಿನಲ್ಲಿ ಒಗ್ಗೂಡಿದ್ದು, ನಂತರ ಸಂಸತ್ ಭವನದೊಳಗೆ ನುಗ್ಗುವ ಸಂಚು ರೂಪಿಸಿರುವುದಾಗಿ ತನಿಖೆಯಲ್ಲಿ ಬಾಯ್ಬಿಟ್ಟಿದ್ದಾರೆ.
ತಮ್ಮ ಯೋಜನೆ ಕಾರ್ಯಗತಗೊಳಿಸಲು ಈ ಗುಂಪು ಸಾಕಷ್ಟು ಮಾಹಿತಿ ಕಲೆ ಹಾಕಿದ್ದು, ಅದರಂತೆ ಭದ್ರತಾ ಲೋಪವನ್ನು ಅರಿತುಕೊಂಡ ತಂಡ, ಶೂಗಳನ್ನು ಕೂಲಂಕಷವಾಗಿ ಪರೀಕ್ಷಿಸುವುದಿಲ್ಲ ಎಂಬುದನ್ನು ಪತ್ತೆಹಚ್ಚಿದ್ದರು. ಹಾಗೆ ಡಿಸೆಂಬರ್ 13ರಂದು ಸಂಸತ್ ಒಳಗೆ ವೀಕ್ಷಕರಾಗಿ ಬಂದ ದುಷ್ಕರ್ಮಿಗಳು ಒಳಬರುವ ಮೊದಲೇ ಶೂನಲ್ಲಿ ಸ್ಮೋಕ್ ಬಾಂಬ್ ಅಡಗಿಸಿಟ್ಟುಕೊಂಡು ಬಂದಿದ್ದರು ಎಂದು ವರದಿ ತಿಳಿಸಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.