ಪಾರ್ಟ್ ಟೈಮ್ ಜಾಬ್ ಟಾಸ್ಕ್: 1.04 ಲ.ರೂ. ವಂಚನೆ
Team Udayavani, Apr 22, 2023, 5:20 AM IST
ಮಂಗಳೂರು: ಪಾರ್ಟ್ ಟೈಂ ಜಾಬ್ ಬಗ್ಗೆ ಜಾಹೀರಾತು ನೀಡಿ ಟಾಸ್ಕ್ಗಳನ್ನು ಕೊಟ್ಟು 1.04 ಲ.ರೂ. ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರ ವ್ಯಕ್ತಿ ಎ. 7ರಂದು ಇನ್‌ಸ್ಟಾಗ್ರಾಂನಲ್ಲಿ ಪಾರ್ಟ್‌ಟೈಂ ಜಾಬ್ ಬಗ್ಗೆ ಜಾಹೀರಾತು ನೋಡಿದ್ದರು. ಅದರ ಮೇಲೆ ಕ್ಲಿಕ್ ಮಾಡಿದಾಗ ವಾಟ್ಸ್ ಆ್ಯಪ್‌ನಲ್ಲಿ ಅದು ತೆರೆದುಕೊಂಡಿತ್ತು. ಅದರಲ್ಲಿ 10 ಟಾಸ್ಕ್ಗಳನ್ನು ಆಡುವಂತೆ ಅಪರಿಚಿತ ವ್ಯಕ್ತಿ ದೂರುದಾರ ವ್ಯಕ್ತಿಗೆ ತಿಳಿಸಿದ್ದ. ಅದರಂತೆ ದೂರುದಾರ ವ್ಯಕ್ತಿ ಒಂದರ ಅನಂತರ ಇನ್ನೊಂದು ಟಾಸ್ಕ್ ಆಡಿದ್ದರು. ಮೊದಲ ಟಾಸ್ಕ್ 200 ರೂ.ಗಳದ್ದಾಗಿತ್ತು. ಹೀಗೆ ಅಪರಿಚಿತ ವ್ಯಕ್ತಿ ದೂರುದಾರ ವ್ಯಕ್ತಿಯಿಂದ ಹಂತ ಹಂತವಾಗಿ ಪೋನ್ ಪೇ ಮೂಲಕ 81,995 ರೂ. ಹಾಗೂ ನೆಫ್ಟ್ ಮೂಲಕ 22,512 ಹೀಗೆ ಒಟ್ಟು 1,04,707 ರೂ.ಗಳನ್ನು ಆತನ ಖಾತೆಗೆ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾನೆ ಎಂದು ದೂರಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Karkala: ಚಿನ್ನದಂಗಡಿ ಕಳ್ಳತನ: ಕುಖ್ಯಾತ ಸರಗಳ್ಳ ಅರೆಸ್ಟ್
ICC ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೆ ಜಸ್ಪ್ರೀತ್ ಬುಮ್ರಾ ಹೆಸರು
Contracter Case: ಸಿಐಡಿ ಮೇಲೆ ವಿಶ್ವಾಸವಿಲ್ಲ, ಸಿಬಿಐಗೆ ಕೊಡಿ: ಸಚಿನ್ ಸಹೋದರಿ ಸುರೇಖಾ
First Test Match: ಜಿಂಬಾಬ್ವೆ-ಅಫ್ಘಾನಿಸ್ಥಾನ ಟೆಸ್ಟ್ ಡ್ರಾ
Misuse; ಐಶ್ವರ್ಯ ಗೌಡ ವಿರುದ್ಧ ಪೊಲೀಸ್ ದೂರು ದಾಖಲಿಸಿದ ಡಿ.ಕೆ.ಸುರೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.