ಚಿಕ್ಕಮಗಳೂರಲ್ಲಿ ಶ್ವಾನಗಳಿಗೆ ಪಾರ್‌ವೋ ವೈರಸ್ ಭೀತಿ
Team Udayavani, Feb 23, 2021, 8:20 PM IST
ಚಿಕ್ಕಮಗಳೂರು : ನಿಯತ್ತಿನ ಪ್ರಾಣಿ ನಾಯಿಗಳಲ್ಲಿ ಪಾರ್‌ವೋ ಎಂಬ ವೈರಸ್ ಕಾಣಿಸಿಕೊಂಡಿದ್ದು, ಇತ್ತೀಚಿನ ದಿನಗಳಲ್ಲಿ ಚಿಕ್ಕಮಗಳೂರು ತಾಲೂಕಿನಲ್ಲೇ ಈ ವೈರಸ್ ಹೆಚ್ಚಾಗಿ ಕಂಡುಬಂದಿದೆ.
ವೈರಸ್ ಸೋಂಕಿತ ಶ್ವಾನಗಳು ಅನ್ನ ಆಹಾರ ಬಿಟ್ಟು ಮಂಕಾಗಿ ಮೂಲೆ ಹಿಡಿಯುತ್ತಿವೆ. ಗಾಬರಿಗೊಂಡ ಮಾಲೀಕರು ನಾಯಿಗಳನ್ನು ಕರೆದುಕೊಂಡು ಪಶು ಆಸ್ಪತ್ರೆಗೆ ಬರುತ್ತಿದ್ದು ಪಶುವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಲಕ್ಯಾ ಹೋಬಳಿ ಹೊರತುಪಡಿಸಿ ಉಳಿದ ಹೋಬಳಿಗಳಲ್ಲಿ ನವೆಂಬರ್‌ನಿಂದ ಈ ವೈರಸ್ ಕಾಣಿಸಿಕೊಳ್ಳುತ್ತಿದ್ದು, ಸದ್ಯ ಇದರ ಪ್ರಮಾಣ ಹೆಚ್ಚಿದೆ. ವಾತಾವರಣದಲ್ಲಿ ತೇವಾಂಶ ಜಾಸ್ತಿಯಾಗಿದ್ದರಿಂದ ಈ ವೈರಸ್ ಹರಡುತ್ತಿದ್ದು, ಶ್ವಾನಗಳಿಗೆ ತಗಲುತ್ತಿದೆ. ಎರಡು ಮೂರು ದಿನಗಳು ರಕ್ತಬೇನೆ ಇರುತ್ತದೆ. ಶ್ವಾನಗಳು ಆಹಾರ ಸೇವಿಸುವುದಿಲ್ಲ, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದಿದ್ದರೆ ಶ್ವಾನಗಳು ಮೃತಪಡುವ ಸಾಧ್ಯತೆ ಜಾಸ್ತಿ ಇದೆ.
ಚಿಕ್ಕಮಗಳೂರು ತಾಲೂಕಿನಲ್ಲಿ ಶೇ.50ರಷ್ಟು ಪ್ರಕರಣ ಕಂಡು ಬರುತ್ತಿದ್ದು ಶೇ.2ರಿಂದ 3ರಷ್ಟು ಶ್ವಾನಗಳು ಮೃತಪಟ್ಟಿವೆ ಎಂದು ಪಶು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಮಾದಕ ವಸ್ತು ಮಾರಾಟ : ಪೊಲೀಸರಿಂದ ಇಬ್ಬರು ನೈಜಿರಿಯಾ ಪ್ರಜೆಗಳ ಬಂಧನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.