Pawar on Adani: “ಅದಾನಿ” ಹೇಳಿಕೆ ಬದಲಿಸಿದ ಪವಾರ್!
ಜೆಪಿಸಿಗಿಂತ ಸುಪ್ರೀಂ ತನಿಖೆ ಉತ್ತಮ ಎಂದ ಶರದ್
Team Udayavani, Apr 9, 2023, 7:34 AM IST
ಮಂಬೈ: ಅದಾನಿ ಗ್ರೂಪ್ಸ್ ವಿರುದ್ಧದ ಹಿಂಡನ್‌ಬರ್ಗ್ ವರದಿ ಕುರಿತ ತನಿಖೆ ವಿಚಾರದಲ್ಲಿ ಶುಕ್ರವಾರವಷ್ಟೇ ಅದಾನಿ ಪರವಾಗಿ ಹೇಳಿಕೆ ನೀಡಿದ್ದ ಎನ್‌ಸಿಪಿ ನಾಯಕ ಶರದ್ ಪವಾರ್, ಶನಿವಾರ ತಮ್ಮ ಹೇಳಿಕೆ ಬದಲಿಸಿದ್ದಾರೆ. “ಅದಾನಿ ವಿರುದ್ಧದ ಜೆಪಿಸಿ ತನಿಖೆಯನ್ನು ನಾನು ಸಂಪೂರ್ಣವಾಗಿ ವಿರೋಧಿಸಿಲ್ಲ. ಆದರೆ, ಈ ವಿಚಾರದ ತನಿಖೆಗೆ ಸುಪ್ರೀಂಕೋರ್ಟ್ ಸಮಿತಿ ಉತ್ತಮವೆಂದು ತಿಳಿಸಿದ್ದೇನಷ್ಟೇ ಎಂದಿದ್ದಾರೆ.
ಅದಾನಿ ಸಮೂಹ ಸಂಸ್ಥೆಯನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿರುವಂತೆ ತೋರುತ್ತಿದೆ ಎಂದು ಸಂದರ್ಶನವೊಂದರಲ್ಲಿ ಪವಾರ್ ಹೇಳಿಕೆ ನೀಡಿದ್ದರು. ಇದರಿಂದ ವಿಪಕ್ಷಗಳನ್ನು ಬಿಜೆಪಿ ವಿರುದ್ಧ ಒಗ್ಗೂಡಿಸುವ ಕಾಂಗ್ರೆಸ್ ಪ್ರಯತ್ನಕ್ಕೂ ಹಿನ್ನಡೆ ಎನ್ನುವಂಥ ಮಾತು ಕೇಳಿಬಂದಿತ್ತು.
ಬೆನ್ನಲ್ಲೇ ತಮ್ಮ ಹೇಳಿಕೆ ಕುರಿತು ಪವಾರ್ ಸ್ಪಷ್ಟನೆ ನೀಡಿದ್ದಾರೆ.”ಹಿಂಡನ್‌ಬರ್ಗ್ ಸಂಸ್ಥೆಯ ಪೂರ್ವಾಪರ ನನಗೆ ತಿಳಿದಿಲ್ಲ. ಒಂದು ವಿದೇಶಿ ಸಂಸ್ಥೆ, ದೇಶದಲ್ಲಿ ಇಷ್ಟೆಲ್ಲ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂಬುದಾದರೆ, ಈ ಬಗ್ಗೆ ಎಷ್ಟು ಗಮನಹರಿಸಬೇಕೆಂದು ನಾವು ನಿರ್ಧರಿಸಬೇಕು. ಜೆಪಿಸಿಯನ್ನು ಸಂಸತ್ತಿನ ಬಲದ ಮೇಲೆ ರಚಿಸಲಾಗುತ್ತದೆ. ಅದರಲ್ಲಿ ಬಹುತೇಕರು ಆಡಳಿತ ಪಕ್ಷದ ಸದಸ್ಯರೇ ಇರುವ ಕಾರಣ, ತನಿಖೆಗೆ ಅದಕ್ಕಿಂತ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿ ಉತ್ತಮ ಎಂಬುದು ನನ್ನ ಅಭಿಪ್ರಾಯವಾಗಿದೆ’ ಎಂದಿದ್ದಾರೆ.
ವದಂತಿಗೆ ಅಜಿತ್ ತೆರೆ: ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅವರ ವಿದ್ಯಾರ್ಹತೆ ವಿಚಾರದಲ್ಲಿ ಮೋದಿಪರವಾಗಿ ಬ್ಯಾಟಿಂಗ್ ಮಾಡಿದ್ದ ಎನ್‌ಸಿಪಿ ನಾಯಕ ಅಜಿತ್ ಪವಾರ್, ಕಳೆದೆರಡು ದಿನಗಳಿಂದ ಕೆಲವು ಕಾರ್ಯಕ್ರಮಗಳಿಗೆ ಗೈರಾಗಿದ್ದರು. ನನಗೆ ಆರೋಗ್ಯ ವ್ಯತ್ಯಾಸವಾಗಿದ್ದರಿಂದ ಗೈರಾಗಿದ್ದೆ ಎನ್ನುವ ಮೂಲಕ ವದಂತಿಗಳಿಗೆ ತೆರೆಯೆಳೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cyclone Fengal: ತಿರುವಣ್ಣಾಮಲೈಯಲ್ಲಿ ಭೂ ಕುಸಿತ: 7 ಮಂದಿ ಪೈಕಿ ನಾಲ್ವರ ಮೃತದೇಹ ಪತ್ತೆ
Nagpura: ರಾಜಕೀಯ ಎಂದರೆ ಅತೃಪ್ತ ಆತ್ಮಗಳ ಸಮುದ್ರ: ಕೇಂದ್ರ ಸಚಿವ ನಿತಿನ್ ಗಡ್ಕರಿ
Dal Lake: ಶ್ರೀನಗರದಲ್ಲಿ ಏಷ್ಯಾದ ಮೊದಲ ಜಲ ಸಾರಿಗೆ ʼಉಬರ್ ಶಿಕಾರಾʼ ಆರಂಭ
Alappuzha: ಬಸ್ ಗೆ ಡಿಕ್ಕಿ ಹೊಡೆದ ಕಾರು; ಐವರು ವೈದ್ಯಕೀಯ ವಿದ್ಯಾರ್ಥಿಗಳ ಸಾ*ವು
New District: “ಮಹಾ ಕುಂಭಮೇಳ’ ಈಗ ಉತ್ತರಪ್ರದೇಶದ ಹೊಸ ಜಿಲ್ಲೆ!
MUST WATCH
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.