ಪೇಸಿಎಂ ಬೊಮ್ಮಾಯಿ ಬಜೆಟ್ ನಿರಾಶಾದಾಯಕ :ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ
Team Udayavani, Feb 17, 2023, 10:46 PM IST
ವಿಜಯಪುರ : ಶುಕ್ರವಾರ ಕರ್ನಾಟಕದಲ್ಲಿ ಶೇ.40 ಕಮೀಶನ್‍ನ ಬಿಜೆಪಿ ಸರ್ಕಾರದ ಪೇಸಿಎಂ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ ಕಿವಿಯಲ್ಲಿ ಹೂವಿಡುವ ಕೆಲಸವಾಗಿದೆ. ಭ್ರಷ್ಟಾಸುರ ಸಿ.ಎಂ. ಮಂಡಿಸಿದ ಬಜೆಟ್ ಬಗ್ಗೆ ರಾಜ್ಯದ ಜನರು ಶೀಘ್ರವೇ ತೀರ್ಮಾನ ಮಾಡಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಕರ್ನಾಟಕ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲಾ ಟೀಕಾಸ್ತ್ರ ಪ್ರಯೋಗಿಸಿದರು.
ಶುಕ್ರವಾರ ಸಂಜೆ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, 4 ವರ್ಷಗಳ ಸರ್ಕಾರದಲ್ಲಿ ಏನನ್ನೂ ಮಾಡಲಾಗದ ಇವರ ಸರ್ಕಾರ, 20 ದಿನಗಳಲ್ಲಿ ಎನನ್ನು ಮಾಡಲು ಸಾಧ್ಯವಿದೆ. ಇದೆಲ್ಲ ಜನರಿಗೆ ತಿಳಿಯುವುದಿಲ್ಲ ಎಂದುಕೊಂಡಿದ್ದಾರೆ ಎಂದು ಬಜೆಟ್ ಬಗ್ಗೆ ಅಸಮಾಧಾನ ಹೊರಹಾಕಿದರು.
ಇಷ್ಟಕ್ಕೂ ಬೊಮ್ಮಾಯಿ ಅವರು ಮಂಡಿಸಿದ ಕಳೆದ ವರ್ಷದ ಬಜೆಟ್‍ನ ಯಾವ ಅಂಶಗಳನ್ನು ಈಡೇರಿಸಿದ್ದಾರೆ ಹೇಳಿ. ನಮ್ಮ ಕ್ಲಿನಿಕ್ ಸೇರಿದಂತೆ ಅನೇಕ ಯೋಜನೆಗಳು ಈವರೆಗೆ ನೈಜವಾಗಿ ಅನುಷ್ಠಾನವಾಗಿಲ್ಲ.ಶೇ.40 ಕಮೀಷನ್ ಹೊಡೆಯುವಲ್ಲೇ ತಲ್ಲೀನರಾಗಿರುವ ಪೇಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯ ಜನರಿಗೆ ಬರಿ ಹುಸಿ ಭರವಸೆಗಳನ್ನೇ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ದೆಹಲಿಯಲ್ಲಿರುವ ಇವರ ಸುಳ್ಳುಗಳ ಸರ್ದಾರ, ಮಾತಿನಲ್ಲೇ ಅಭಿವೃದ್ಧಿ ಮಾಡುವ ನಾಯಕ ಕರ್ನಾಟಕ ಮುಖ್ಯಮಂತ್ರಿಗೂ ಅದನ್ನೇ ಬೋಧಿಸಿದ್ಧಾನೆ. ದೇಶದ ಜನರಿಗೆ ಪದೇ ಪದೆ ಸುಳ್ಳು ಹೇಳುವುದನ್ನೇ ರೂಢಿಸಿಕೊಂಡಿರುವ ದೆಹಲಿ ವ್ಯಕ್ತಿ, ಬಸವರಾಜ ಬೊಮ್ಮಾಯಿ ಅವರಿಗೂ ಅದೇ ಪಾಠ ಮಾಡಿದ್ದಾರೆ ಎಂದು ಹರಿಹಾಯ್ದರು.
ಬಿಜೆಪಿ ಹಿಂಸಾ ಸಂಸ್ಕೃತಿಯನ್ನೇ ಪ್ರತಿಪಾದಿಸಿದ್ದಾರೆ
ಸಚಿವನಾಗಿರುವ ಅಶ್ವತ್ಥನಾರಾಯಣ ಎನ್ನುವ ವ್ಯಕ್ತಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಹೊಡೆದುಹಾಕಿ ಎಂದು ಕರೆ ನೀಡಿರುವಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ. ಬಿಜೆಪಿ ಡಿಎನ್‍ಎ ಮೂಲದಲ್ಲೇ ಹಿಂಸಾ ಸಂಸ್ಕೃತಿ ಅಡಗಿದ್ದು, ಅದನ್ನೇ ಅವರು ಹೇಳಿದ್ದಾರೆ ಎಂದರು.
ಇಂಥ ಹಿಂಸಾ ಮನಸ್ಥಿತಿಗಳೇ ಮಹಾತ್ಮಾ ಗಾಂಧಿಜಿ ಅವರನ್ನು, ದೇಶಧ ಪ್ರಧಾನಿ ಆಗಿದ್ದ ಇಂದಿರಾ ಗಾಂಧಿ, ರಾಜೀವ ಗಾಂಧಿ ಅವರನ್ನು ಹತ್ಯೆ ಮಾಡಿದ್ದು. ಸರ್ದಾರ್ ಬಿಯಾಂತಸಿಂಗ್ ಅವರನ್ನು ತುಂಡರಿಸಿದ್ದು,ವಿ.ಸಿ.ಶುಕ್ಲಾ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದು, ಕಾಂಗ್ರೆಸ್ ಮುಖಂಡರಾಗಿದ್ದ ಬುಡಕಟ್ಟು ಸಮುದಾಯದ ನಾಯಕ ನಂದಕುಮಾರ ಪಟೇಲ ಅವರನ್ನು ಕೊಂದು ಹಾಕಿದ ಮನಸ್ಥಿತಿಗಳಿಂದ ಹಿಂಸೆಯ ಹೊರತಾಗಿ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ ಎಂದು ಟೀಕಾ ಪ್ರಹಾರ ನಡೆಸಿದರು.
ಕರ್ನಾಟಕದಲ್ಲಿ ಬಿಜೆಪಿ ಸೋಲುವ ಹಾದಿಯಲ್ಲಿದೆ, ಸೋತಿರುವ ಮನಸ್ಥಿತಿ ಹಾಗೂ ಸೋಲುವ ಮನಸ್ಥಿತಿಗಳು ಮಾತ್ರ ಇಂಥ ಪ್ರಚೋದನಕಾರಿ ಹೇಳಿಕೆ ನೀಡಲು ಸಾಧ್ಯ ಎಂಬುದನ್ನು ಕರ್ನಾಟಕದಲ್ಲಿ ಸಚಿವ ಅಶ್ವತ್ಥನಾರಾಯಣ ಮುಂದುವರೆಸಿದ್ದಾರೆ ಎಂದು ಕುಟುಕಿದರು.
ಮತ್ತೊಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಅವರನ್ನು ಕೇಳಿದ್ದಾದರೂ ಏನು? ಎಲ್‍ಐಸಿ ಸೇರಿದಂತೆ ಇತರೆ ಸಾರ್ವಜನಿಕ ಆರ್ಥಿಕ ಉದ್ಯಮಗಳಲ್ಲಿ ಅದಾನಿ ನಡೆಸಿದ ವ್ಯವಹಾರದ ಕುರಿತು ದೇಶದ ಜನರಿಗೆ ಉತ್ತರ ಕೊಡಿ ಎಂದಲ್ಲವೇ ಎಂದು ಪ್ರಶ್ನಿಸಿದರು.
140 ಕೋಟಿ ಭಾರತೀಯರಿಗೆ ಉತ್ತರದಾಯಿ ಆಗಬೇಕಿರುವುದು ದೇಶದ ಪ್ರಧಾನಿ ಜವಾಬ್ದಾರಿ ಅಲ್ಲವೇ ಎಂದು ಟೀಕಾಸ್ತ್ರ ಪ್ರಯೋಗಿಸಿದ ಸುರ್ಜೇವಾಲಾ, ಇಂಥ ಸ್ಥಿತಿಯಲ್ಲಿ ಧ್ವನಿ ಎತ್ತಬೇಕಿದ್ದ ಮಾಧ್ಯಮಗಳ ಕತ್ತನ್ನೇ ಹಿಸುಕುವ ಕೆಲಸ ಮಾಡಿದ್ದಾರೆ ಎಂದು ಹರಿಹಾಯ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
ಕಸ್ತೂರಿಂಗನ್ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.