ಬಿಜೆಪಿ ಭ್ರಷ್ಟಾಚಾರದ ಲೆಕ್ಕವನ್ನು ಜನ ಚುಕ್ತಾ ಮಾಡಲಿದ್ದಾರೆ:ಅನ್ಸಾರಿ
Team Udayavani, Feb 25, 2023, 9:53 PM IST
ಗಂಗಾವತಿ: ಕಾಂಗ್ರೆಸ್ ಅಭಿವೃದ್ಧಿ ಪರವಾಗಿ ಆಡಳಿತ ನಡೆಸಿದರೆ ಬಿಜೆಪಿ ಶೇ.40 ರಷ್ಟು ಲಂಚದ ಭ್ರಷ್ಠಾಚಾರ ನಡೆಸಿದ್ದು 2023 ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಬಿಜೆಪಿಯ ಲೆಕ್ಕ ಚುಕ್ತಾ ಮಾಡಲಿದ್ದಾರೆಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿದರು.
ಅವರು ನಗರದ ಮಹೆಬೂಬ ನಗರ ಮತ್ತು ಗೌಶಿಯ ಕಾಲೋನಿಗಳಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ “ಅಭಿವೃದ್ಧಿಯಾಗಿ ಅನ್ಸಾರಿ ಆಗಮನ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಗೃಹ ಲಕ್ಷ್ಮೀ, ಗೃಹಜ್ಯೋತಿ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತರಲಾಗುವುದು, ಭ್ರಷ್ಟ ಬಿಜೆಪಿ ಸರ್ಕಾರದ ಕಾರ್ಯವೈಖರಿಗೆ ಜನ ಬೇಸತ್ತು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಲಿದ್ದಾರೆ, ಬಡ ಮಕ್ಕಳಿಗೆ ಸಮವಸ್ತ್ರ,ಶೂ, ಲ್ಯಾಪ್ಟಾಪ್ ವಿತರಿಸದೆ ಅನ್ಯಾಯ ಮಾಡಿದೆ, ಅನ್ನಭಾಗ್ಯ ಅಕ್ಕಿಯಲ್ಲಿ 2 ಕೆಜಿ ಕಡಿತ ಮಾಡಿದೆ, ಬಿಜೆಪಿ ಅಕ್ರಮ ನೇಮಕಾತಿ, ಕಮಿಷನ್ ದಂಧೆ,ಬೆಲೆ ಏರಿಕೆ ವಿರುದ್ಧ ಜನ ರೋಸಿ ಹೋಗಿದ್ದಾರೆ ಮತ್ತು ಗಂಗಾವತಿ ಕ್ಷೇತ್ರಕ್ಕೆ ಚುನಾವಣೆಗೆ ಹೊಸ ಪಕ್ಷದಿಂದ ಸ್ಪರ್ಧಿಸಲು ವ್ಯಕ್ತಿ ಒಬ್ಬರು ಬಂದಿದ್ದಾರೆ ಅವರ ಬಣ್ಣದ ಮಾತಿಗೆ ಯುವಕರು ಮತ್ತು ಕ್ಷೇತ್ರದ ಜನತೆ ಬಲಿಯಾಗಬೇಡಿ, ನಾನು ನಿಮ್ಮವನು ನಿಮ್ಮ ಜೊತೆ ಇರುತ್ತೇನೆ ಆಶೀರ್ವಾದ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ನಗರ ಘಟಕದ ಅಧ್ಯಕ್ಷ ಶ್ಯಾಮಿದ್ ಮನಿಯರ್ ನಗರಸಭಾ ಸದಸ್ಯರಾದ ಮನೋಹರ್ ಸ್ವಾಮಿ ಹಿರೇಮಠ, ಕಾಶಿಮ್ ಸಾಬ್ ಗದ್ವಾಲ್, ಈ.ರಾಘವೇಂದ್ರ, ಪಕ್ಷದ ಹಿರಿಯ ನಾಯಕರಾದ ಎಸ್. ಬಿ. ಖಾದ್ರಿ, ಮಾಜಿ ಸದಸ್ಯರಾದ ಕಮಲಿ ಬಾಬಾ, ಪಕ್ಷದ ನಾಯಕರಾದ ಗಿರೀಶ್ ಗಾಯಕ್ವಾಡ್, ಜ್ಯೋತಿ ಸಿಂಗ್, ದುರ್ಗೇಶ್ ದೊಡ್ಡಮನಿ,ಸಲೀಂ, ಗಿಡ್ಡ ಹುಸೇನ್, ಮಂಜು, ಫಯಾಜ್, ದಾವುಲ್, ಗೌಸ್ ಮತ್ತು ಮೈಬೂಬ ನಗರ ಮತ್ತು ಗೌಸಿಯ ಕಾಲೋನಿಯ ಕಾಂಗ್ರೆಸ್ ಪಕ್ಷದ ನಾಯಕರುಗಳು ಮತ್ತು ಸಾವಿರಾರು ಕಾರ್ಯಕರ್ತರು, ಮಹಿಳೆಯರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೊಪ್ಪಳ:ಈ ರಸ್ತೆಗಳಲ್ಲಿ ನಿತ್ಯವೂ ನರಕ ದರ್ಶನ-ಜೀವಭಯದಲ್ಲೇ ಸಂಚಾರ
ಕುಷ್ಟಗಿ: ಬಿಳಿ ಜೋಳಕ್ಕೂ ಲಗ್ಗೆಯಿಟ್ಟ ಲದ್ದಿ ಹುಳು
Gangavathi: ಆನೆಗೊಂದಿ ರಾಜವಂಶಸ್ಥ ಎಸ್.ಆರ್.ಕೆ. ರಾಜಬಹಾದ್ದೂರ್ ನಿಧನ
Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ
ಗಂಗಾವತಿ: ಹಳ್ಳದ ಬದಿ ಹೊಸ್ಕೇರಾ-ಡಗ್ಗಿ ದಲಿತರ ಶವ ಸಂಸ್ಕಾರ- ಅಸ್ಪ್ರಶ್ಯತೆ ಇನ್ನೂ ಜೀವಂತ!
MUST WATCH
ಹೊಸ ಸೇರ್ಪಡೆ
Ripponpete: ಖಾಸಗಿ ಬಸ್ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ
Gangolli: ಪಿಸ್ತೂಲ್ ತೋರಿಸಿ ಬೆದರಿಕೆ: ಐವರು ಆರೋಪಿಗಳಿಗೆ ಜಾಮೀನು
Manipal: ಮಾಹೆ ವಿವಿ: ಇಂದಿನಿಂದ 16ರವರೆಗೆ ಸಂಶೋಧನಾ ದಿನಾಚರಣೆ: ಡಾ.ಎಚ್.ಎಸ್.ಬಲ್ಲಾಳ್
Udupi: ಹಿರಿಯ ಧರ್ಮಗುರು, ಶಿಕ್ಷಣ ತಜ್ಞ ರೆ.ಡಾ.ಲಾರೆನ್ಸ್ ಸಿ. ಡಿ’ಸೋಜಾ ಇನ್ನಿಲ್ಲ
Brahmavara: ಲಾಕ್‌ಅಪ್ ಡೆತ್ ಪ್ರಕರಣ: ಮರಣೋತ್ತರ ಪರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.