ಭವಿಷ್ಯದಲ್ಲಿ ಬಹುದೊಡ್ಡ “ಪ್ಲಾಸ್ಟಿಕ್ ಹಬ್’ ಆಗಲಿರುವ ಕರಾವಳಿ
ಎಂಆರ್‌ಪಿಎಲ್‌ನಿಂದ ಪ್ಲಾಸ್ಟಿಕ್ ಉತ್ಪನ್ನ ತಯಾರಿ ಕಂಪೆನಿ ಖರೀದಿ
Team Udayavani, Feb 12, 2021, 4:50 AM IST
ಮಂಗಳೂರು: ಕರಾವಳಿಯಲ್ಲಿ ಕೇಂದ್ರ ಸರಕಾರದ ಬಹುನಿರೀಕ್ಷಿತ “ಪ್ಲಾಸ್ಟಿಕ್ ಪಾರ್ಕ್’ ಯೋಜನೆ ಸಾಕಾರಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಎಂಆರ್‌ಪಿಎಲ್ ಬೃಹತ್ ಪ್ರಮಾಣದಲ್ಲಿ ಪಾಲಿಸ್ಟರ್ ಬಟ್ಟೆ, ಪ್ರಯೋಗಾಲಯಗಳಿಗೆ ಅಗತ್ಯವಾದ ರಾಸಾಯನಿಕಗಳ ಉತ್ಪಾದನೆ-ಮಾರಾಟ ಆರಂಭಿಸಲು ಸಿದ್ಧವಾಗಿದೆ.
ಇದರಿಂದ ಸಾವಿರಾರು ಮಂದಿಗೆ ಉದ್ಯೋಗಾವಕಾಶ ಮತ್ತು ವ್ಯವಹಾರ ಕ್ಷೇತ್ರದಲ್ಲಿ ಜಾಗತಿಕವಾಗಿ ಗುರುತಿಸಿಕೊಳ್ಳುವ ನಿರೀಕ್ಷೆಯಿದೆ.
ಒಎನ್‌ಜಿಸಿ ಮಂಗಳೂರು ಪೆಟ್ರೋಕೆಮಿಕಲ್ಸ್ ಲಿ. (ಒಎಂಪಿಎಲ್) ಎನ್ನುವ ಪ್ಲಾಸ್ಟಿಕ್ ಉತ್ಪನ್ನ ಮತ್ತು ಕೆಮಿಕಲ್ಸ್ ತಯಾರಿಸುವ ದಕ್ಷಿಣ ಭಾರತದ ಅತೀ ದೊಡ್ಡ ಕಂಪೆನಿಯನ್ನು ಎಂಆರ್‌ಪಿಎಲ್ ಖರೀದಿಸುತ್ತಿದೆ. ಖರೀದಿ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು ಮುಂದಿನ ದಿನಗಳಲ್ಲಿ ಒಎಂಪಿಎಲ್ ಪೆಟ್ರೋಕೆಮಿಕಲ್ಸ್‌ನ ಎಲ್ಲ ವ್ಯವಹಾರಗಳನ್ನು ಎಂಆರ್‌ಪಿಎಲ್ ನೋಡಿಕೊಳ್ಳಲಿದೆ. ಇಲ್ಲಿಯವರೆಗೆ, ಎಂಆರ್‌ಪಿಎಲ್ ನೀಡುವ ನಾಫ್ತಾವನ್ನು ಬಳಸಿಕೊಂಡು “ಬೆನ್ಸಿನ್’ ಹಾಗೂ “ಪಾರಾಕ್ಸೈಲಿನ್’ ಎಂಬ ಎರಡು ಆರೋಮಾಟಿಕ್ಸ್ ಉತ್ಪನ್ನವನ್ನು ಒಎಂಪಿಎಲ್ ಪ್ರತ್ಯೇಕವಾಗಿ ನಡೆಸುತ್ತಿತ್ತು. ನಾಫ್ತಾದ ವೆಚ್ಚವನ್ನು ಒಎಂಪಿಎಲ್ ಎಂಆರ್‌ಪಿಎಲ್‌ಗೆ ನೀಡುತ್ತಿತ್ತು. ಉತ್ಪನ್ನವಾದ ಬಳಿಕ ಇದರ ಮಾರಾಟ-ವ್ಯವಹಾರವನ್ನು ಒಎಂಪಿಎಲ್ ನೋಡಿಕೊಳ್ಳುತ್ತಿತ್ತು.
ಪೆನ್ನಿನಿಂದ ಹಿಡಿದು ಕಂಪ್ಯೂಟರ್‌ವರೆಗೆ ಪ್ರತಿಯೊಂದು ವಸ್ತುವಿನಲ್ಲಿ ಅಡಕವಾಗಿರುವ ಪ್ಲಾಸ್ಟಿಕ್ ಭಾಗವನ್ನು ಕೂಡ ಈ ಘಟಕದಲ್ಲಿ ತಯಾರಿಸಲಾಗುತ್ತಿದೆ. ಅಲ್ಲದೆ ಪಾಲಿಸ್ಟರ್ ಬಟ್ಟೆ ಉತ್ಪಾದನೆ, ಅದರ ಪೂರಕ ಉತ್ಪನ್ನಗಳ ತಯಾರಿ, ಲಘು ಪಾನೀಯ, ನೀರಿನ ಬಾಟಲಿಗಳಿಗೆ ಬಳಸುವ ಹೊರಪದರವನ್ನು ಒಎಂಪಿಎಲ್‌ನಲ್ಲಿ ಉತ್ಪಾದಿಸಲಾಗುತ್ತದೆ. ಅದೇ ರೀತಿ ಸ್ಟೈರಿನ್, ಪಾಲಿ ಸ್ಟೈರಿನ್, ಫೆನೊಲ್, ನೈಲನ್, ಲೈನರ್ ಸಹಿತ ಲ್ಯಾಬ್ ಕೆಮಿಕಲ್‌ಗಳನ್ನು ಉತ್ಪಾದಿಸಲಾಗುತ್ತದೆ.
ಪ್ಲಾಸ್ಟಿಕ್ ಪಾರ್ಕ್ ನಿರೀಕ್ಷೆ
ನಗರದ ಗಂಜಿಮಠ ಪರಿಸರದಲ್ಲಿ ಕೇಂದ್ರ ಸರಕಾರದ ಬಹುನಿರೀಕ್ಷಿತ “ಪ್ಲಾಸ್ಟಿಕ್ ಪಾರ್ಕ್’ ಯೋಜನೆ ಸಾಕಾರಗೊಳ್ಳಲು ಸದ್ಯ ಹಸುರು ನಿಶಾನೆ ದೊರೆತಿರುವ ಸಂದರ್ಭದಲ್ಲಿಯೇ ಎಂಆರ್‌ಪಿಎಲ್ ವತಿಯಿಂದ ಒಎಂಪಿಎಲ್ ಕೂಡ ನಿರ್ವಹಣೆ ಆಗುತ್ತಿರುವುದು ಗಮನಿಸಬೇಕಾದ ಅಂಶ. ಯಾಕೆಂದರೆ ಒಎಂಪಿಎಲ್‌ನಲ್ಲಿಯೂ ಪ್ಲಾಸ್ಟಿಕ್ ಸಂಬಂಧಿತ ಉತ್ಪನ್ನಗಳೇ ಹೆಚ್ಚು ಉತ್ಪಾದನೆ ಆಗುತ್ತಿದ್ದು, ಪ್ಲಾಸ್ಟಿಕ್ ಪಾರ್ಕ್‌ನಲ್ಲಿಯೂ ಇದೇ ಮಾದರಿಯ ವಿವಿಧ ಉತ್ಪನ್ನಗಳು ತಯಾರಾಗಲಿವೆ. ಇದರಿಂದಾಗಿ ಕರಾವಳಿಯಲ್ಲಿ “ಪ್ಲಾಸ್ಟಿಕ್ ಹಬ್’ ನಿರ್ಮಾಣವಾಗುವ ಎಲ್ಲ ಸಾಧ್ಯತೆ ಇದೆ.
ಕರಾವಳಿಯಲ್ಲಿ
ಉತ್ಪಾದನಾ ಕ್ರಾಂತಿ ಕರಾವಳಿಯಲ್ಲಿ ಬೃಹತ್ ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣಕ್ಕೆ ಈಗಾಗಲೇ ಒಪ್ಪಿಗೆ ನೀಡಲಾಗಿದ್ದು, ಈ ಮೂಲಕ ಕರಾವಳಿಯಲ್ಲಿ ಬಹುದೊಡ್ಡ ಉದ್ಯೋಗ ಹಾಗೂ ಉತ್ಪಾದನಾ ಕ್ರಾಂತಿ ನಡೆಯಲಿದೆ. ಜತೆಗೆ ಒಎಂಪಿಎಲ್‌ನ ಷೇರು ಎಂಆರ್‌ಪಿಎಲ್ ಪಡೆಯುವ ಮೂಲಕ ಅಲ್ಲಿಯೂ ಉತ್ಪಾದನಾ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ಆಗಲಿದೆ. ಹೀಗಾಗಿ ಕರಾವಳಿ ಭಾಗ ಮುಂದೆ ಪ್ಲಾಸ್ಟಿಕ್ ಹಬ್ ಮಾದರಿಯಲ್ಲಿ ಜನಾಕರ್ಷಣೆ ಪಡೆಯಲಿದೆ.
– ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವರು
ಎಂಆರ್‌ಪಿಎಲ್ ಷೇರು ಶೇ.99.99ಕ್ಕೆ ಏರಿಕೆ
ಈ ಹಿಂದಿನ ನಿರ್ದೇಶಕ ಮಂಡಳಿ ಸಭೆಯಲ್ಲಿ ನಿರ್ಧರಿಸಿರುವಂತೆ ಒಎನ್‌ಜಿಸಿಯ ಸಹಸಂಸ್ಥೆಯಾದ ಒಎಂಪಿಎಲ್‌ನ 1,24,66,53,746 ಈಕ್ವಿಟಿ ಷೇರು ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಜ. 1ರಂದು ಒಎಂಪಿಎಲ್‌ನಿಂದ ಎಂಆರ್‌ಪಿಎಲ್‌ನ ಖಾತೆಗೆ ಷೇರು ವರ್ಗಾಯಿಸಿದೆ. ಈ ಮೂಲಕ ಒಎಂ ಪಿಎಲ್‌ನಲ್ಲಿ ಎಂಆರ್‌ಪಿಎಲ್‌ನ ಷೇರು ಹೋಲ್ಡಿಂಗ್ ಶೇ 99.9998ಕ್ಕೇರಿಕೆಯಾಗಿದೆ.
– ಎಂ.ವೆಂಕಟೇಶ್, ವ್ಯವಸ್ಥಾಪಕ ನಿರ್ದೇಶಕರು, ಎಂಆರ್‌ಪಿಎಲ್
– ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.