ದೇವರಕೆರೆಯಲ್ಲಿ ಜೀವ ವೈವಿಧ್ಯಕ್ಕೆ ಮಾರಕವಾದ ಪ್ಲೆಕೋ ಮೀನುಗಳು ಪತ್ತೆ!
Team Udayavani, Feb 4, 2021, 6:57 PM IST
ಬೆಂಗಳೂರು: ನಗರದ ಇಸ್ರೋ ಲೇಔಟ್ ದೇವರಕೆರೆ ಪಾರ್ಕ್ ಸಮೀಪದ ಕೆರೆಯಲ್ಲಿ ವಿದೇಶಿ ತಳಿ ಹಾಗೂ ಜೀವ ವೈವಿಧ್ಯಕ್ಕೆ ಹಾನಿ ಮಾಡಲಾಗುತ್ತದೆ ಎನ್ನುವ ಪ್ಲೆಕೋ ಮೀನುಗಳನ್ನು ಬಿಡಲಾಗಿದ್ದು, ಇದನ್ನು ತೆರವು ಮಾಡಲು ಪರಿಸರ ತಜ್ಞರು ಹರಸಾಹಸ ಪಡುತ್ತಿದ್ದಾರೆ.
ದೇವರಕೆರೆ ಪಾರ್ಕ್ ಸಮೀಪದ ಕೆರೆಯನ್ನು ಪಾಲಿಕೆಯ ಕೆರೆ ವಿಭಾಗದ ಅಧಿಕಾರಿಗಳು ಪುನರುಜ್ಜೀವನ ಮಾಡುವ ಉದ್ದೇಶದಿಂದ ಹೂಳು ಎತ್ತುತ್ತಿದ್ದರು. ಈ ವೇಳೆ ಪ್ಲೆಕೋ ಮೀನು ಪತ್ತೆೆ ಆಗಿದ್ದು,ಸ್ಥಳೀಯರು ತಿಳುವಳಿಕೆ ಕೊರತೆಯಿಂದ ಈ ಮೀನುಗಳನ್ನು ರಕ್ಷಿಸಲು ಟ್ಯಾಂಕರ್‌ಗಳ ಮೂಲಕ ಕೆರೆಗೆ ನೀರು ಬಿಟ್ಟಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿದ ಪರಿಸರ ತಜ್ಞ ವಿಜಯ್ ನಿಶಾಂತ್ ಅವರು, ಪ್ಲೆಕೋ ಮೀನುಗಳು ವಿದೇಶಿ ತಳಿಯಾಗಿದ್ದು, ಸ್ಥಳೀಯರ ತಿಳುವಳಿಕೆ ಕೊರತೆಯಿಂದ ಇವುಗಳನ್ನು ರಕ್ಷಿಸಲು ಮುಂದಾಗಿದ್ದಾರೆ. ಇದನ್ನು ಅಕ್ವೇರಿಯಂಗಳಲ್ಲಿ ಬಳಸುತ್ತಾರೆ. ಸ್ಥಳೀಯರು ಅಥವಾ ಬೇರೆ ಎಲ್ಲಿಂದಲೋ ಈ ಮೀನನ್ನು ಕೆರೆಗೆ ತಂದುಬಿಟ್ಟಿರುವ ಸಾಧ್ಯತೆ ಇದೆ. ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದ್ದು, ಪಾಲಿಕೆಯ ಅಧಿಕಾರಿಗಳು ಇದನ್ನು ತೆರವು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:ಸಾಹಿತಿ ಭಗವಾನ್ ಮುಖಕ್ಕೆ ಮಸಿ ಬಳಿದ ಕ್ರಮ ಖಂಡನೀಯ: ಸಚಿವ ಅರವಿಂದ ಲಿಂಬಾವಳಿ
ಪ್ಲೆಕೋ ಮೀನು ಹೆಚ್ಚಾಗಿ ದಕ್ಷಿಣ ಅಮೆರಿಕದಲ್ಲಿ ಕಂಡುಬರುತ್ತವೆ. ಇದು ಸಹ ಕ್ಯಾಟ್‌ಫಿಶ್ ತಳಿ ಮಾದರಿಯಾಗಿದ್ದು, ಇದರಿಂದ ಉಳಿದ ಜಲಚರಗಳಿಗೆ ಹಾನಿಯಾಗುತ್ತದೆ ಎನ್ನುತ್ತಾರೆ ಪರಿಸರವಾದಿ ಡಾ.ಕ್ಷಿತಿಜ್ ಅರಸ್.
ಈ ಮೀನುಗಳಿಂದ ಸ್ಥಳೀಯ ಜೀವ ವೈವಿಧ್ಯ ಹಾಳಾಗುತ್ತವೆ. ಈ ಮೀನು ಉಳಿದ ಜಲಚರಗಳಿಗೆ ಹಾನಿಮಾಡಿ ಸಾಯಿಸುತ್ತವೆ. ಇಲ್ಲವೇ ತಿನ್ನುತ್ತವೆ. ಹೀಗಾಗಿ, ಈ ರೀತಿಯ ಮೀನುಗಳ ಸಾಗಾಣಿಕೆ ಹಾಗೂ ಸಾಕುವುದಕ್ಕೆ ಕಡಿವಾಣ ಹಾಕಬೇಕು. ಕಠಿಣ ಕಾನೂನು ರೂಪಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.
ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನೆ: ದೇವರಕೆರೆಯಲ್ಲಿರುವ ಪ್ಲೆಕೋ ಮೀನಿನ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಕೊರತೆ ಇದ್ದು, ಇದನ್ನು ಉಳಿಸಿಕೊಳ್ಳಲು ಮುಂದಾಗಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲೂ ಮೀನುಗಳು ಒದ್ದಾಡುತ್ತಿರುವ ಪೋಟೋ ಹಾಗೂ ವಿಡಿಯೋ ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.