ಕಣ ಚಿತ್ರಣ: ಬೀದರ್‌ನಲ್ಲಿ ಮತ ವಿಭಜನೆ ಆತಂಕ
ಬೀದರ್ ಜಿಲ್ಲಾ ರೌಂಡಪ್; 7 ಕ್ಷೇತ್ರಗಳಲ್ಲೂ ವಿಶಿಷ್ಟ ರಾಜಕಾರಣ - ಬೆವರು ಹರಿಸುತ್ತಿರುವ ಅಭ್ಯರ್ಥಿಗಳು
Team Udayavani, May 1, 2023, 7:33 AM IST
ವಿಧಾನಸಭೆ ಕದನಕ್ಕೆ ದಿನಗಣನೆ ಶುರುವಾಗುತ್ತಿದ್ದಂತೆ ಗಡಿನಾಡು ಬೀದರನಲ್ಲಿ ಬಿಸಿಲಬ್ಬರದಂತೆ ಚುನಾವಣಾ ಕಾವು ಏರತೊಡಗಿದೆ. ಜಿಲ್ಲೆಯ ಪ್ರತಿ ಕ್ಷೇತ್ರಗಳು ಈ ಬಾರಿ ಜಿದ್ದಾಜಿದ್ದಿನ ಸ್ಪರ್ಧೆಗೆ ಸಾಕ್ಷಿಯಾಗುತ್ತಿದ್ದು, ಫಲಿತಾಂಶ ತೀವ್ರ ಕುತೂಹಲ ಹೆಚ್ಚಿಸುವಂತೆ ಮಾಡಿದೆ.
ಔರಾದ ಮೀಸಲು ಕ್ಷೇತ್ರ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 6 ಕ್ಷೇತ್ರಗಳಿದ್ದು, ಮೂರು ಕಡೆ ಕಾಂಗ್ರೆಸ್, ಎರಡು ಕಡೆ ಬಿಜೆಪಿ ಮತ್ತು ಒಂದು ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಈ ಬಾರಿಯ ರೋಚಕ ಹಣಾಹಣಿ ನಡೆಯಲಿರುವ ಜಿಲ್ಲೆಯಲ್ಲಿ ಕೆಲವೆಡೆ ನೇರ ಮತ್ತು ಚತುಷ್ಕೋನ ಸ್ಪರ್ಧೆ ಇದ್ದರೆ, ಕೆಲವೆಡೆ ಬಂಡಾಯದ ಬಿಸಿಯಿಂದ ತ್ರಿಕೋನ ಸ್ಪರ್ಧೆ ನಡೆಯುವುದು ಪಕ್ಕಾ ಆಗಿದೆ.
ಬೀದರ್
ಹಾಲಿ ಶಾಸಕ ರಹೀಮ್ ಖಾನ್ ಮತ್ತೂಮ್ಮೆ ಅಗ್ನಿ ಪರೀಕ್ಷೆಗೆ ಇಳಿದಿದ್ದು, ಬಿಜೆಪಿಯಿಂದ ಕ್ಷತ್ರೀಯ ಸಮಾಜದ ಈಶ್ವರಸಿಂಗ್ ಠಾಕೂರ್ ಕಣದಲ್ಲಿದ್ದಾರೆ. ಕಮಲ ಪಡೆಯಿಂದ ಟಿಕೆಟ್ ವಂಚಿತರಾದ ಲಿಂಗಾಯತ ಸಮಾಜದ ಸೂರ್ಯಕಾಂತ ನಾಗಮಾರಪಳ್ಳಿ ತೆನೆ ಹೊತ್ತು ಜೆಡಿಎಸ್‌ನಿಂದ ಅಖಾಡಕ್ಕೆ ಧುಮುಕ್ಕಿದ್ದಾರೆ. ಈ ಮೂವರು ಅಭ್ಯರ್ಥಿಗಳ ನಡುವೆ ತ್ರಿಕೋನ ಸ್ಪರ್ಧೆ ಬಹುತೇಕ ಖಚಿತವಾಗಿದೆ. ಎರಡು ಬಾರಿ ಸೋಲುಂಡಿರುವ ಸೂರ್ಯಕಾಂತಗೆ ಈ ಚುನಾವಣೆ ಮಾಡು ಇಲ್ಲವೇ ಮಡಿ ಎಂಬಂತಿದ್ದು, ಭರ್ಜರಿ ಪ್ರಚಾರದ ಮೂಲಕ ಎದುರಾಳಿಗಳಿಗೆ ಪ್ರಬಲ ಟಕ್ಕರ್ ನೀಡುತ್ತಿದ್ದಾರೆ. ಬಿಜೆಪಿಯಿಂದ ನಾಗಮಾರಪಳ್ಳಿ ಬಂಡಾಯ ಬಿಜೆಪಿ ಮೇಲೆ ಕೊಂಚ ಪರಿಣಾಮ ಬೀರಲಿದ್ದರೆ, ಇತ್ತ ಕಾಂಗ್ರೆಸ್‌ನ ಅಲ್ಪಸಂಖ್ಯಾತರ ಮತಗಳನ್ನು ಜೆಡಿಎಸ್ ಚಿಹ್ನೆ ಮೇಲೆ ಸೆಳೆಯಬಹುದು. ಜತೆಗೆ ಟಿಕೆಟ್ ಕೈ ತಪ್ಪಿಸಿದರ ಅನುಕಂಪ ಸಹ ನಾಗಮಾರಪಳ್ಳಿಗೆ ವಕೌìಟ್ ಆಗುವ ಸಾಧ್ಯತೆ ಇದೆ.
ಬೀದರ ದಕ್ಷಿಣ
ಜಿಲ್ಲೆಯ ಏಕೈಕ ಜೆಡಿಎಸ್ ಶಾಸಕ ಬಂಡೆಪ್ಪ ಖಾಶೆಂಪುರ್ ಕಣದಲ್ಲಿದ್ದಾರೆ. ಪ್ರತಿ ಸ್ಪಧಿ ìಯಾಗಿ ಬಿಜೆಪಿಯಿಂದ ಕೆಎಸ್‌ಐಐಡಿಸಿ ಅಧ್ಯಕ್ಷ ಡಾ|ಶೈಲೇಂದ್ರ ಬೆಲ್ದಾಳೆ, ಕಾಂಗ್ರೆಸ್‌ನಿಂದ ಮಾಜಿ ಶಾಸಕ ಅಶೋಕ ಖೇಣಿ ಅಖಾಡದಲ್ಲಿದ್ದಾರೆ. ಮುಖ್ಯವಾಗಿ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದರಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪಧಿ ìಸಿರುವ ಚಂದ್ರಾಸಿಂಗ್ ಮೂರು ಪಕ್ಷಗಳಿಗೆ ಪ್ರಬಲ ಟಕ್ಕರ್ ನೀಡುತ್ತಿದ್ದಾರೆ. ಹಾಗಾಗಿ ಈ ಕ್ಷೇತ್ರದಲ್ಲಿ ಚತುಷೊRàನ್ ಹಣಾಹಣಿ ಏರ್ಪಡಲಿದೆ. ಕ್ಷೇತ್ರವು ಲಿಂಗಾಯತ, ಮುಸ್ಲಿಂ ಸಮುದಾಯದವರ ಪ್ರಾಬಲ್ಯ ಹೊಂದಿದೆ. ಖೇಣಿ, ಬೆಲ್ದಾಳೆ ಲಿಂಗಾಯತರಾಗಿದ್ದರೆ, ಖಾಶೆಂಪುರ ಕುರುಬ ಮತ್ತು ಚಂದ್ರಾಸಿಂಗ್ ರಜಪುತ್ ಸಮುದಾಯಕ್ಕೆ ಸೇರಿದ್ದಾರೆ. ಬಂಡಾಯ ಎದ್ದಿರುವ ಚಂದ್ರಾಸಿಂಗ್ ಕಾಂಗ್ರೆಸ್‌ಗೆ ಮಗ್ಗಲು ಮುಳ್ಳಾಗಿ ಪರಿಣಮಿಸಿದ್ದಾರೆ. ಇಲ್ಲಿ ಲಿಂಗಾಯತ ಮತಗಳು ವಿಭಜನೆಯಾದರೂ ಬಂಡೆಪ್ಪ ಮತ್ತು ಚಂದ್ರಾಸಿಂಗ್ ಅವರಿಗೆ ಲಾಭ ಆಗಬಹುದು.
ಔರಾದ
ಜಿಲ್ಲೆಯ ಮೀಸಲು ಕ್ಷೇತ್ರವಾಗಿರುವ ಔರಾದನಲ್ಲಿ ಸಚಿವ ಪ್ರಭು ಚವ್ಹಾಣ ಬಿಜೆಪಿಯಿಂದ ಮತ್ತು ನಿವೃತ್ತ ಕೆಎಎಸ್ ಅಧಿ ಕಾರಿ ಡಾ|ಭೀಮಸೇನರಾವ್ ಶಿಂಧೆ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಿದ್ದಾರೆ. ಜೆಡಿಎಸ್‌ನಿಂದ ಜೈಸಿಂಗ್ ರಾಠೊಡ್ ಕಣದಲ್ಲಿದ್ದಾರೆ. ಇಲ್ಲಿ ಚವ್ಹಾಣ ಮತ್ತು ಡಾ|ಶಿಂಧೆ ನಡುವೆ ನೇರ ಹಣಾಹಣಿ ನಡೆಯಲಿದ್ದು, ತೀವ್ರ ರೋಚಕತೆಯಿಂದ ಗಮನ ಸೆಳೆದಿದೆ. ಕಳೆದ ಬಾರಿ ಕಡಿಮೆ ಅಂತರದಲ್ಲಿ ಗೆದ್ದಿದ್ದ ಸಚಿವ ಚವ್ಹಾಣಗೆ ಈ ಬಾರಿ ಡಾ|ಶಿಂಧೆ ಸ್ಪರ್ಧೆಯಿಂದ ಗೆಲುವಿನ ಹಾದಿ ಕಠಿಣ ಎನಿಸಿದೆ. ಲಿಂಗಾಯತ, ಮರಾಠಾ ಮತ್ತು ಲಂಬಾಣಿ ಮತಗಳು ಈ ಕ್ಷೇತ್ರದಲ್ಲಿ ನಿರ್ಣಾಯಕವಾಗಿವೆ. ಹಾಗಾಗಿ ಈ ಸಮಾಜದ ಓಟುಗಳ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಚವ್ಹಾಣ ವಿರುದ್ಧ ಕೊಂಚ ಆಡಳಿತ ವಿರೋ ಧಿ ಅಲೆ ಇದ್ದರೆ, ಇತ್ತ ಕಾಂಗ್ರೆಸ್‌ನ ಡಾ|ಶಿಂಧೆಗೆ ಟಿಕೆಟ್ ವಂಚಿತರಾಗಿ ಬಂಡಾಯ ಎದ್ದಿರುವ ಡಾ|ಲಕ್ಷ್ಮಣ ಸೊರಳ್ಳಿಕರ್ ಸ್ಪರ್ಧೆ ಅಡ್ಡಗಾಲು ಆಗಿದ್ದು, ಪರಿಶಿಷ್ಟರ ಮತ್ತು ಹಿಂದುಳಿದವರ ಮತ ವಿಭಜನೆ ಆತಂಕವಿದೆ. ಈ ಮಧ್ಯ ಕಮಲ ಕೋಟೆಯನ್ನು ಶಿಂಧೆ ಒಡೆಯುತ್ತಾರಾ ಎಂಬ ಕುತೂಹಲ ಇದೆ.
ಭಾಲ್ಕಿ
ಖಂಡ್ರೆದ್ವಯರ ಕಾದಾಟದಿಂದ ರಾಜ್ಯ ರಾಜಕೀಯದ ಗಮನ ಸೆಳೆಯುವ ಭಾಲ್ಕಿ ಕ್ಷೇತ್ರ ಮತ್ತೂಮ್ಮೆ ಇಬ್ಬರು ಸಹೋದರರ ಕಾಳಗಕ್ಕೆ ಸಾಕ್ಷಿಯಾಗಲಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಈಶ್ವರ ಖಂಡ್ರೆ ಮತ್ತೂಂದು ಅವ ಧಿಗೆ ಶಾಸಕರಾಗಲು ಕಾಂಗ್ರೆಸ್ಸಿನಿಂದ ಕಣಕ್ಕೆ ಧುಮುಕಿದ್ದರೆ, ಬಿಜೆಪಿಯಿಂದ ಮಾಜಿ ಶಾಸಕ ಪ್ರಕಾಶ ಖಂಡ್ರೆ ಅವರಿಗೆ ಎದುರಾಳಿ ಆಗಿದ್ದಾರೆ. ಜೆಡಿಎಸ್ ಅಭ್ಯರ್ಥಿ ರವುಫ್ ಪಟೇಲ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದಾರೆ. ಹಾಗಾಗಿ ಬಿಜೆಪಿ-ಕಾಂಗ್ರೆಸ್ ನಡುವೆ ನೆಕ್ ಟು ನೆಕ್ ಫೈಟ್ ಇದೆ. ಇಲ್ಲಿ ಲಿಂಗಾಯತರು ಮತ್ತು ಮರಾಠಾ ಸಮುದಾಯದ ಪ್ರಾಬಲ್ಯ ಇದೆ. ಇಬ್ಬರು ಪ್ರಮುಖ ಸ್ಪರ್ಧಾಳುಗಳು ಲಿಂಗಾಯತರೇ ಆಗಿರುವುದರಿಂದ ಮತಗಳ ವಿಭಜನೆ ಪಕ್ಕಾ ಇದೆ. ಹಾಗಾಗಿ ಎಲ್ಲ ಅಭ್ಯರ್ಥಿಗಳ ಕಣ್ಣು ಮರಾಠಾ ಮತ್ತು ಹಿಂದುಳಿದ ವರ್ಗದ ಮತದಾರರ ಮೇಲಿದೆ. ಮರಾಠಿಗರಿಗೆ ಈ ಬಾರಿಯೂ ಬಿಜೆಪಿ ಟಿಕೆಟ್ ನಿರಾಕರಿಸಿದ್ದು, ಕಮಲ ಪಾಳಯಕ್ಕೆ ಮತ ತಪ್ಪುವ ಭೀತಿ ಹೆಚ್ಚಿದೆ. ಇದರಿಂದ ಕಾಂಗ್ರೆಸ್‌ಗೆ ಎಷ್ಟರ ಮಟ್ಟಿಗೆ ಲಾಭ ಆಗುತ್ತದೆ ಕಾದು ನೋಡಬೇಕಿದೆ. ಈ ನಡುವೆ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಒಗ್ಗಟ್ಟಿನ ಮಂತ್ರ ಜಪಿಸುತ್ತಿರುವುದು ಕೇಸರಿ ಪಡೆಗೆ ಪ್ಲಸ್ ಆಗಿದೆ.
ಹುಮನಾಬಾದ್
ಹಾಲಿ ಶಾಸಕ ರಾಜಶೇಖರ ಪಾಟೀಲ ಕಾಂಗ್ರೆಸ್‌ನಿಂದ ಕಣದಲ್ಲಿದ್ದರೆ, ಅವರ ಸಹೋದರ ಸಂಬಂ ಸಿದ್ದು ಪಾಟೀಲ ಬಿಜೆಪಿಯಿಂದ ಪ್ರತಿ ಸ್ಪಧಿ ìಯಾಗಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಪುತ್ರ ಫೈಜ್ ಅಖಾಡಕ್ಕೆ ಇಳಿದಿದ್ದಾರೆ. ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹಣಾಹಣಿ ಇದ್ದರೂ ಇಲ್ಲಿ ತ್ರಿಕೋನ ಸ್ಪರ್ಧೆ ನಡೆಯುವ ಸಾಧ್ಯತೆಯೂ ಹೆಚ್ಚಿದೆ. ರಾಜಶೇಖರ, ಸಿದ್ದು ಲಿಂಗಾಯತರಾಗಿದ್ದರೆ, ಫೈಜ್ ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾರೆ. ಕ್ಷೇತ್ರದಲ್ಲಿ ಲಿಂಗಾಯತ ಮತ್ತು ಮುಸ್ಲಿಂ ಸಮುದಾಯ ಪ್ರಾಬಲ್ಯ ಹೊಂದಿದ್ದರೂ ಪರಿಶಿಷ್ಟರ ಮತ್ತು ಹಿಂದುಳಿದ ವರ್ಗಗಳ ಮೇಲೆ ಎಲ್ಲರ ಕಣ್ಣಿದೆ. ಲಿಂಗಾಯತ ಮತಗಳ ಜತೆಗೆ ಕಾಂಗ್ರೆಸ್‌ನ ಓಟ್ ಬ್ಯಾಂಕ್ ಆಗಿರುವ ಅಲ್ಪಸಂಖ್ಯಾತರ ಮತಗಳು ಸಹ ಈ ಬಾರಿ ಫೈಜ್ ಸ್ಪರ್ಧೆಯಿಂದ ಒಡೆಯಬಹುದು. ಹಾಗಾಗಿ ಯಾರಿಂದ ಯಾರಿಗೆ ಲಾಭ ಎನ್ನುವುದು ಅಸ್ಪಷ್ಟ.
ಬಸವಕಲ್ಯಾಣ
ಉಪ ಚುನಾವಣೆಯಲ್ಲಿ ಗೆದ್ದಿರುವ ಶರಣು ಸಲಗರ್ ಬಿಜೆಪಿಯಿಂದ ಮತ್ತೂಮ್ಮೆ ಉಮೇದುವಾರರು. ಈ ಬಾರಿ ಕಾಂಗ್ರೆಸ್‌ನಿಂದ ವಿಜಯಸಿಂಗ್ ತೀವ್ರ ಪೈಪೋಟಿ ಮಾಡಿ ಟಿಕೆಟ್ ಪಡೆದಿದ್ದಾರೆ. ಜೆಡಿಎಸ್‌ನಿಂದ ನಿವೃತ್ತ ಆರ್‌ಟಿಒ ಅಧಿ ಕಾರಿ ಸಂಜಯ ವಾಡೇಕರ್ ಸ್ಪರ್ಧೆಗಿಳಿದಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆಯೇ ನೇರ ಸ್ಪರ್ಧೆ ನಡೆಯಲಿದೆ. ಇಬ್ಬರು ಪ್ರಬಲ ಅಭ್ಯರ್ಥಿಗಳು ಹೊರ ಜಿಲ್ಲೆ ಕಲ್ಬುರ್ಗಿಯವರು ಎಂಬ ಚರ್ಚೆ ಇದೆ. ಮರಾಠಾ ಸಮಾಜದ ಬಾಹುಳ್ಯವುಳ್ಳ ಕ್ಷೇತ್ರವಾಗಿದೆ. ಭಾಲ್ಕಿಯಲ್ಲಿ ಮರಾಠಿಗರಿಗೆ ಬಿಜೆಪಿಯಿಂದ ಟಿಕೆಟ್ ಕೈ ತಪ್ಪಿರುವುದರ ಎಫೆಕ್ಟ್ ಈ ಕ್ಷೇತ್ರದಲ್ಲಿ ಆಗಬಹುದು. ಜತೆಗೆ ಬಿಜೆಪಿ ಟಿಕೆಟ್ ಕೈ ತಪ್ಪಿರುವುದಕ್ಕೆ ಪ್ರಬಲ ನಾಯಕರು ಕಾಂಗ್ರೆಸ್‌ಗೆ ಜಿಗಿದಿರುವುದು ಸಹ ಕೇಸರಿ ಪಡೆಗೆ ಆಘಾತ ತಂದಿದೆ. ಇಲ್ಲಿ ಈ ಬಾರಿ ಲಿಂಗಾಯತರು ಮತ್ತು ಪರಿಶಿಷ್ಟ ಮತದಾರರು ಸಹ ನಿರ್ಣಾಯಕ ಆಗಬಲ್ಲರು.
~ ಶಶಿಕಾಂತ ಬಂಬುಳಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.