PM Modi: 36 ಗಂಟೆಗಳು, 5 ಸಾವಿರ ಕಿ.ಮೀ, 8 ಕಾರ್ಯಕ್ರಮಗಳು, 7 ಮಹಾನಗರಗಳು…
ಇದು ಪ್ರಧಾನಿ ಮೋದಿಯವರ ಇನ್ನು ಎರಡು ದಿನಗಳ ಟೈಂ ಲೈನ್
Team Udayavani, Apr 22, 2023, 5:28 PM IST
ನವದೆಹಲಿ: 36 ಗಂಟೆಗಳು, 5,000 ಕ್ಕೂ ಹೆಚ್ಚು ಕಿ.ಮೀ ಸುತ್ತಾಟ, 8 ಕಾರ್ಯಕ್ರಮಗಳು, 7 ಮಹಾನಗರಗಳು… ಇದು ಪ್ರಧಾನಿ ಮೋದಿಯವರ ಇನ್ನು ಎರಡು ದಿನಗಳ ಟೈಂ ಲೈನ್.
ಎ. 24 ರ ಮುಂಜಾನೆ ರಾಷ್ಟ್ರ ರಾಜಧಾನಿಯಿಂದ ತಮ್ಮ ಪ್ರಯಾಣ ಪ್ರಾರಂಭಿಸಲಿರುವ ಪ್ರಧಾನಿ, ನೇರವಾಗಿ ದೆಹಲಿಯಿಂದ 500 ಕಿ.ಮೀ ದೂರದಲ್ಲಿರುವ ಮಧ್ಯ ಪ್ರದೇಶದ ಖಜರಾಹೋಗೆ ತೆರಳಲಿದ್ದಾರೆ. ಅಲ್ಲಿಂದ ಅವರು ರೇವಾಗೆ ತೆರಳಿ ರಾಷ್ಟ್ರೀಯ ಪಂಚಾಯತ್ ದಿನದ ಅಂಗವಾಗಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮದ ಬಳಿಕ ಮತ್ತೆ ಖಜರಾಹೋಗೆ ತೆರಳಲಿದ್ದಾರೆ. ಈ ಎರಡೂ ನಗರಗಳ ನಡುವಿನ ಅವರ ಸಂಚಾರ ಸುಮಾರು 280 ಕಿ.ಮೀ ಇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಖಜರಾಹೋದಿಂದ ಮೋದಿ ದೇವನಾಡು ಕೇರಳಕ್ಕೆ ಭೇಟಿ ನೀಡಲಿದ್ದಾರೆ. ಖಜರಾಹೋದಿಂದ ಹೊರಟು ಕೇರಳದ ಕೊಚ್ಚಿಯಲ್ಲಿ ನಡೆಯಲಿರುವ ʻಯುವಂ ಕಾನ್ಕ್ಲೇವ್ʼ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ. ಇದಕ್ಕಾಗಿ ಅವರು ವಿಮಾನದಲ್ಲಿ ಸುಮಾರು 1700 ಕಿ.ಮೀ ದೂರ ಪ್ರಯಾಣಿಸಲಿದ್ದಾರೆ.
ಎ. 25 ರಂದು ಮುಂಜಾನೆ ಮೋದಿಯವರು ಕೊಚ್ಚಿಯಿಂದ ನೇರವಾಗಿ ಕೇರಳ ರಾಜಧಾನಿ ತಿರುವನಂತಪುರಕ್ಕೆ ಭೇಟಿ ನೀಡಲಿದ್ದಾರೆ. ಇದರ ಅಂತರ ಸುಮಾರು 190 ಕಿ.ಮೀ. ತಿರುವನಂತಪುರದಲ್ಲಿ ಪ್ರಧಾನಿ ಮೋದಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಅದರ ಜೊತೆಗೆ ಹಲವು ಅಭಿವೃದ್ದಿ ಯೋಜನೆಗಳಿಗೆ ಅಡಿಗಲ್ಲು ಹಾಕಲಿದ್ದಾರೆ.
ತಿರುವನಂತಪುರದಿಂದ ಸೂರತ್ ಮೂಲಕ ಸಿಲ್ವಸ್ಸಾಗೆ ಪ್ರಧಾನಿ ತೆರಳಲಿದ್ದಾರೆ. ಈ ಪ್ರಯಾಣವು ಸುಮಾರು 1570 ಕಿ.ಮೀ ಅಂತರವನ್ನು ಹೊಂದಿರಲಿದೆ. ಅಲ್ಲಿ ಅವರು ನಮೋ ಮೆಡಿಕಲ್ ಕಾಲೇಜಿಗೆ ಭೇಟಿ ನೀಡಲಿದ್ದಾರೆ. ಅಲ್ಲದೆ ಅಲ್ಲಿಯೂ ಹಲವು ಯೋಜನೆಗಳಿಗೆ ಶಿಲಾನ್ಯಾಸ ಮಾಡಲಿದ್ದಾರೆ.
ಅಲ್ಲಿಂದ ಮೋದಿ ಭಾರತದ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದಾಗಿರುವ ದಾಮನ್‌ಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ, ಅಲ್ಲಿ ದೇವಕಾ ಸಮುದ್ರ ದಂಡೆ ಅಭಿವೃದ್ಧಿ ಕಾರ್ಯವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಅಲ್ಲಿಂದ 110 ಕಿ.ಮೀ ದೂರದ ಸೂರತ್‌ಗೆ ತೆರಳಲಿದ್ದಾರೆ.
ಸೂರತ್‌ನಿಂದ ಮತ್ತೆ ದೆಹಲಿಗೆ ತೆರಳಲಿದ್ದು, ಈ ಪ್ರಯಾಣ 940 ಕಿ.ಮೀ ದೂರವಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್
ಒಟ್ಟಾರೆಯಾಗಿ ಈ ಎರಡು ದಿನಗಳಲ್ಲಿ ಪ್ರಧಾನಿ ಮೋದಿಯವರು ಸುಮಾರು 5,300 ಕಿ.ಮೀ ಸಂಚರಿಸಲಿದ್ದು, ಸುಮಾರು 36 ಗಂಟೆಗಳ ಕಾರ್ಯಕ್ರಮಗಳು ಈ ಪಟ್ಟಿಯಲ್ಲಿರಲಿದೆ ಎಂದು ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.