![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, Apr 2, 2023, 4:05 PM IST
ಹೊಸದಿಲ್ಲಿ: ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆ ಬಿಡುಗಡೆ ಮಾಡಿರುವ ಜಾಗತಿಕ ನಾಯಕರ ಅನುಮೋದನೆ ರೇಟಿಂಗ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಅಗ್ರಸ್ಥಾನ ಪಡೆದಿದ್ದಾರೆ. ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಸೇರಿದಂತೆ ಇತರ ನಾಯಕರನ್ನು ಹಿಂದಿಕ್ಕಿ ಪ್ರಧಾನಿ ಮೋದಿ ಅವರು ಶೇಕಡಾ 76 ರ ಅನುಮೋದನೆಯನ್ನು ಪಡೆದಿದ್ದಾರೆ. ಆದರೆ, ಫೆಬ್ರವರಿಯಲ್ಲಿ ಶೇ.78 ರಷ್ಟಿದ್ದ ಪಿಎಂ ಮೋದಿ ರೇಟಿಂಗ್ ನಲ್ಲಿ ಸ್ವಲ್ಪ ಇಳಿಕೆಯಾಗಿದೆ.
ಮಾರ್ನಿಂಗ್ ಕನ್ಸಲ್ಟ್ ನ ಇತ್ತೀಚಿನ ಸಮೀಕ್ಷೆಯು 76 ಪ್ರತಿಶತದಷ್ಟು ಅನುಮೋದನೆಯ ರೇಟಿಂಗ್ ನೊಂದಿಗೆ ಎಲ್ಲಾ ಜಾಗತಿಕ ನಾಯಕರ ನಡುವೆ ಪಿಎಂ ಮೋದಿ ಎತ್ತರವಾಗಿ ನಿಂತಿದ್ದಾರೆ ಎಂದು ತೋರಿಸಿದೆ.
ಜನಪ್ರಿಯತೆಯ ವಿಷಯದಲ್ಲಿ ಯಾವುದೇ ವಿಶ್ವ ನಾಯಕ ಪ್ರಧಾನಿ ಮೋದಿಯ ಹತ್ತಿರವೂ ಇಲ್ಲ ಎಂದು ಅನುಮೋದನೆ ರೇಟಿಂಗ್ ತೋರಿಸುತ್ತದೆ. ರೇಟಿಂಗ್ ಪ್ರಕಾರ, ಮೆಕ್ಸಿಕೋ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಅವರು 61 ಶೇಕಡಾ ಅನುಮೋದನೆ ರೇಟಿಂಗ್‌ನೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಹೀಗಾಗಿ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಒಬ್ರಡಾರ್ ನಡುವೆ ಶೇ 15ರಷ್ಟು ಅಂತರವಿದೆ.
ಇದನ್ನೂ ಓದಿ:ವಿಪಕ್ಷ ಮೈತ್ರಿಕೂಟದ ಸಂಚಾಲಕರಾಗಲು ಸಣ್ಣ ಪಕ್ಷವನ್ನು ಪ್ರೋತ್ಸಾಹಿಸುತ್ತೇನೆ: ತರೂರ್
ಈ ಮಾರ್ನಿಂಗ್ ಕನ್ಸಲ್ಟ್ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಮೂರನೇ ಸ್ಥಾನದಲ್ಲಿದ್ದಾರೆ. ಅವರು 55 ಪ್ರತಿಶತದಷ್ಟು ಜಾಗತಿಕ ನಾಯಕರ ಅನುಮೋದನೆಯನ್ನು ಪಡೆದಿದ್ದಾರೆ. ಅದೇ ಸಮಯದಲ್ಲಿ, ಇಟಲಿಯ ಪಿಎಂ ಜಾರ್ಜಿಯಾ ಮೆಲೋನಿ ಅವರು ಶೇಕಡಾ 49 ರ ಅನುಮೋದನೆಯನ್ನು ಪಡೆದಿದ್ದಾರೆ. ಮೆಲೋನಿ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಬ್ರೆಜಿಲ್ ಅಧ್ಯಕ್ಷ ಲುಲಾ ಡಿ ಸಿಲ್ವಾ ಅವರು ಜಾರ್ಜಿಯಾ ಮೆಲೋನಿಯಂತೆ 49 ಶೇಕಡಾ ರೇಟಿಂಗ್ ಪಡೆದಿದ್ದಾರೆ ಆದರೆ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.
ವಿಶ್ವದ ಸೂಪರ್ ಪವರ್ ರಾಷ್ಟ್ರಗಳಲ್ಲಿ ಒಂದಾದ ಅಮೆರಿಕ ಅಧ್ಯಕ್ಷ ಜೋ ಬಿಡನ್ ಅವರು ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್ ಪಟ್ಟಿಯಲ್ಲಿ 6 ನೇ ಸ್ಥಾನದಲ್ಲಿದ್ದಾರೆ. ಬಿಡೆನ್ ಕೇವಲ ಶೇಕಡ 41ರಷ್ಟು ಅನುಮೋದನೆ ಪಡೆದಿದ್ದಾರೆ.
Global Leader Approval: *Among all adults
Modi: 76%
López Obrador: 61%
Albanese: 55%
Meloni: 49%
Lula da Silva: 49%
Biden: 41%
Trudeau: 39%
Sánchez: 38%
Scholz: 35%
Sunak: 34%
Macron: 22%
*Updated 03/30/23https://t.co/Z31xNcDhTg pic.twitter.com/sDRneBzB1Z— Morning Consult (@MorningConsult) April 1, 2023
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.