ಜರ್ಮನಿ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಜತೆ ಪ್ರಧಾನಿ ಮೋದಿ ಮಹತ್ವದ ಮಾತುಕತೆ
Team Udayavani, Feb 25, 2023, 6:09 PM IST
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಜರ್ಮನಿ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರ ಜೊತೆ ಮಹತ್ವದ ಮಾತುಕತೆ ನಡೆಸಿದರು.
ನಮ್ಮ ಮಾತುಕತೆಗಳು ಭಾರತ-ಜರ್ಮನಿ ಸಹಕಾರವನ್ನು ಹೆಚ್ಚಿಸುವ ಮತ್ತು ವ್ಯಾಪಾರ ಸಂಬಂಧಗಳನ್ನು ಮತ್ತಷ್ಟು ಹೆಚ್ಚಿಸುವ ಮಾರ್ಗಗಳ ಮೇಲೆ ಕೇಂದ್ರೀಕೃತವಾಗಿವೆ. ನವೀಕರಿಸಬಹುದಾದ ಶಕ್ತಿ, ಹಸಿರು ಜಲಜನಕ ಮತ್ತು ಜೈವಿಕ ಇಂಧನಗಳಲ್ಲಿ ಸಂಬಂಧಗಳನ್ನು ಗಾಢವಾಗಿಸಲು ನಾವು ಒಪ್ಪಿಕೊಂಡಿದ್ದೇವೆ. ಭದ್ರತಾ ಸಹಕಾರದ ಬಗ್ಗೆಯೂ ಚರ್ಚಿಸಲಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಓಲಾಫ್ ಸ್ಕೋಲ್ಜ್ ಮತ್ತು ನಮ್ಮ ರಾಷ್ಟ್ರಗಳ ನಡುವಿನ ಆರ್ಥಿಕ ಸಂಬಂಧಗಳನ್ನು ಬಲಪಡಿಸುವ ಮಾರ್ಗಗಳನ್ನು ಚರ್ಚಿಸಲು ನಾನು ಉನ್ನತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳನ್ನು ಭೇಟಿಯಾದೆ. ಡಿಜಿಟಲ್ ರೂಪಾಂತರ, ಫಿನ್‌ಟೆಕ್, ಐಟಿ ಮತ್ತು ಟೆಲಿಕಾಂನಂತಹ ವಲಯಗಳ ಕುರಿತು ಸಭೆಯಲ್ಲಿ ಪ್ರಮುಖವಾಗಿ ಮಾತುಕತೆ ನಡೆಸಲಾಯಿತು.
ಒಲಾಫ್ ಗೆ ಮೇಘಾಲಯದ ಮೇಲುವಸ್ತ್ರ, ನಾಗಾಲ್ಯಾಂಡ್‌ನ ಶಾಲುಗಳ ಕಾಣಿಕೆ
ಜರ್ಮನಿ ಚಾನ್ಸೆಲರ್ ಒಲಾಫ್ ಶಾಲ್ಜ್ ಗೆ ಪ್ರಧಾನಿ ಮೋದಿ ವಿಶೇಷ ಕಾಣಿಕೆ ನೀಡಿದ್ದಾರೆ. ಮೇಘಾಲಯದಲ್ಲಿ ಮಹಿಳೆ ಯರು ಧರಿಸುವ ಮೇಲುವಸ್ತ್ರ, ನಾಗಾ ಲ್ಯಾಂಡ್‌ನ ಶಾಲ್‌ಗಳನ್ನು ನೀಡಿದ್ದಾರೆ. ಈ ಎರಡೂ ವಸ್ತುಗಳು ಈಶಾನ್ಯ ರಾಜ್ಯಗಳ ಸಂಸ್ಕೃತಿ, ಕರಕುಶಲತೆಯನ್ನು ಬಿಂಬಿಸುತ್ತವೆ ಮೂಲಗಳು ತಿಳಿಸಿವೆ. ಅದರಲ್ಲೂ ಮೇಘಾಲಯದ ಮೇಲು ವಸ್ತ್ರಗಳು ಹಲವು ಶತಮಾನಗಳ ಇತಿಹಾಸವನ್ನು ಹೊಂದಿವೆ. ಅವಕ್ಕೆ ಶ್ರೀಮಂತ ಇತಿಹಾಸ ವಿದೆ. ಅವುಗಳ ನೇಯ್ಗೆಯನ್ನು ಪ್ರಾಚೀನ ಕ್ರಮದಂತೆ ಮಾಡಲಾಗುತ್ತದೆ. ಆ ಪರಂಪರೆ ಪೀಳಿಗೆಯಿಂದ ಪೀಳಿಗೆಗೆ ಬೆಳೆ ದುಕೊಂಡೇ ಬಂದಿದೆ. ಅದನ್ನು ಖಾಸಿ, ಜೈನಿಯ ರಾಜಮನೆತನಕ್ಕಾಗಿ ನೇಯಲಾಗುತ್ತಿತ್ತು. ವಿಶೇಷ ಹಬ್ಬಗಳಲ್ಲಿ ಮಾತ್ರ ಅವುಗಳನ್ನು ರಾಜರು ಧರಿಸುತ್ತಿದ್ದರು. ಗಮನಾರ್ಹ ಸಂಗತಿಯೆಂದರೆ ಇದನ್ನು ನೇಯುವ ಕೆಲಸ ಮಾಡುವುದು ಮಹಿಳೆಯರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Memorial: ಮನಮೋಹನ್ ಸಿಂಗ್ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Dr. Manmohan Singh; ನಾಳೆ ನಿಗಮಬೋಧ್ ಘಾಟ್ ಚಿತಾಗಾರದಲ್ಲಿ ಮಾಜಿ ಪ್ರಧಾನಿ ಅಂತ್ಯಕ್ರಿಯೆ
Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Memorial: ಮನಮೋಹನ್ ಸಿಂಗ್ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ
Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊ*ಲೆ; ಇಂದು ತೀರ್ಪು; ಭಾರೀ ಬಂದೋಬಸ್ತು
Surathkal: ಸಿಲಿಂಡರ್ ಸ್ಫೋ*ಟ ಪ್ರಕರಣ; ಮತ್ತೋರ್ವ ಮಹಿಳೆಯ ಸಾವು
Daily Horoscope: ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.