Live: “ಪಾರದರ್ಶಕ ತೆರಿಗೆ” ಪಾವತಿ ಪ್ಲಾಟ್ ಫಾರ್ಮ್ ಗೆ ಪ್ರಧಾನಿ ಮೋದಿ ಚಾಲನೆ
ತೆರಿಗೆ ನೀತಿಯಲ್ಲೂ ಮಹತ್ತರ ಬದಲಾವಣೆ ಮಾಡಲಾಗಿದೆ ಎಂದರು.
Team Udayavani, Aug 13, 2020, 11:17 AM IST
ನವದೆಹಲಿ: ನೇರ ತೆರಿಗೆ ಪಾವತಿಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರಮೋದಿ ಅವರು “ಪಾರದರ್ಶಕ ತೆರಿಗೆ” ವೇದಿಕೆಗೆ ಚಾಲನೆ ನೀಡಿದ್ದಾರೆ. ಇದರಿಂದ ಪ್ರಾಮಾಣಿಕ ತೆರಿಗೆದಾರರಿಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಪಾರದರ್ಶಕ ತೆರಿಗೆ ವೇದಿಕೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ.ನೀಡಿ ಮಾತನಾಡಿದ ಅವರು, ನಾವು ದೇಶದಲ್ಲಿ ತೆರಿಗೆದಾರರಿಗೆ ಹೊಸ ಪದ್ಧತಿ ಜಾರಿ ಮಾಡಿದ್ದೇವೆ. ದೇಶದಲ್ಲಿ ಹಲವಾರು ಬದಲಾವಣೆಯಾಗುತ್ತಿದೆ. ತೆರಿಗೆ ನೀತಿಯಲ್ಲೂ ಮಹತ್ತರ ಬದಲಾವಣೆ ಮಾಡಲಾಗಿದೆ ಎಂದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ವಿಷಯ ಹಂಚಿಕೊಂಡ ಪ್ರಧಾನಿ ಮೋದಿ ಅವರು, ದೇಶದಲ್ಲಿ ನಡೆಯುತ್ತಿರುವ ಸುಧಾರಣೆ ಹೊಸ ಹಂತ ತಲುಪಿದೆ. ಹೀಗಾಗಿ ನಾವು ತೆರಿಗೆ ಕಟ್ಟುವಲ್ಲಿಯೂ ಹೊಸ ವಿಧಾನ ಅನುಸರಿಸಬೇಕಾಗಿದೆ ಎಂದರು.
ದೇಶದ ಅಭಿವೃದ್ಧಿಗೆ ಪ್ರಾಮಾಣಿಕ ತೆರಿಗೆದಾರರ ಕೊಡುಗೆ ಅಪಾರ. ಕಳೆದ ಕೆಲವು ವರ್ಷಗಳಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿಯೂ ಮಹತ್ತರ ಬದಲಾವಣೆ ಮಾಡಲಾಗಿದೆ ಎಂದು ಹೇಳಿದರು.
ಯಾವುದೇ ಕಾರಣಕ್ಕೂ ತೆರಿಗೆ ಪಾವತಿ ವಿಚಾರದಲ್ಲಿ ಅಡ್ಡದಾರಿ ಹಿಡಿಯಬೇಡಿ. ಈ ನಿಟ್ಟಿನಲ್ಲಿ ಪ್ರಾಮಾಣಿಕ ತೆರಿಗೆದಾರರ ಉತ್ತೇಜನಕ್ಕೆ ವೇದಿಕೆಗೆ ಚಾಲನೆ ನೀಡಲಾಗಿದೆ. ಇದರಿಂದ ಪ್ರಾಮಾಣಿಕ ತೆರಿಗೆದಾರರ ನೂತನ ಯಾತ್ರೆ ಆರಂಭವಾದಂತಾಗಿದೆ.
ಪ್ರಧಾನಿ ಮೋದಿ ಭಾಷಣದ ಹೈಲೈಟ್ಸ್:
*ಪ್ರಾಮಾಣಿಕ ತೆರಿಗೆದಾರರ ಉತ್ತೇಜನಕ್ಕೆ ಹೊಸ ವೇದಿಕೆ
*ಪ್ರಾಮಾಣಿಕ ತೆರಿಗೆ ಪಾವತಿ ಎಲ್ಲಾ ನಾಗರಿಕರ ಕರ್ತವ್ಯ
*ಪ್ರಾಮಾಣಿಕ ತೆರಿಗೆದಾರರ ಗೌರವಿಸುವ ಯಾತ್ರೆ ಇಂದಿನಿಂದ ಆರಂಭ
*ತೆರಿಗೆ ವಂಚನೆಯಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬೇಡಿ
*ನೀವು ಪಾವತಿಸುವ ತೆರಿಗೆಯಿಂದ ದೇಶದ ಅಭಿವೃದ್ಧಿ ಸಾಧ್ಯ
*ದೇಶದಲ್ಲಿ ಇದ್ದ ಹಳೆಯ ಕಾನೂನುನನ್ನು ರದ್ದು ಮಾಡಿದ್ದೇವೆ
*ತೆರಿಗೆ ವಂಚನೆಯಿಂದ ನಿಮಗೆ ಮಾತ್ರವಲ್ಲ, ದೇಶಕ್ಕೆ ದ್ರೋಹ ಬಗೆದಂತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
Stock Market: ಷೇರುಪೇಟೆ ಸೂಚ್ಯಂಕ 400ಕ್ಕೂ ಅಧಿಕ ಅಂಕ ಕುಸಿತ, ನಿಫ್ಟಿಯೂ ಇಳಿಕೆ
Nestle: ಹೊಸ ವರ್ಷಕ್ಕೆ ಮ್ಯಾಗಿ ನೂಡಲ್ಸ್, ಕಿಟ್‌ಕ್ಯಾಟ್ ಚಾಕ್ಲೆಟ್ ಬೆಲೆ ಏರಿಕೆ?
‘DigiLocker’; ಕ್ಲೇಮ್ ಮಾಡದ ಹೂಡಿಕೆಗೆ ಪರಿಹಾರ?
MUST WATCH
ಹೊಸ ಸೇರ್ಪಡೆ
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Kundapura: ಹೆಜ್ಜೇನು ದಾಳಿ; ವ್ಯಕ್ತಿ ಸಾವು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.