ಇನ್ನೂ 100ವರ್ಷ ಅಧಿಕಾರಕ್ಕೆ ಬರಬಾರದು ಅಂತ ನಿರ್ಧರಿಸಿದ್ದೀರಾ? ಕಾಂಗ್ರೆಸ್ ವಿರುದ್ಧ ಮೋದಿ
ನೀವು ಎಷ್ಟೋ ಚುನಾವಣೆಗಳಲ್ಲಿ ಸೋತಿದ್ದೀರಿ, ಆದರೂ ನಿಮ್ಮ ಅಹಂಕಾರ ಹೋಗಿಲ್ಲ.
Team Udayavani, Feb 7, 2022, 6:17 PM IST
ನವದೆಹಲಿ: ಕೋವಿಡ್ ಸಂದರ್ಭದಲ್ಲಿ ಕಾಂಗ್ರೆಸ್ ಬೇಜವಾಬ್ದಾರಿತನದಿಂದ ವರ್ತಿಸಿತ್ತು. ಈ ದೇಶ ನಿಮ್ಮದಲ್ಲವಾ? ಈ ದೇಶದ ಜನರು ನಿಮ್ಮವರಲ್ಲವಾ? ಎಲ್ಲಾ ಬೆಳವಣಿಗೆಯನ್ನು ಜನರು ಗಮನಿಸುತ್ತಿದ್ದಾರೆ. ಪ್ರತಿಯೊಂದನ್ನು ವಿರೋಧಿಸುವುದು ಸೂಕ್ತವಲ್ಲ. ನೀವು (ಕಾಂಗ್ರೆಸ್) ಈ ಮನಸ್ಥಿತಿಯಿಂದ ಹೊರಬರಬೇಕಾಗಿದೆ…ಇದು ಪ್ರಧಾನಿ ನರೇಂದ್ರ ಮೋದಿ ಸೋಮವಾರ (ಫೆ.07) ಲೋಕಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದ ಪರಿ.
ಲೋಕಸಭೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ವಂದನಾ ನಿರ್ಣಯ ಭಾಷಣಕ್ಕೆ ಉತ್ತರ ನೀಡುತ್ತಾ ಮಾತನಾಡಿದ ಪ್ರಧಾನಿ ಮೋದಿ, ನೀವು (ಕಾಂಗ್ರೆಸ್) 50ವರ್ಷ ದೇಶವನ್ನಾಳಿದಿರಿ. ಈ ಸ್ಧಳ (ಲೋಕಸಭೆ) ದೇಶಕ್ಕಾಗಿ ಉಪಯೋಗವಾಗಬೇಕು. ಆದರೆ ನೀವು ಈ ಸ್ಥಳವನ್ನು ಪಕ್ಷದ ರಾಜಕೀಯಕ್ಕಾಗಿ ಬಳಸಿಕೊಂಡಿದ್ದೀರಿ. ನಾವು ಅದಕ್ಕಾಗಿ ನಿಮಗೆ ಉತ್ತರ ಕೊಡಲೇಬೇಕಾಗಿದೆ. ಇದು ಚುನಾವಣೆಯ ಫಲಿತಾಂಶಕ್ಕೆ ಸಂಬಂಧಿಸಿದ್ದಲ್ಲ. ಇದು ಕಾಂಗ್ರೆಸ್ ಪಕ್ಷದ ಉದ್ದೇಶವಾಗಿದೆ. ನೀವು ಎಷ್ಟೋ ಚುನಾವಣೆಗಳಲ್ಲಿ ಸೋತಿದ್ದೀರಿ, ಆದರೂ ನಿಮ್ಮ ಅಹಂಕಾರ ಹೋಗಿಲ್ಲ. ನಿಮ್ಮ ಪರಿಸರ ನಿಮ್ಮ ಅಹಂಕಾರವನ್ನು ಬಿಡುತ್ತಿಲ್ಲ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.
ನಮಗೆ ಪ್ರಜಾಪ್ರಭುತ್ವದ ಬಗ್ಗೆ ದೃಢವಾದ ನಂಬಿಕೆ ಇದೆ. ಅಷ್ಟೇ ಅಲ್ಲ ಟೀಕೆಯೂ ಕೂಡಾ ಪ್ರಜಾಪ್ರಭುತ್ವದ ಪ್ರಮುಖ ಒಂದು ಭಾಗವಾಗಿದೆ. ಆದರೆ ಕುರುಡು ವಿರೋಧ ಯಾವಾಗಲೂ ಉತ್ತಮವಾದ ಮಾರ್ಗವಲ್ಲ ಎಂದು ಪ್ರಧಾನಿ ಕಾಂಗ್ರೆಸ್ ವಿರುದ್ಧ ಚಾಟಿ ಬೀಸಿದರು.
ಕೋವಿಡ್ 19 ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಎಲ್ಲಾ ಮಿತಿಯನ್ನು ಮೀರಿ ವರ್ತಿಸಿತ್ತು. ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲಿ ನಾವು ವಿಶ್ವಸಂಸ್ಥೆಯ ಅಣತಿಯಂತೆ ಲಾಕ್ ಡೌನ್ ಹೇರಿ, ಮಾರ್ಗಸೂಚಿ ಅನುಸರಿಸುವಂತೆ ಘೋಷಿಸಿದ್ದೇವು. ಆದರೆ ಕಾಂಗ್ರೆಸ್ ಪಕ್ಷ ಮುಂಬಯಿ ರೈಲ್ವೆ ನಿಲ್ದಾಣದಲ್ಲಿ ಅಮಾಯಕ ಜನರನ್ನು ಹೆದರಿಸುವ ಕೆಲಸದಲ್ಲಿ ತೊಡಗಿತ್ತು ಎಂದು ದೂರಿದರು.
ವಲಸೆ ಕಾರ್ಮಿಕರು ಮುಂಬಯಿ ತೊರೆಯುವಂತೆ ಮಾಡಿದಿರಿ, ವಲಸೆ ಕಾರ್ಮಿಕರನ್ನು ಮುಂಬಯಿನಿಂದ ಉತ್ತರಪ್ರದೇಶ, ಬಿಹಾರಕ್ಕೆ ಕಳುಹಿಸಿಕೊಟ್ಟಿದ್ದೀರಿ. ಇದು ನೀವು ಸೃಷ್ಟಿಸಿದ ಆತಂಕ ಎಂದು ಪ್ರಧಾನಿ ಕಿಡಿಕಾರಿದರು.
ತಮಿಳುನಾಡು, ತೆಲಂಗಾಣ, ಜಾರ್ಖಂಡ್, ಬಿಹಾರದಲ್ಲಿ ಕಾಂಗ್ರೆಸ್ ಅನ್ನು ಜನರು ಅಧಿಕಾರದಿಂದ ಕಿತ್ತೊಗೆದಿದ್ದಾರೆ. ಇನ್ನೆಂದೂ ನಿಮಗೆ ಅವರು ಮತ ಚಲಾಯಿಸುವುದಿಲ್ಲ. ನಾಗಾಲ್ಯಾಂಡ್ ನಲ್ಲಿ 24 ವರ್ಷಗಳ ಹಿಂದೆ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದ್ದೀರಿ, ಒಡಿಶಾದಲ್ಲಿ 27 ವರ್ಷದ ಹಿಂದೆ ಅಧಿಕಾರ ಹೋಯ್ತು, ಗೋವಾದಲ್ಲಿ 28 ವರ್ಷಗಳ ಹಿಂದೆ ಪೂರ್ಣ ಬಹುಮತ ಪಡೆದಿದ್ದೀರಿ. 1972ರಲ್ಲಿ ಪಶ್ಚಿಮಬಂಗಾಳದಲ್ಲಿ ಅಧಿಕಾರ ಪಡೆದಿದ್ದೀರಿ. ಪ್ರತ್ಯೇಕ ತೆಲಂಗಾಣ ರಚಿಸಿ ಅಧಿಕಾರ ಪಡೆಯಬೇಕೆಂದು ಯೋಚಿಸಿದ್ದೀರಿ, ಆದರೆ ಜನರು ನಿಮ್ಮನ್ನು ಒಪ್ಪಲಿಲ್ಲ ಎಂದು ಮೋದಿ ತಿರುಗೇಟು ನೀಡಿದರು.
ನಿಮ್ಮ ಈ ಎಲ್ಲಾ ನಡೆಗಳನ್ನು ಗಮನಿಸಿದರೆ ನೀವು(ಕಾಂಗ್ರೆಸ್) ಇನ್ನೂ 100 ವರ್ಷಗಳ ಕಾಲ ಅಧಿಕಾರಕ್ಕೆ ಬರಲೇ ಬಾರದೆಂದು ನಿರ್ಧರಿಸಿದಂತಿದೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ವ್ಯಂಗ್ಯವಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.