ʻತಿರಂಗಾ ನೋಡಿದಾಕ್ಷಣ ವಿಶ್ವದ ಜನರಿಗೆ ಭರವಸೆ ಮೂಡುತ್ತದೆʼ-NDRF ಸಿಬ್ಬಂದಿ ಜೊತೆ ಮೋದಿ ಮಾತು

ಟರ್ಕಿಗೆ ತೆರಳಿದ್ದ ಎನ್‌ಡಿಆರ್‌ಎಫ್‌ ತಂಡದೊಂದಿಗೆ ಮೋದಿ ಚರ್ಚೆ

Team Udayavani, Feb 21, 2023, 3:16 PM IST

modi ndrf

ನವದೆಹಲಿ: ಫೇ. 6ರಂದು ನಡೆದ ಭೀಕರ ಭೂಕಂಪದಿಂದ ನಲುಗಿಹೋಗಿದ್ದ ಟರ್ಕಿಗೆ ʻಆಪರೇಷನ್‌ ದೋಸ್ತ್‌ʼ ಹೆಸರಿನಲ್ಲಿ ಭಾರತ ತನ್ನ ಸಹಾಯಹಸ್ತ ಚಾಚಿತ್ತು. 2015ರಲ್ಲಿ ನೆರೆರಾಷ್ಟ್ರ ನೇಪಾಳ ಅಲ್ಲಿ ಸಂಭವಿಸಿದ ಯಮರೂಪಿ ಭೂಕಂಪದಿಂದಾಗಿ ಕಂಗೆಟ್ಟಿದ್ದ ಸಂದರ್ಭದಲ್ಲಿ ಮೊದಲ ಬಾರಿಗೆ ಭಾರತದ ಎನ್‌ಡಿಆರ್‌ಎಫ್‌ ತಂಡವನ್ನು ಭಾರತದ ಹೊರಗಿನ ರಕ್ಷಣಾ ಕಾರ್ಯಾಚರಣೆಗೆ ಕಳುಹಿಸಿತ್ತು.ಇದೀಗ ಭಾರತ ತನ್ನ ಎನ್‌ಡಿಆರ್‌ಎಫ್‌ ತಂಡದ ಜೊತೆಗೆ ಶ್ವಾನದಳವನ್ನೂ, ವೈದ್ಯಕೀಯ ನೆರವನ್ನೂ ಟರ್ಕಿಗೆ ಕಳುಹಿಸಿಕೊಟ್ಟು ಭಾರತ ಮಾನವೀಯತೆಗೇ ತನ್ನ ಮೊದಲ ಆದ್ಯತೆ ಎಂಬುದನ್ನು ಮತ್ತೊಮ್ಮೆ ವಿಶ್ವಮಟ್ಟದಲ್ಲಿ ಸಾಬೀತು ಪಡಿಸಿದೆ. ಈ ಶ್ರೇಷ್ಠ ಕಾರ್ಯದಲ್ಲಿ ಭಾಗಿಯಾದ ಸೇನಾ ಸಿಬ್ಬಂದಿಗಳೊಂದಿಗೆ ಪ್ರಧಾನಿ ಮೋದಿ ಮಾತುಕತೆ ನಡೆಸಿ ತಮ್ಮ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

NDRF ಡೈರೆಕ್ಟರ್‌ ಜನರಲ್‌ ಅತುಲ್‌ ಕರ್ವಾಲ್‌ ಮೊದಲ್ಗೊಂಡು ಟರ್ಕಿಗೆ ತೆರಳಿದ್ದ 151 ಸಿಬ್ಬಂದಿಗಳೂ ಸೇರಿ ಇತರೆ ಅಧಿಕಾರಿಗಳೂ ಸಭೆಯಲ್ಲಿ ತಮ್ಮ ತಮ್ಮ ಅನುಭವವನ್ನು ಪ್ರಧಾನಿ ಮೋದಿ ಜೊತೆಗೆ ಹಂಚಿಕೊಂಡಿದ್ಧಾರೆ.

ಮೋದಿ ಅವರೂ 2001ರಲ್ಲಿ ಗುಜರಾತ್‌ನಲ್ಲಿ ಸಂಭವಿಸಿದ್ದ ಭೀಕರ ಭೂಕಂಪನದ ವೇಳೆ ತಾವು ಕಾರ್ಯಕರ್ತನಾಗಿ ರಕ್ಷಣಾ ಕಾರ್ಯದಲ್ಲಿ ಭಾಗವಹಿಸಿದ್ದರ ಅನುಭವವನ್ನು ಹಂಚಿಕೊಂಡ್ರು. ʻಗುಜರಾತ್‌ ಭೂಕಂಪದ ವೇಳೆ ಭುಜ್‌ನಲ್ಲಿ ಆಸ್ಪತ್ರಗಳೂ ತುಂಬಿ ತುಳುಕುತ್ತಿದ್ದವು. ರಕ್ಷಣಾ ಕಾರ್ಯಾಚರಣೆಯ ಕಷ್ಟದ ಬಗ್ಗೆ ನನಗೂ ತಿಳಿದಿದೆ. ಅದಕ್ಕೆ ಸಾಕಷ್ಟು ಧೈರ್ಯವೂ ಬೇಕಾಗುತ್ತದೆ. ಇದಿಕ್ಕಾಗೇ ನಿಮಗೆ ಸೆಲ್ಯೂಟ್‌. ದೇಶವೇ ಇಂದು ನಿಮ್ಮ ಬಗ್ಗೆ ಹೆಮ್ಮೆ ಪಡುತ್ತಿದೆʼ . ಎಂದು ಪ್ರಧಾನಿ ಮೋದಿ ಹೇಳಿದರು.

ಸಿಬ್ಬಂದಿಗಳು ಟರ್ಕಿಗೆ ತೆರಳಿ ಕಲಿತಿದ್ದನ್ನು ದಾಖಲಿಸುವಂತೆ ಎನ್‌ಡಿಆರ್‌ಎಫ್‌ ಅಧಿಕಾರಿಗಳಿಗೆ ಪ್ರಧಾನಿ ತಿಳಿಸಿದ್ದಾರೆ. ಅಲ್ಲದೇ ಈ ಮಾತುಕತೆ ವೇಳೆ ಬೇರೆ ದೇಶಗಳ ರಕ್ಷಣಾ ಕಾರ್ಯದ ಬಗ್ಗೆ, ಅವರು ಉಪಯೋಗಿಸುತ್ತಿದ್ದ ರಕ್ಷಣಾ ಸಲಕರಣೆಗಳ ಬಗ್ಗೆಯೂ ಪ್ರಧಾನಿ ಮಾಹಿತಿ ಕೇಳಿದ್ದಾರೆ.

ʻಪ್ರಪಂಚದ ಯಾವುದೇ ಕಡೆಗೆ ತಿರಂಗಾ ತಲುಪಿದಾಗ ಭಾರತ ತಮ್ಮನ್ನು ಮೇಲೆತ್ತಲು ಬಂದಿದೆ ಎಂದೇ ಜನ ಭಾವಿಸುವಂತಾಗಿದೆ. ಅದು ಭೂಕಂಪ, ಪ್ರವಾಹ, ಸೈಕ್ಲೋನ್‌ ಏನೇ ಆಗಿರಲಿ ಎನ್‌ಡಿಆರ್‌ಎಫ್‌ ತಯಾರಿರುತ್ತದೆ. ಇದು ದೊಡ್ಡ ಸಾಧನೆ. ನಾವು ಇಲ್ಲಿಗೇ ನಿಲುವವರಲ್ಲʼ ಎಂದು ಪ್ರಧಾನಿ ಹೇಳಿದ್ಧಾರೆ.

ʻಮಾನವೀಯತೆಗೆಯೇ ನಮ್ಮ ಮೊದಲ ಆದ್ಯತೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಯಾವುದೇ ದೇಶ ಕಷ್ಟದಲ್ಲಿದ್ದರೂ ಭಾರತ ಅರೆಕ್ಷಣದಲ್ಲಿ ಸಹಾಯ ಹಸ್ತ ಚಾಚುತ್ತದೆ. ತಾಯಿಯೊಬ್ಬಳು ನಿಮ್ಮನ್ನು ಹರಸುವ, ಪುಟ್ಟ ಬಾಲಕಿಯೊಬ್ಬಳನ್ನು ನೀವು ರಕ್ಷಿಸುವ ದೃಶ್ಯಗಳನ್ನು ಇಡೀ ಭಾರತ ನೋಡಿದೆ. ನಿಮ್ಮ ಕಾಯಕ ಮತ್ತು ಸೇವೆ ನಾವು ಹೆಮ್ಮ ಪಡುವಂತೆ ಮಾಡಿದೆʼಎಂದರು.

ಅಷ್ಟೇ ಅಲ್ಲದೇ ಟರ್ಕಿಗೆ ತೆರಳಿದ್ದ ಭಾರತದ ಶ್ವಾನದಳದ ಬಗ್ಗೆಯೂ ಪ್ರಧಾನಿ ಮೆಚ್ಚುಗೆಯ ನುಡಿಗಳನ್ನಾಡಿದ್ದಾರೆ. ನಮ್ಮ ಶ್ವಾನದಳ 6 ಮತ್ತು 8 ರ ಹರೆಯದ ಪುಟ್ಟ ಬಾಲಕಿಯರನ್ನು ಜೀವಂತವಾಗಿ ರಕ್ಷಿಸಿದ್ದು ಅಭೂತಪೂರ್ವ ಎಂದು ಹೇಳಿದರು. ಈ ಮಾತುಕತೆಯ ವೀಡಿಯೋ ತುಣುಕೊಂದನ್ನೂ ಮೋದಿ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಟಾಪ್ ನ್ಯೂಸ್

ICC ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌: ದಕ್ಷಿಣ ಆಫ್ರಿಕಾಕ್ಕೆ ಉತ್ತಮ ಅವಕಾಶ

ICC ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌: ದಕ್ಷಿಣ ಆಫ್ರಿಕಾಕ್ಕೆ ಉತ್ತಮ ಅವಕಾಶ

Mudhola

Mudhola: ಸಿಲಿಂಡರ್ ಸ್ಫೋಟ: ಹೊತ್ತಿ ಉರಿದ ಮನೆ

Madikeri: ಹುಲಿ ದಾಳಿಯಲ್ಲ, ಕಾಡು ಬೆಕ್ಕಿನ ದಾಳಿ: ವ್ಯಕ್ತಿಗೆ ಗಂಭೀರ ಗಾಯ

Madikeri: ಹುಲಿ ದಾಳಿಯಲ್ಲ, ಕಾಡು ಬೆಕ್ಕಿನ ದಾಳಿ: ವ್ಯಕ್ತಿಗೆ ಗಂಭೀರ ಗಾಯ

Laxmi-Heebalakar1

ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್‌ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ

Kalaburagi-Acci

Kalaburagi: ಟಿಟಿ ಟಯರ್‌ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!

Jagadambika-Pal-(JPC)

Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jagadambika-Pal-(JPC)

Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

Uttar Pradesh: 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾ*ಚಾರ; ಇಬ್ಬರ ಬಂಧನ

Uttar Pradesh: 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾ*ಚಾರ; ಇಬ್ಬರ ಬಂಧನ

Atul Subhash Case: ಮೊಮ್ಮಗನನ್ನು ನೀಡದಿದ್ದರೆ ಆತ್ಮಹತ್ಯೆ; ಅತುಲ್‌ ತಂದೆ

Atul Subhash Case: ಮೊಮ್ಮಗನನ್ನು ನೀಡದಿದ್ದರೆ ಆತ್ಮಹತ್ಯೆ; ಅತುಲ್‌ ತಂದೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ICC ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌: ದಕ್ಷಿಣ ಆಫ್ರಿಕಾಕ್ಕೆ ಉತ್ತಮ ಅವಕಾಶ

ICC ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌: ದಕ್ಷಿಣ ಆಫ್ರಿಕಾಕ್ಕೆ ಉತ್ತಮ ಅವಕಾಶ

de

Mangaluru: ಅಪರಿಚಿತ ವ್ಯಕ್ತಿ ಸಾವು

arest

Kundapura: ಅಂಬರ್‌ ಗ್ರೀಸ್‌ ಮಾರಾಟ ಪ್ರಕರಣ; ಮತ್ತೋರ್ವ ಆರೋಪಿಯ ಬಂಧನ

Mudhola

Mudhola: ಸಿಲಿಂಡರ್ ಸ್ಫೋಟ: ಹೊತ್ತಿ ಉರಿದ ಮನೆ

7

Kasaragod: ಅಂಗಡಿಗೆ ನುಗ್ಗಿದ ಕಾಡು ಹಂದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.