![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Nov 15, 2021, 1:26 PM IST
ವಾಡಿ: ಚಿತ್ತಾಪುರ ತಾಲೂಕಿನ ವಿವಿಧೆಡೆ ಕೆಲ ಕಿರಾಣಿ ಅಂಗಡಿಗಳಲ್ಲೀಗ ನಕಲಿ ಪದಾರ್ಥಗಳ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ.
ಪಟ್ಟಣದ ಮಾರುಕಟ್ಟೆಯಲ್ಲಿಯೂ ಕಳಪೆ ಆಹಾರ ಉತ್ಪನ್ನಗಳ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಖಾರಾ, ಅರಿಶಿಣ, ಸಾಂಬಾರ ಪದಾರ್ಥಗಳು ಗುಣಮಟ್ಟ ಕಳೆದುಕೊಂಡಿವೆ. ಬಣ್ಣದಿಂದ ಗಮನ ಸೆಳೆಯುವ ಈ ಅಡುಗೆ ಪದಾರ್ಥಗಳಲ್ಲಿ ಸುಗಂಧ ಸುವಾಸನೆ ಗೌಣವಾಗಿದೆ. ಕಡಿಮೆ ದರದ ನೆಪದಲ್ಲಿ ನಕಲಿ ಸಾಬೂನು ಮತ್ತು ವಾಶಿಂಗ್ ಪೌಡರ್ ಮಾರಾಟ ಮಾಡಲಾಗುತ್ತಿದೆ.
ರೈಲ್ವೆ ಜಂಕ್ಷನ್ ಹೊಂದಿರುವ ವಾಡಿಯ ಮಾರುಕಟ್ಟೆಗೆ ಹೈದರಾಬಾದ ಮೂಲದ ವಿವಿಧ ಕಂಪನಿಗಳು ಐದಾರು ರೀತಿಯ ಬೆಳ್ಳುಳ್ಳಿ ಶುಂಠಿ ಪೇಸ್ಟ್ ಪದಾರ್ಥವನ್ನು ವಿವಿಧ ಹೆಸರಿನಡಿ ಪೂರೈಸುತ್ತಿವೆ. ಐದು ಕೆಜಿ ತೂಕದ ಈ ಬೆಳ್ಳುಳ್ಳಿ ಶುಂಠಿ ಪೇಸ್ಟ್ ಕೇವಲ ವಾಸನೆ ಹರಡುತ್ತಿದೆ. ಗೋಧಿ ಹಿಟ್ಟಿನ ಕಣಕದಂತಿರುವ ಇದು ಸಂಪೂರ್ಣ ಕಳಪೆಯಾಗಿದೆ. ಅಡುಗೆಯಲ್ಲಿ ಬಳಸಿದರೆ ಇಡೀ ಅಡುಗೆ ಹಾಳಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಇದನ್ನೂ ಓದಿ:ಬಿಟ್ ಕಾಯಿನ್ ವಿಚಾರವನ್ನು ಕಾಂಗ್ರೆಸ್ ನವರು ಕೇವಲ ರಾಜಕೀಯಕ್ಕೆ ಬಳಸುತ್ತಿದ್ದಾರೆ: ಸಿಎಂ
ಅವಧಿ ಮುಗಿದ ಪದಾರ್ಥಗಳ ಪ್ಯಾಕೇಟ್ ಗಳ ಮೇಲೆ ದಿನಾಂಕ ಮತ್ತು ಬೆಲೆ ಗುರುತಿಸುವ ನಕಲಿ ಲೇಬಲ್ ಅಂಟಿಸಿ ಗ್ರಾಹಕರಿಗೆ ಮೋಸ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಆಹಾರ ಇಲಾಖೆ ಅಧಿಕಾರಿಗಳು ಇಂಥ ವ್ಯವಹಾರಕ್ಕೆ ಕಡಿವಾಣ ಹಾಕಿ ನಕಲಿ ಕಂಪನಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂಬುದು ಜನರ ಆಗ್ರಹವಾಗಿದೆ.
ಗುಣಮಟ್ಟ ನೋಡಿ ಖರೀದಿಸಿ
ಅನಧಿಕೃತ ಕಂಪನಿಗಳಿಂದ ಇಂಥ ನಕಲಿ ಕಲಬೆರಕೆ ಉತ್ಪನ್ನಗಳು ಮಾರುಕಟ್ಟೆಗೆ ಬರುತ್ತಿರುತ್ತವೆ. ಗ್ರಾಹಕರು ಪದಾರ್ಥಗಳ ಗುಣಮಟ್ಟ ಮತ್ತು ಅಧಿಕೃತ ಕಂಪನಿಗಳ ಉತ್ಪನ್ನ ಗುರುತಿಸಿ ಖರೀದಿಸಬೇಕು. ವಿಶ್ವಾಸಾರ್ಹತೆ ಇಲ್ಲದ ಯಾವುದೇ ಆಹಾರ ಪದಾರ್ಥ ಖರೀದಿಸಬಾರದು. ಸಂಶಯ ಬಂದಲ್ಲಿ ಸಂಬಂಧಿಸಿದ ಸ್ಥಳೀಯ ಅಧಿಕಾರಿಗಳು ಅಥವಾ ಆಹಾರ ಸುರಕ್ಷತಾ ಇಲಾಖೆಗೆ ದೂರು ನೀಡಬೇಕು. ಇಂಥಹ ಪ್ರಕರಣಗಳು ಕಂಡು ಬಂದರೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಚಿತ್ತಾಪುರದ ಆಹಾರ ಮತ್ತು ಸುರಕ್ಷತಾಧಿಕಾರಿ ಪರಮೇಶ್ವರ ಮಠಪತಿ ತಿಳಿಸಿದ್ದಾರೆ.
-ಮಡಿವಾಳಪ್ಪ ಹೇರೂರ
Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ
Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ
Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ
MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ
BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.