ಖ್ಯಾತ ಪೋರ್ನ್ ಸ್ಟಾರ್ ಡೇಲಿಯಾ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ
ನೋಟಿಸ್ ಕಳುಹಿಸಿದ ನಂತರ ಹೆಸರನ್ನು ಡೇಲಿಯಾ ಸ್ಕೈ ಎಂದು ಬದಲಾಯಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.
Team Udayavani, Jul 17, 2021, 3:27 PM IST
ವಾಷಿಂಗ್ಟನ್:ಅಮೆರಿಕದ ಪ್ರಸಿದ್ಧ ಪೋರ್ನ್ (ನೀಲಿ) ತಾರೆ ಡೇಲಿಯಾ ಸ್ಕೈ(31ವರ್ಷ) ತಲೆಗೆ ಗುಂಡು ಹಾರಿಸಿಕೊಂಡು ಕಾರಿನೊಳಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಇದನ್ನೂ ಓದಿ:ಆಸುಸ್ ನಿಂದ ಹೊಸ ಶ್ರೇಣಿಯ ಕ್ರೋಮ್ ಬುಕ್ ಲ್ಯಾಪ್ ಟಾಪ್ ಬಿಡುಗಡೆ
ದ ಸನ್ ವರದಿ ಪ್ರಕಾರ, ತೀವ್ರ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ನಟಿ ಡೇಲಿಯಾ ಮಾನಸಿಕ ಒತ್ತಡಕ್ಕೊಳಗಾಗಿ ಆತ್ಮಹತ್ಯೆಗೆ ಶರಣಾಗಿರುವುದಾಗಿ ತಿಳಿಸಿದೆ. ಲಾಸ್ ಏಂಜಲೀಸ್ ನ ಸ್ಯಾನ್ ಫರ್ನಾಂಡೋ ಕಣಿವೆ ಪ್ರದೇಶದ ಡೆವನ್ ಶೈರ್ ಪ್ರದೇಶದಲ್ಲಿನ ವಾಹನದಲ್ಲಿ ಡೇಲಿಯಾ ಶವ ಪತ್ತೆಯಾಗಿದೆ ಎಂದು ವರದಿ ವಿವರಿಸಿದೆ.
ಇದೊಂದು ದಿಕ್ಕು ತಪ್ಪಿಸುವ ಪ್ರಯತ್ನ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲದ ಪರಿಣಾಮ ಆತ್ಮಹತ್ಯೆ ಪ್ರಕರಣದಡಿ ತನಿಖೆ ನಡೆಸಲಾಗುತ್ತಿದೆ ಎಂದು ಎಲ್ ಎಪಿಡಿ ಡಿಟೆಕ್ಟಿವ್ ಡೇವ್ ಪೀಟೆಖ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಡೇಲಿಯಾ ಸ್ಕೈ ತನ್ನ ನೀಲಿ ಚಲನಚಿತ್ರ ತಾರೆಯ ವೃತ್ತಿ ಜೀವನವನ್ನು 2010ರಲ್ಲಿ ಆರಂಭಿಸಿದ್ದಳು. ಈಕೆಯನ್ನು ಮೂಲತಃ ಬೈಲಿ ಬ್ಲೂ ಎಂದೇ ಕರೆಯಲಾಗುತ್ತಿತ್ತು.
ಪೋರ್ನ್ ಸ್ಟಾರ್ ಡೇಲಿಯಾ ಕಾರಿನೊಳಗೆ ತನಗೆ ತಾನೆ ಗುಂಡು ಹಾರಿಸಿಕೊಂಡು ಸಾವನ್ನಪ್ಪಿರುವುದು ಪತ್ತೆಯಾಗಿದೆ. ಈ ಘಟನೆ ಜೂನ್ 30ರಂದು ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ತಮ್ಮ ಕಂಪನಿಯ ಟ್ರೇಡ್ ಮಾರ್ಕ್ (ಬೈಲಿ ಬ್ಲೂ) ಹೆಸರನ್ನು ಇಟ್ಟುಕೊಂಡಿರುವುದಾಗಿ ದೂರಿ ಬಟ್ಟೆ ಕಂಪನಿ ಲೀಗಲ್ ನೋಟಿಸ್ ಕಳುಹಿಸಿದ ನಂತರ ಹೆಸರನ್ನು ಡೇಲಿಯಾ ಸ್ಕೈ ಎಂದು ಬದಲಾಯಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.