ಸ್ವಾಸ್ಥ್ಯ, ಮೂಲಸೌಕರ್ಯದ ಜತೆಗೆ ಕೃಷಿ ಕ್ಷೇತ್ರಕ್ಕೂ ಆದ್ಯತೆ
Team Udayavani, Feb 2, 2021, 6:40 AM IST
ಬಜೆಟ್ ಮಂಡನೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿತ್ತಸಚಿವೆ ನಿರ್ಮಲಾ ಸೀತಾರಾಮನ್, ಈ ಆಯವ್ಯಯದಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದಿದ್ದಾರೆ.
ಈ ಬಗ್ಗೆ ಮಾತನಾಡುತ್ತಾ ಅವರು “”ಈ ಬಜೆಟ್‌ನಲ್ಲಿ ಎರಡು ಮಹತ್ವಪೂರ್ಣ ವಿಶೇಷತೆಗಳಿವೆ. ಮೊದಲನೆಯದು ಮೂಲ ಸೌಕರ್ಯಾಭಿವೃದ್ಧಿಯ ಮೇಲೆ ಖರ್ಚು. ಇದರಡಿಯಲ್ಲಿ ರಸ್ತೆಗಳು, ವಿದ್ಯುತ್ ಉತ್ಪಾದನೆ, ಸೇತುವೆಗಳ ನಿರ್ಮಾಣ ಮತ್ತು ಬಂದರು ಅಭಿವೃದ್ಧಿ ಪ್ರೋತ್ಸಾಹ ನೀಡುವಂಥ ಯೋಜನೆ ಗಳು ಬರುತ್ತವೆ. ಎರಡನೆಯದು ಆರೋಗ್ಯ ಕ್ಷೇತ್ರದಲ್ಲೂ ಬಜೆಟ್‌ಗೆ ಹೆಚ್ಚಿನ ಜಾಗ ಮೀಸಲಿಡಲಾಗಿರುವುದು. ಇದು ಪ್ರಯೋಗ ಶಾಲೆಗಳ ಸ್ಥಾಪನೆ, ನ್ಯಾಶನಲ್ ಇನ್ಸ್‌ಟಿಟ್ಯೂಟ್ ಆಫ್ ವೈರಾಲಜಿ, ತುರ್ತು ಆರೈಕೆ ಕೇಂದ್ರಗಳ ಸ್ಥಾಪನೆ, ಟೆಸ್ಟಿಂಗ್ ಲ್ಯಾಬ್‌ಗಳ ಸ್ಥಾಪ ನೆ ಯನ್ನು ಒಳಗೊಂಡಿರುತ್ತದೆ” ಎಂದರು.
“”ಬಜೆಟ್‌ನಲ್ಲಿ ದೊಡ್ಡ ಪಾಲನ್ನು ಮೂಲಸೌಕರ್ಯಾಭಿವೃದ್ಧಿ ಮತ್ತು ಆರೋಗ್ಯ ಕ್ಷೇತ್ರಕ್ಕೆ ನೀಡಲಾಗಿದೆ. ಹೀಗೆಂದಾಕ್ಷಣ, ಕೃಷಿ ಕ್ಷೇತ್ರಕ್ಕೆ ಜಾಗ ಸಿಕ್ಕಿಲ್ಲ ಎಂದರ್ಥವಲ್ಲ. ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಲಾಭ ಸಿಗಲಿ ಎಂಬ ಕಾರಣಕ್ಕಾಗಿ ನಬಾರ್ಡ್‌ಗಾಗಿ ಅನುದಾನವನ್ನು ಹಚ್ಚಿಸಲಾಗಿದೆ. ಇನ್ನು ಕೃಷಿ ಮೂಲಸೌಕರ್ಯ ಸೆಸ್‌ನಿಂದಾಗಿ ಗ್ರಾಹಕರಿಗೆ ಹಣಕಾಸು ಹೊರೆಯಾಗುವುದಿಲ್ಲ” ಎಂದು ಖಾತ್ರಿಪಡಿಸಿದ ಅವರು ಹೆಚ್ಚಿನ ಸೆಸ್ಗೆ ಅನುಗುಣವಾಗಿ ಕಸ್ಟಮ್ಸ್ ಸುಂಕವನ್ನು ಕಡಿತಗೊಳಿಸಿರುವ ವಿಚಾರವನ್ನು ಪ್ರಸ್ತಾಪಿಸಿದರು.
ಈ ವೇಳೆಯಲ್ಲಿ ಕೃಷಿ ಕಾಯ್ದೆಯ ಕುರಿತು ಎದುರಾದ ಪ್ರಶ್ನೆಗೆ ಅವರು, “”ಈ ವಿಚಾರದಲ್ಲಿ ರೈತರೊಂದಿಗೆ ಮಾತುಕತೆ ನಡೆಸಲು ಸರ್ಕಾರ ಮೊದಲಿನಿಂದಲೂ ಮುಕ್ತವಾಗಿದೆ. ಕೃಷಿ ಕಾನೂನೂಗಳಲ್ಲಿನ ಪ್ರತಿಯೊಂದು ಅಂಶದ ಬಗ್ಗೆಯೂ ರೈತರೊಂದಿಗೆ ಚರ್ಚಿಸಲು ಕೃಷಿ ಸಚಿವರು ಸಿದ್ಧರಾಗಿದ್ದಾರೆ” ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.