Price Hike: ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಡಬ್ಬಲ್ ಚೋಲ್ ಧಾರಣೆ ತೇಜಿ
500 ರೂ. ಗಡಿ ದಾಟಿದ ಡಬ್ಬಲ್ ಚೋಲ್, ಇನ್ನಷ್ಟು ಏರಿಕೆಯ ನಿರೀಕ್ಷೆಯಲ್ಲಿ ಬೆಳೆಗಾರ
Team Udayavani, Nov 12, 2024, 7:55 AM IST
ಪುತ್ತೂರು: ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಡಬ್ಬಲ್ ಚೋಲ್ ಧಾರಣೆ 500 ರೂ. ಗಡಿ ದಾಟಿ ಮುನ್ನುಗ್ಗಿದೆ. ಜತೆಗೆ ಸಿಂಗಲ್ ಚೋಲ್ ಧಾರಣೆಯೂ ಏರಿಕೆ ಕಂಡಿದೆ. ಆದರೆ ಉಪ ಬೆಳೆಗಳಾದ ಕಾಳು ಮೆಣಸು, ರಬ್ಬರ್, ಕೊಕ್ಕೊ ಧಾರಣೆಯಲ್ಲಿ ಏರಿಕೆಯ ಲಕ್ಷಣ ಕಂಡು ಬಂದಿಲ್ಲ.
ಹಳೆ ಅಡಿಕೆಗೆ ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಯಾಗಿದ್ದು, ಧಾರಣೆ ಇನ್ನಷ್ಟು ಏರುವ ಸಾಧ್ಯತೆಗಳ ಬಗ್ಗೆ ಮಾರುಕಟ್ಟೆ ಮೂಲಗಳು ಸುಳಿವು ನೀಡಿವೆ. ಹೀಗಾಗಿ ಹೊರ ಮಾರು ಕಟ್ಟೆ ಮತ್ತು ಸಹಕಾರ ಸಂಸ್ಥೆ ಗಳ ನಡುವೆ ಧಾರಣೆ ಏರಿಕೆಯ ಪೈಪೋಟಿ ಉಂಟಾಗುವ ನಿರೀಕ್ಷೆ ಬೆಳೆಗಾರರದ್ದು.
ಹೊರ ಮಾರುಕಟ್ಟೆಯಲ್ಲಿ ಅಧಿಕ
ಕ್ಯಾಂಪ್ಕೋಗೆ ಹೋಲಿಸಿದರೆ ಹೊರ ಮಾರುಕಟ್ಟೆಯಲ್ಲಿ ಡಬ್ಬಲ್ ಚೋಲ್, ಸಿಂಗಲ್ ಚೋಲ್ ಧಾರಣೆ ಹೆಚ್ಚಿತ್ತು. ಸೆ. 11ರಂದು ಕ್ಯಾಂಪ್ಕೋ ಮಾರುಕಟ್ಟೆ ಯಲ್ಲಿ ಸಿಂಗಲ್ ಚೋಲ್ ಕೆ.ಜಿ.ಗೆ 420 ರೂ. ಇದ್ದರೆ, ಡಬ್ಬಲ್ ಚೋಲ್ 500 ರೂ. ಇತ್ತು. ಹೊರ ಮಾರುಕಟ್ಟೆಯಲ್ಲಿ ಸಿಂಗಲ್ ಚೋಲ್ 425 ರೂ. ಇದ್ದರೆ, ಡಬ್ಬಲ್ ಚೋಲ್ 505 ರೂ. ತನಕ ಇತ್ತು. ಹೊಸ ಅಡಿಕೆ ಧಾರಣೆ 330 ರೂ.ಗಳಿಂದ 340 ರೂ. ತನಕ ಕಂಡುಬಂದಿದೆ.
ಕೊಕ್ಕೊ, ರಬ್ಬರ್ ಕಾಳುಮೆಣಸು ಯಥಾಸ್ಥಿತಿ
ಕೆಲವು ತಿಂಗಳುಗಳ ಹಿಂದೆ ಹಸಿ ಕೊಕ್ಕೊ ಧಾರಣೆ ಕೆ.ಜಿ.ಗೆ 300 ರೂ. ಗಡಿ ದಾಟಿತ್ತು. ಆದರೆ ಪ್ರಸ್ತುತ 90 100 ರೂ. ಆಸುಪಾಸಿನಲ್ಲಿದೆ. 1,000 ರೂ. ತಲುಪಿದ್ದ ಒಣ ಕೊಕ್ಕೊ ಧಾರಣೆ 550 ರೂ.ನಲ್ಲಿದೆ. ಕಾಳುಮೆಣಸು ಧಾರಣೆಯು 615 ರೂ. ಇದ್ದು, ಕಳೆದ ಆರು ತಿಂಗಳಿನಿಂದ ಸ್ಥಿರವಾಗಿದೆ. ರಬ್ಬರ್ ಧಾರಣೆ ಕೂಡ ನಿರೀಕ್ಷಿತ ಮಟ್ಟದಲ್ಲಿ ಕಂಡುಬಂದಿಲ್ಲ. ತೆಂಗಿನಕಾಯಿಗೆ ಬೇಡಿಕೆ ಇದ್ದರೂ ದರ ನಿಗದಿಯಲ್ಲಿ ತಾರತಮ್ಯ ನೀತಿ ಕಂಡುಬಂದಿದೆ. ಹೀಗಾಗಿ ಈಗ ಬೆಳೆಗಾರರ ಪಾಲಿಗೆ ಅಡಿಕೆ ಮಾತ್ರ ಒಂದಷ್ಟು ಭರವಸೆ ಮೂಡಿಸಿದೆ.
ಅಡಿಕೆ ತನ್ನಿ : ಬೆಳೆಗಾರರಿಗೆ ಕರೆ!
ಕಳೆದ ವರ್ಷದ ಫಸಲು ನಷ್ಟದ ಜತೆ ಈ ಬಾರಿಯೂ ನಿರೀಕ್ಷಿತ ಫಸಲು ಇಲ್ಲದ ಕಾರಣ ಚಾಲಿ ಅಡಿಕೆಯ ಕೊರತೆ ಉಂಟಾಗಿದೆ. ಅಡಿಕೆ ಆಧಾರಿತ ಉತ್ಪನ್ನಗಳನ್ನು ತಯಾರಿಸುವ ರಾಜ್ಯಗಳಿಂದ ಚಾಲಿ ಅಡಿಕೆಗೆ ಹೆಚ್ಚು ಬೇಡಿಕೆ ಕಂಡು ಬಂದಿದ್ದು, ನಿರೀಕ್ಷೆಗೆ ತಕ್ಕಂತೆ ಪೂರೈಕೆಗೆ ಇಲ್ಲಿ ಅಡಿಕೆ ಸಿಗುತ್ತಿಲ್ಲ.
ಹೀಗಾಗಿ ಕೆಲವೆಡೆ ಖುದ್ದಾಗಿ ವ್ಯಾಪಾರಿಗಳು ಬೆಳೆಗಾರರಿಗೆ ಕರೆ ಮಾಡಿ ಅಡಿಕೆ ನೀಡುವಂತೆ ವಿನಂತಿಸುತ್ತಿರುವ ಮಾಹಿತಿ ಇದೆ. ಧಾರಣೆ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆಯಲ್ಲಿರುವ ಬೆಳೆಗಾರರು ಏಕಾಏಕಿ ಅಡಿಕೆ ಮಾರಾಟ ಮಾಡುವ ಬದಲು ಕಾದು ನೋಡುವ ತಂತ್ರ ಅನುಸರಿಸಿದ್ದು, ಇದರಿಂದ ಮಾರುಕಟ್ಟೆಯಲ್ಲಿ ಮತ್ತಷ್ಟು ಕೊರತೆ ಉಂಟಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
Vitla: ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ; 2 ದಿನಗಳ ಹಿಂದೆ ಮೃತಪಟ್ಟಿರುವುದಾಗಿ ಶಂಕೆ
Kadaba: ವೃದ್ದ ದಂಪತಿಗಳ ಮನೆ ದ್ವಂಸ ಪ್ರಕರಣ; ಅಧಿಕಾರಿಗಳ ದೌರ್ಜನ್ಯ ಖಂಡಿಸಿ ಪ್ರತಿಭಟನೆ
Belthangady: ತ್ಯಾಜ್ಯ ಸಂಸ್ಕರಣೆ ಘಟಕಕ್ಕೆ 1.18 ಕೋಟಿ ರೂ.
Madanthyar: ಗುರುವಾಯನಕೆರೆ-ಉಪ್ಪಿನಂಗಡಿ ರಸ್ತೆಗೆ ತೇಪೆ ಕಾರ್ಯ
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
Tulu Movie: ಎರಡು ಭಾಗದಲ್ಲಿ ಬರುತ್ತಿದೆ ತುಳು ಸಿನಿಮಾ; ಹೊಸಚಿತ್ರಕ್ಕೆ ಮುಹೂರ್ತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.