ಆತಂಕಕಾರಿ ಆಫ್ಘಾನ್ : ಶಾಂಘೈ ಸಹಕಾರ ಒಕ್ಕೂಟ ಸಭೆಯಲ್ಲಿ ಪ್ರಧಾನಿ ಆತಂಕ
Team Udayavani, Sep 17, 2021, 9:20 PM IST
ನವದೆಹಲಿ/ದುಶಾಂಬೆ: ಅಫ್ಘಾನಿಸ್ತಾನದಲ್ಲಿ ತೀವ್ರವಾದ, ಅಸ್ಥಿರತೆ ಹೆಚ್ಚುತ್ತಿರುವುದು ಜಗತ್ತಿಗೆ ಶುಭ ಸೂಚನೆಯಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಶುಕ್ರವಾರ ನಡೆದ ಶಾಂಘೈ ಸಹಕಾರ ಒಕ್ಕೂಟದ ಸಭೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಸಂದರ್ಭದಲ್ಲಿ ಈ ಕಳವಳ ವ್ಯಕ್ತಪಡಿಸಿದ್ದಾರೆ.
ಜಗತ್ತಿನ ಎಲ್ಲಾ ರಾಷ್ಟ್ರಗಳು ಒಗ್ಗೂಡಿ ಮತ್ತು ಅತ್ಯಂತ ಯೋಚನೆಯಿಂದ ಅಫ್ಘಾನಿಸ್ತಾನದಲ್ಲಿ ಇರುವ ವ್ಯವಸ್ಥೆಯನ್ನು ಗುರುತಿಸುವ ಬಗ್ಗೆ ತೀರ್ಮಾನ ಕೈಗೊಳ್ಳಬೇಕಾಗಿದೆ. ಏಕೆಂದರೆ ಆ ದೇಶದಲ್ಲಿ ಸದ್ಯ ಜಾರಿಯಲ್ಲಿರುವ ಆಡಳಿತ ವ್ಯವಸ್ಥೆ ಎಲ್ಲರನ್ನೂ ಒಳಗೊಂಡಿಲ್ಲ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಇದರ ಜತೆಗೆ ಹೆಚ್ಚುತ್ತಿರುವ ತೀವ್ರವಾದ ಮತ್ತು ಮೂಲಭೂತವಾದ ಜಗತ್ತಿನ ಶಾಂತಿ ಮತ್ತು ನೆಮ್ಮದಿಗೆ ಭಂಗತರುವಂಥದ್ದು ಎಂದು ಎಚ್ಚರಿಸಿದ್ದಾರೆ. ಶಾಂಘೈ ಸಹಕಾರ ಒಕ್ಕೂಟದ ಸದಸ್ಯರು ಅಫ್ಘಾನ್‌ನಲ್ಲಿ ತೀವ್ರವಾದ ಮತ್ತು ಮೂಲಭೂತವಾದ ನಿಯಂತ್ರಣದಲ್ಲಿ ಇರುವಂತೆ ಮಾಡಲೇಬೇಕಾಗಿದೆ.
ಆ ದೇಶದಲ್ಲಿ ಅಸ್ಥಿರತೆ ಮತ್ತು ಮೂಲಭೂತವಾದ ಹೆಚ್ಚುವುದರಿಂದ ಉಗ್ರ ಸಿದ್ಧಾಂತ ಚಿಗಿತುಕೊಳ್ಳಲು ದಾರಿಯಾಗಲಿದೆ ಮತ್ತು ಬದಲಾಗಿರುವ ಅಧಿಕಾರ ವ್ಯವಸ್ಥೆಯಲ್ಲಿ ಎಲ್ಲರೂ ಒಳಗೊಂಡಿಲ್ಲ ಎಂದಿದ್ದಾರೆ.
ಇದನ್ನೂ ಓದಿ :ಮೂರನೇ ಅಲೆ ಭೀತಿ : ಮುಂಬೈನಲ್ಲಿ ಅನಧಿಕೃತ “3ನೇ ಡೋಸ್’ ದರ್ಬಾರ್
ಮೂರನೇ ರಾಷ್ಟ್ರದಂತೆ ನೋಡಬೇಡಿ
ಪೂರ್ವ ಲಡಾಖ್‌ನಲ್ಲಿ ಉಂಟಾಗಿರುವ ಗಡಿ ತಂಟೆಯನ್ನು ಪರಿಹರಿಸಲು ಭಾರತ ಮತ್ತು ಚೀನಾ ಎರಡೂ ಜತೆಗೂಡಿ ಕೆಲಸ ಮಾಡಬೇಕು. ಬಿಕ್ಕಟ್ಟು ನಿವಾರಣೆ ವಿಚಾರವನ್ನು ಮೂರನೇ ರಾಷ್ಟ್ರದ ದೃಷ್ಟಿಕೋನದಿಂದ ನೋಡಲೇಬಾರದು ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ. ತಜಿಕಿಸ್ತಾನ ರಾಜಧಾನಿ ದುಶಾಂಬೆಯಲ್ಲಿ ನಡೆದ ಶಾಂಘೈ ಸಹಕಾರ ಒಕ್ಕೂಟದ ಸದಸ್ಯ ರಾಷ್ಟ್ರಗಳ ಸಭೆಯ ಚೀನಾ ವಿದೇಶಾಂಗ ಸಚಿವ ವಾಂಗ್ ಇ ಜತೆಗೆ ನಡೆದ ಮಾತುಕತೆ ವೇಳೆ ಈ ಅಂಶ ಪ್ರಸ್ತಾಪಿಸಿದ್ದಾರೆ ವಿದೇಶಾಂಗ ಸಚಿವ. ಎರಡೂ ರಾಷ್ಟ್ರಗಳು ಕುಳಿತು ಸಹಮತದಿಂದ ಎಲ್‌ಎಸಿ ವಿವಾದ ಬಗೆಹರಿಸುವ ಅಗತ್ಯವಿದೆ ಎಂದರು. ಇತ್ಯರ್ಥವಾಗದೇ ಉಳಿದಿರುವ ಗಡಿ ತಕರಾರುಗಳನ್ನು ಬಗೆಹರಿಸುವುದು ಎರಡೂ ರಾಷ್ಟ್ರಗಳಿಗೆ ಹಿತವಾಗಲಿರುವ ವಿಚಾರ. ಭಾರತದ ಇತಿಹಾಸ ನೋಡಿದರೆ ಮತ್ತೂಂದು ರಾಷ್ಟ್ರದ ವಿರುದ್ಧ ಕಾಲುಕೆರೆದುಕೊಂಡು ಜಗಳಕ್ಕೆ ಹೋದ ಅಥವಾ ದಾಳಿ ಮಾಡಿದ ಅಂಶಗಳೇ ಇಲ್ಲ. ಪರಸ್ಪರ ವಿಶ್ವಾಸ ಮತ್ತು ನಂಬಿಕೆಗಳಿಂದ ಕೂಡಿದ ಬಾಂಧವ್ಯ ಸ್ಥಾಪನೆ ಆದ್ಯತೆಯಾಗಬೇಕಾಗಿದೆ ಎಂದು ಸೂಚ್ಯವಾಗಿ ಚೀನಾ ವಿದೇಶಾಂಗ ಸಚಿವರಿಗೆ, ಜೈಶಂಕರ್ ವಿವರಿಸಿದ್ದಾರೆ.
ಮೋದಿಯವರ ನಾಲ್ಕು ಆತಂಕ
1. ಸದ್ಯ ದೇಶದಲ್ಲಿರುವ ಅಧಿಕಾರ ಎಲ್ಲರನ್ನೂ ಒಳಗೊಂಡಿಲ್ಲ
2. ಅಸ್ಥಿರತೆ ಮತ್ತು ಮೂಲಭೂತವಾದ ಮುಂದುವರಿದರೆ ಉಗ್ರ ಸಿದ್ಧಾಂತಕ್ಕೆ ದಾರಿ.
3. ಅನಿಯಂತ್ರಿತವಾಗಿ ಮಾದಕ ವಸ್ತು, ಅಕ್ರಮ ಶಸ್ತ್ರಾಸ್ತ್ರಗಳು ಮತ್ತು ಮಾನವ ಕಳ್ಳಸಾಗಣೆ ಹೆಚ್ಚಬಹುದು.
4. ಅಫ್ಘಾನಿಸ್ಥಾನದಲ್ಲಿ ಮಾನವೀಯತೆಯ ಬಿಕ್ಕಟ್ಟು ಉಂಟಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.