‘ಜೈ ಮಾತಾ ದಿ’: ವಾರಾಣಸಿ ಪ್ರಚಾರ ಸಭೆಯಲ್ಲಿ ದುರ್ಗೆಯ ಭಜಿಸಿದ ಪ್ರಿಯಾಂಕಾ ಗಾಂಧಿ
ನಾನು ಉಪವಾಸದಲಿದ್ದು, ದೇವಿಯ ಸ್ತುತಿಯೊಂದಿಗೆ ಮಾತು ಆರಂಭಿಸುತ್ತೇನೆ
Team Udayavani, Oct 10, 2021, 8:30 PM IST
ವಾರಾಣಸಿ : ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿನಿಧಿಸುತ್ತಿರುವ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ದುರ್ಗಾ ಸ್ತೋತ್ರ ಪಠಿಸುವ ಮೂಲಕ ಪ್ರಚಾರದ ವೇಳೆ ಭಾವನಾತ್ಮಕವಾಗಿ ಭಾನುವಾರ ಗಮನಸೆಳೆದರು.
ವಾರಣಾಸಿಯ ಕಿಸಾನ್ ನ್ಯಾಯ ರ್ಯಾಲಿಯಲ್ಲಿ ,ನಾನು ಉಪವಾಸದಲಿದ್ದು, ದೇವಿಯ ಸ್ತುತಿಯೊಂದಿಗೆ ಮಾತು ಆರಂಭಿಸುತ್ತೇನೆ ಎಂದರು ಮಾತ್ರವಲ್ಲದೆ ‘ಜೈ ಮಾತಾ ದಿ’ ಎಂದು ನೆರೆದಿದ್ದ ಕಾರ್ಯಕರ್ತರಿಗೂ ‘ಜೈ ಮಾತಾ ದಿ’ ಎಂದು ಪಠಿಸುವಂತೆ ಕೇಳಿಕೊಂಡರು. ಎರಡು ಸಂಸ್ಕ್ರತ ಶ್ಲೋಕಗಳನ್ನು ಹೇಳಿ ನವರಾತ್ರಿಯ ಶುಭಾಶಯ ಕೋರಿದರು.
ವೇದಿಕೆಯಲ್ಲಿದ್ದ ಛತ್ತೀಸ್ ಗಢ ಮುಖ್ಯಮಂತ್ರಿ ಭೂಪೇಶ್ ಬಗೇಲ್ ಸೇರಿ ಕಾಂಗ್ರೆಸ್ ನಾಯಕರು ಹರ ಹರ ಮಹಾದೇವ್ ಮಂತ್ರ ಜಪಿಸಿದರು.
हमें शक्ति हमारे संघर्षों से मिलती है। भाजपा सरकार चाहे हमें जेल में डाले, चाहे जितनी रुकावट डाले, लेकिन हम किसानों, नौजवानों, दलितों, महिलाओं और गरीबों की आवाज दबने नहीं देंगे।
मैं उप्र की जनता से आह्वान करती हूं कि न्याय की लड़ाई में हमारे साथ आएं।#KisanKoNyayDo pic.twitter.com/jhadWoRZsd
— Priyanka Gandhi Vadra (@priyankagandhi) October 10, 2021
ಉತ್ತರ ಪ್ರದೇಶ ಹಿಂದೂಗಳು ಬಹುಸಂಖ್ಯಾತರಿರುವ ರಾಜ್ಯ, ನಮ್ಮ ಪಕ್ಷ ಹಿಂದೂ ಧರ್ಮದ ಪರ ಪ್ರಚಾರವನ್ನು ಮಾಡುತ್ತದೆ. ನಮ್ಮ ಹಿಂದುತ್ವ ಅಭಿಯಾನವೆಂದರೆ ಹಿಂದೂ ಧರ್ಮವು ಅಂತರ್ಗತವಾಗಿದೆ, ಜಾತ್ಯತೀತವಾಗಿದೆ, ಆದ್ದರಿಂದ ಹಿಂದೂ ಧರ್ಮವು ಇಸ್ಲಾಂ ಸೇರಿದಂತೆ ಇತರ ಧರ್ಮಗಳೊಂದಿಗೆ ಕೈಜೋಡಿಸಲು ಬಯಸುತ್ತದೆ ಎಂದು ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಸುದ್ದಿಗಾರಿಗೆ ಅಭಿಪ್ರಾಯ ತಿಳಿಸಿದ್ದಾರೆ.
ಬಿಜೆಪಿಯವರು ಹೇಳುವಂತೆ ಹಿಂದೂ ಧರ್ಮ ಒಂಟಿಯಾಗಿದೆ. ನಮ್ಮ ಪ್ರಕಾರ ಹಿಂದೂ ಧರ್ಮವು ಇತರ ಧರ್ಮಗಳ ಜೊತೆಗೂಡಿರುತ್ತದೆ. ರಾಜ್ಯವು ನಮ್ಮ ಪರವಾಗಿ ನಿರ್ಧರಿಸುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದು ಖುರ್ಷಿದ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.