ಪ್ರೊ. ಎಂ. ಎ. ಹೆಗಡೆ ಕುರಿತ ‘ಅಣ್ಣ ಮಹಾಬಲ’ ಕೃತಿ ಏ. 9 ರಂದು ಬಿಡುಗಡೆ
Team Udayavani, Apr 7, 2022, 4:44 PM IST
ಶಿರಸಿ: ಯಕ್ಷಗಾನ ತಜ್ಞರಾಗಿ, ಸಂಸ್ಕೃತ ವಿದ್ವಾಂಸರಾಗಿ, ಸಾಹಿತಿಯಾಗಿ, ಯಕ್ಷಕವಿಯಾಗಿ ತಮ್ಮ ಬಹುಮುಖಿ ಪಾಂಡಿತ್ಯದಿಂದಾಗಿ ಹೆಸರಾಗಿದ್ದ ಪ್ರೊ. ಎಂ. ಎ. ಹೆಗಡೆ ಅವರ ಕುರಿತ ‘ಅಣ್ಣ ಮಹಾಬಲ’ ಕೃತಿ ಏ.9 ರಂದು ನಗರದ ರೋಟರಿ ಸೆಂಟರ್ ನಲ್ಲಿ ಬಿಡುಗಡೆ ಆಗಲಿದೆ.
ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ, ಅಧ್ಯಕ್ಷರಿಗೆ ಸರ್ಕಾರ ನೀಡುವ ಗೌರವಧನವನ್ನೂ ಸ್ವಂತಕ್ಕೆ ಬಳಸದೇ, ಕಲೆಗಾಗಿಯೇ ವ್ಯಯಿಸಿ ಆದರ್ಶ ಮೆರೆದ ಹೆಗಡೆ ಅವರು ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಕೊಡುಗೆ ಮಾತ್ರವಲ್ಲ, ಅದ್ವೈತ ವೇದಾಂತ, ಭಾರತೀಯ ದರ್ಶನ ಕ್ಷೇತ್ರಕ್ಕೆ ನೀಡಿದ ಕೊಡುಗೆಯೂ ಗಮನಾರ್ಹವೇ ಆಗಿದ್ದವು. ಅವರ ಅಲಂಕಾರ ತತ್ತ್ವ, ಹಿಂದೂ ಸಂಸ್ಕಾರಗಳು, ಧ್ವನ್ಯಾಲೋಕ ಮತ್ತು ಲೋಚನ, ಶಬ್ದ ಮತ್ತು ಜಗತ್ತು, ಭಾರತೀಯ ತತ್ತ್ವ ಶಾಸ್ತ್ರ, ಸಿದ್ದಾಂತ ಬಿಂದು ಮೊದಲಾದ ಗ್ರಂಥಗಳು ವಿದ್ವತ್ ಮತ್ತು ಸಾಹಿತ್ಯ ವಲಯದ ಗಮನ ಸೆಳೆದಿದ್ದರೆ, ಸೀತಾ ವಿಯೋಗ, ರಾಜಾ ಕರಂಧಾಮದಂಥಹ 20 ಕ್ಕೂ ಹೆಚ್ಚು ಪ್ರಸಂಗಗಳ ಮೂಲಕ ಯಕ್ಷಕವಿಯೂ ಆಗಿದ್ದವರು.
ನೇರ ಮಾತು, ಸರಳ ವ್ಯಕ್ತಿತ್ವ ಹಾಗೂ ದಿಟ್ಟ ನಡೆಯಿಂದ ಸ್ವಚ್ಛ ಬದುಕು ಬಾಳಿದವರು. ಅವರು ನಿಧನರಾಗಿ ಒಂದು ವರ್ಷವಾಗುತ್ತಿರುವ ಸಂದರ್ಭದಲ್ಲಿ ಅವರ ಬದುಕಿನ ಪ್ರಮುಖ ಘಟ್ಟಗಳನ್ನು ದಾಖಲಿಸುವ ಪುಸ್ತಕವೊಂದು ಹೊರಬರುತ್ತಿರುವದು ವಿಶೇಷವಾಗಿದೆ.
ಬೆಂಗಳೂರಿನ ಪದ್ಮಾವತಿ ಮತ್ತು ಹಾಸ್ಯಸಾಹಿತಿ ಎನ್. ರಾಮನಾಥ್ ಅವರ ತೇಜು ಪಬ್ಲಿಕೇಷನ್ಸ್ ಈ ಪುಸ್ತಕ ಪ್ರಕಟಿಸಿದೆ. ಹೆಗಡೆಯವರ ಜೀವನದ ಅಪರೂಪದ ವಿವರಗಳು, ಅವರೊಂದಿಗೆ ಒಡನಾಡಿದವರ ನೆನಪುಗಳು, ಅವರ ಕೃತಿಗಳ ಕುರಿತಾದ ಅಭಿಪ್ರಾಯಗಳು, ಅವರ ಚಿಂತನೆಯ ಮಾದರಿಗಳು ಎಲ್ಲವನ್ನೂ ಒಳಗೊಂಡ ಪುಸ್ತಕವನ್ನು ಹೆಗಡೆ ಅವರ ಸಹೋದರ, ಪತ್ರಕರ್ತ ರಾಜಶೇಖರ ಜೋಗಿನ್ಮನೆ ಅವರು ಸಿದ್ಧಪಡಿಸಿದ್ದಾರೆ.
ಈ ‘ಅಣ್ಣ ಮಹಾಬಲ’ ಕೃತಿ ಏ. 9ರ ಶನಿವಾರ ಸಂಜೆ 4.30ಕ್ಕೆ ಲೋಕಾರ್ಪಣೆಯಾಗಲಿದೆ.
ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ. ಜಿ.ಎಲ್. ಹೆಗಡೆ ಪುಸ್ತಕ ಲೋಕಾರ್ಪಣೆ ಮಾಡಲಿದ್ದು, ಸೆಲ್ಕೋ ಸಂಸ್ಥೆಯ ಸಿಇಒ ಹಾಗೂ ಯಕ್ಷಗಾನ ಕಲಾವಿದ ಮೋಹನ ಭಾಸ್ಕರ ಹೆಗಡೆ ಅತಿಥಿಯಾಗಿ ಪಾಲ್ಗೊಳ್ಳುವರು. ಹಿರಿಯ ಸಾಹಿತಿ, ಕವಿ ಸುಬ್ರಾಯ ಮತ್ತಿಹಳ್ಳಿ ಕೃತಿಯ ಕುರಿತು ಮಾತನಾಡುವರು.
ಶಿರಸಿ ತಾಲೂಕು ಕನ್ನಡಸಾಹಿತ್ಯ ಪರಿಷತ್ ಅಧ್ಯಕ್ಷ ಜಿ. ಸುಬ್ರಾಯ ಭಟ್ ಬಕ್ಕಳ ಹಾಗೂ ಕೃತಿಕಾರ ರಾಜಶೇಖರ ಜೋಗಿನ್ಮನೆ ಉಪಸ್ಥಿತರಿರುವರು. ಕಾರ್ಯಕ್ರಮಕ್ಕೆ ಶಿರಸಿಯ ಶಬರ ಸಂಸ್ಥೆಯ ಸಹಕಾರವಿದೆ ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
Dandeli:ತುಂಡಾಗಿ ಬಿದ್ದಿದ್ದ ಕೇಬಲ್ ವೈರ್ ಸುತ್ತಿ ದ್ವಿಚಕ್ರ ವಾಹನ ಸ್ಕಿಡ್: ಸವಾರನಿಗೆ ಗಾಯ
Dandeli; ಆತ್ಮಹ*ತ್ಯೆಗೆ ಯತ್ನಿಸಿದ ವೃದ್ಧನ ರಕ್ಷಣೆ
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.