ಬಸವನಾಡಿನ ನಡೆದಾಡುವ ವಿಶ್ವವಿದ್ಯಾಲಯ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿಗೆ ರಾಜ್ಯೋತ್ಸವ ಪ್ರಶಸ್ತಿ
Team Udayavani, Oct 31, 2021, 7:33 PM IST
ವಿಜಯಪುರ : ವೈವಿಧ್ಯಮಯ ಸಾಹಿತ್ಯ, ಇತಿಹಾಸ ಹಾಗೂ ವಿವಿಧ ವಿಷಯಗಳ ಸಂಶೋಧನೆ, ಕೃಷಿ, ನೀರಾವರಿ ಹೀಗೆ ತಮ್ಮ ಬಹುಮುಖ ವ್ಯಕ್ತಿತ್ವದ ಮೂಲಕ ಬಸವನಾಡಿನ ನಡೆದಾಡುವ ವಿಶ್ವವಿದ್ಯಾಲಯ, ವಿಶ್ವಕೋಶ ಎನಿಸಿಕೊಂಡವರು ಮುತ್ಸದ್ದಿ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ. ಇಂಥ ದಿವ್ಯ ವ್ಯಕ್ತಿತ್ವಕ್ಕೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮೂಲಕ ಸರ್ಕಾರ ಪ್ರಶಸ್ತಿಯ ಮೌಲ್ಯವನ್ನು ಹೆಚ್ಚಿಸಿದೆ.
ಭಾರತ ಸ್ವಾತಂತ್ರ್ಯ ಗಳಿಸುವ 7 ವರ್ಷಗಳ ಮುನ್ನ ಕೃಷ್ಣಾ ತೀರದ ಕೊಲ್ಹಾರ ಎಂಬ ಪುಟ್ಟ ಹಳ್ಳಿಯಲ್ಲಿ ಜನ್ಮ ತಳೆದ ಕೃಷ್ಣ ಕೊಲ್ಹಾರ ಕುಲಕರ್ಣಿ ಎಂಬ ಪ್ರತಿಭೆ, ಇದೀಗ ಜಾಗತಿಕ ಮಟ್ಟದಲ್ಲಿ ದೊಡ್ಡ ಹೆಸರು ಮಾಡಿದ ಬಹು ವಿಷಯಗಳಲ್ಲಿ ಪ್ರಭುತ್ವ ಸಾಧಿಸಿರುವ ವ್ಯಕ್ತಿತ್ವ.
ದೂರ ಸಂಪರ್ಕ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತ ರಾಯಚೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದರೂ ಕೃಷ್ಣ ಕೊಲ್ಹಾರ ಅವರು ಸಾಹಿತ್ಯ ಓದು, ಸಂಶೋಧನೆಯ ಗೀಳು, ಬರವಣಿಗೆಗೂ ವಿಶೇಷ ಗಮನ ನೀಡುತ್ತಿದ್ದರು. ಸರ್ಕಾರಿ ಸೇವೆಯ ಒತ್ತಡದಲ್ಲಿ ಇದ್ದುಕೊಂಡೇ ಇಷ್ಟೆಲ್ಲ ಸಾಹಿತ್ಯ ಸೇವೆ ಮಾಡಿದ ಕೊಲ್ಹಾರ ಅವರು, ತಮ್ಮ 49ನೇ ವಯೋಮಾದಲ್ಲಿ ವಿಜಯಪುರ ಜಿಲ್ಲೆಯ ಕಾಖಂಡಕಿ ಮಹಿಪತಿ ದಾಸರ ಕುರಿತು ಸಂಶೋಧನಾ ಮಹಾ ಪ್ರಬಂಧ ಮಂಡಿಸಿದ್ದರು ಎಂದರೆ ಇವರ ಅಕ್ಷರ ಪ್ರೇಮಕ್ಕೆ ಸಾಕ್ಷಿ.
ಸಂಶೋಧನಾ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯದಿಂದ ಪಿಎಚ್‍ಡಿ ಪದವಿಯನ್ನೂ ಪಡೆದಿದ್ದಾರೆ. ಇವರ ಬದುಕು-ಬರಹದ ಕುರಿತು ಸುಮಿತ್ರಾ ಪವಾರ ಸಂಶೋಧನೆ ನಡೆಸಿ, ಪಿಎಚ್‍ಡಿ ಪಡೆದಿವುರುದು ಗಮನೀಯ. ಹಲಸು ಪಿಎಚ್‍ಡಿ ಸಂಸೋಧಕರಿಗೆ ಮಾರ್ಗದರ್ಶಕರಾಗಿಯೂ ಸೇವೆ ನೀಡುತ್ತಿದ್ದಾರೆ.
ಕನ್ನಡ ಸಾಹಿತ್ಯ, ಇತಿಹಾಸ, ಕೃಷಿ, ನೀರಾವರಿ, ಜಾನಪದ, ಸಂಸ್ಕøತಿ, ಪರಂಪರೆ, ಬಹುಭಾಷಾ ವಿವಿಧ ವಿಷಯಗಳ ಕುರಿತು ಆಳವಾದ ಅಧ್ಯಯನ ಹಾಗೂ ವಿಶಿಷ್ಟ ಜ್ಞಾನಹೊಂದಿರುವ ಕೊಲ್ಹಾರ ಅವರು, ಶಿಷ್ಟ-ಸೃಜನಶೀಲ ಹೀಗೆ ಬಹುಬಗೆಯ ಸಾಹಿತ್ಯ ಕೃತಿ ರಚನೆಯಲ್ಲಿ ಸಿದ್ಧಹಸ್ತರು. ಈ ವರೆಗೆ ವಿವಿಧ ವಿಷಯಗಳ ಮೇಲೆ ಸುಮಾರು 81ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇವರ ಹಲವು ಸಾಹಿತ್ಯ ಕೃತಿಗಳು ಕರ್ನಾಟಕ ಮಾತ್ರವಲ್ಲ ದೇಶದ ವಿವಿಧ ವಿಶ್ವವಿದ್ಯಾಲಯಗಳಿಂದ ಪ್ರಕಟಗೊಂಡಿವೆ.
ಇದಲ್ಲದೇ ವಿಜಪುರ ಆದಿಲ್ ಶಾಹಿ ಇತಿಹಾಸದ ಕುರಿತು ಅತ್ಯಂತ ಸ್ಪಷ್ಟವಾಗಿ ಮಾತನಾಡ ಬಲ್ಲ ಇವರು, ನಾಡಿನ ನೀರಾವರಿ ಅದರಲ್ಲೂ ಕೃಷ್ಣಾ-ಕಾವೇರಿ ನೀರಾವರಿ ಸಮಸ್ಯೆ, ಸವಾಲುಗಳ ಕುರಿತು ಅತ್ಯಂತ ನಿಖರವಾಗಿ ಮಾತನಾಡುವ ಜ್ಞಾನ ಸಂಪತ್ತು ಹೊಂದಿದ್ದಾರೆ. ಈ ಕಾರಣಕ್ಕಾಗಿ ರಾಜ್ಯ ಸರ್ಕಾರ ಅಂತರಾಜ್ಯ ಜಲವಿವಾದ ಸಮಸ್ಯೆ ತಲೆದೋರಿದಾಗ ಇವರ ಸಲಹೆ, ಮಾರ್ಗದರ್ಶನಕ್ಕೆ ಮೊರೆ ಹೋಗುತ್ತದೆ ಎಂಬುದು ನಾಡಿಗೆ ಹೆಮ್ಮೆ.
80 ರ ಈ ಹರೆಯದಲ್ಲೂ ಬಿಎಲ್‍ಡಿಇ ಸಂಸ್ಥೆಯ ಡಾ.ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ಆದಿಲ್ ಶಾಹಿ ಕಾಲದ ಸಾಹಿತ್ಯದ 18 ಸಂಪುಟಗಳ ಸಂಶೋಧನೆ, ಅನುವಾದ ಹಾಗೂ ಡಾ.ಎಂ.ಎಂ.ಕಲಬುರ್ಗಿ ಸಮಗ್ರ ಸಾಹಿತ್ಯ ಸಂಶೋಧನೆ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಅವರ ಕ್ರಿಯಾಶೀಲತೆಗೆ ಸಾಕ್ಷಿ.
ಇದಲ್ಲದೇ ನಾಡಿನ ಹಾಗೂ ದೇಶದ ವಿವಿಸ ಸಂಶೋಧನೆ, ಸಂಘ-ಸಂಸ್ಥೆಗಳು ಇವರಲ್ಲಿರುವ ಜ್ಞಾನಶಕ್ತಿಯನ್ನು ಬಳಸಿಕೊಂಡಿದ್ದು, ಇವರ ಸೇವೆಗೆ ನೂರಾರು ಪ್ರಶಸ್ತಿ, ಸಮ್ಮಾನಗಳೂ ಲಭಿಸಿವೆ. ರಾಜ್ಯ ಸಾಹಿತ್ಯ ಅಕಾಡೆಮಿ ಇವರ ಅನುವಾದ ಸಾಹಿತ್ಯದ ಸಾಧನೆಗೆ ಜೀವಮಾನದ ಪ್ರಶಸ್ತಿ ನೀಡಿದ್ದರೆ, 2013 ರಲ್ಲಿ ರಾಜ್ಯ ಸರ್ಕಾರ ಕನಕಶ್ರೀ ಪ್ರಶಸ್ತಿ ನೀಡಿದೆ.
ಇದಲ್ಲದೇ ದೇಶದ ಪ್ರತಿಷ್ಠಿತ ಸಂಘ-ಸಂಸ್ಥೆಗಳು ಇವರ ವೈವಿಧ್ಯಮಯ ಸಾಧನೆಗೆ ತಮ್ಮ ಪ್ರಶಸ್ತಿಗಳನ್ನು ನೀಡಿ ತಮ್ಮ ಸಂಸ್ಥೆ ಹಾಗೂ ಪ್ರಶಸ್ತಿ ಗೌರವ ಹೆಚ್ಚಿಸಿಕೊಂಡಿವೆ. ಇದೀಗ ರಾಜ್ಯ ಸರ್ಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡುವ ಮೂಲಕ ಬಸವನಾಡಿನ ಸುಪುತ್ರನಿಗೆ ವಿಶಿಷ್ಟ ಗೌರವ ಸಲ್ಲಿಸಿದೆ.
”ಸರ್ಕಾರ ನಾನು ಮಾಡಿದ ಸಾಹಿತ್ಯ, ಸಂಶೋಧನೆಯಂಥ ಎಲ್ಲ ಸೇವೆಯನ್ನೂ ಗುರುತಿಸಿ, ಕಾಲಕಾಲಕ್ಕೆ ಗೌರವ ನೀಡುತ್ತಲೇ ಬಂದಿದೆ. ಎಂಟು ವರ್ಷಗಳ ಹಿಂದೆ ಕನಕಶ್ರೀ ಪ್ರಶಸ್ತಿ ನೀಡಿದ್ದ ಸರ್ಕಾರ, ಇದೀಗ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡುವ ಮೂಲಕ ನನ್ನ ಸಂತಸವನ್ನು ಇಮ್ಮಡಿಗೊಳಿಸಿದೆ. ಇದಕ್ಕಾಗಿ ಸರ್ಕಾರಕ್ಕೆ ಧನ್ಯವಾದ ಅರ್ಪಿಸುತ್ತೇನೆ.”
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್; ತನಿಖೆ ಚುರುಕು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.