ನಿಷೇಧವಾದರೂ ಮಾರುವೇಷದಲ್ಲಿ ಬಂದಿದೆ ಪಬ್‌ಜಿ!


Team Udayavani, Apr 5, 2021, 1:50 AM IST

ನಿಷೇಧವಾದರೂ ಮಾರುವೇಷದಲ್ಲಿ ಬಂದಿದೆ ಪಬ್‌ಜಿ!

ಮಂಗಳೂರು: ಆನ್‌ಲೈನ್‌ ಗೇಮ್‌ಗಳಲ್ಲಿ ಬಹುತೇಕ ಗೇಮ್‌ಗಳು ಮಕ್ಕಳಲ್ಲಿ ಕ್ರೂರ ಸ್ವಭಾವವನ್ನು ಹುಟ್ಟಿಸಿ ಮಾರಣಾಂತಿಕವಾಗಿ ಪರಿಣಮಿಸುತ್ತವೆ. ಇಂತಹ ಗೇಮ್‌ಗಳಿಗೆ ಮಕ್ಕಳು “ಎಡಿಕ್ಷನ್‌’ (ವ್ಯಸನ)ಆಗುವ ಸಾಧ್ಯತೆಗಳೇ ಹೆಚ್ಚು ಎನ್ನುತ್ತಾರೆ ಸೈಬರ್‌ ತಜ್ಞರು.

ಅನೇಕ ಮಕ್ಕಳಲ್ಲಿ ಕೋಪ, ಉದ್ವೇಗ ಹಾಗೂ ಖನ್ನತೆ (ಡಿಪ್ರಶನ್‌) ಕೂಡ ಇಂತಹ ಗೇಮ್‌ಗಳಿಂದಲೇ ಹುಟ್ಟಿಕೊಳ್ಳುತ್ತವೆ. ಇಂತಹ ಆಟಗಳನ್ನು ಆಡುತ್ತಾ ಹೋದಂತೆ ಮಿದುಳಿನಲ್ಲಿ ಡೊಪಮಿನ್‌ (ಫೀಲ್‌ ಗುಡ್‌ ಹಾರ್ಮೋನ್‌) ಬಿಡುಗಡೆಯಾಗುತ್ತದೆ. ಇದು ಆ ಗೇಮ್‌ ಆಡುವವರಲ್ಲಿ ಗೆಲುವಿನ ವಿಶೇಷ ಅನುಭವ ಹಾಗೂ ಮತ್ತೆ ಮತ್ತೆ ಗೆಲ್ಲಬೇಕು ಎಂಬ ಆಸೆಯನ್ನು ಹೆಚ್ಚಿಸುತ್ತದೆ. ಆಗ ಇದು ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಪ್ರೌಢ ಶಾಲೆ ಹಂತದ ಮಕ್ಕಳಲ್ಲಿ ಇದರ ಪ್ರಭಾವ ಹೆಚ್ಚು. ಪಬ್‌ಜಿ ಸೇರಿದಂತೆ ಹಲವು ರೀತಿಯ ಆನ್‌ಲೈನ್‌ ಗೇಮ್‌ಗಳು ಕೊಲ್ಲುವುದನ್ನು ಪ್ರೇರೇಪಿಸುತ್ತವೆ. ಕೊಲ್ಲುವುದು ಒಂದು ಸಾಮಾನ್ಯ ಪ್ರಕ್ರಿಯೆ ಎಂಬಂತೆ ಬಿಂಬಿಸುತ್ತವೆ. ಇದು ಕೂಡ ಮಕ್ಕಳಲ್ಲಿ ಕ್ರೂರತನ ಬೆಳೆಸಲು ಕಾರಣವಾಗುತ್ತದೆ ಎನ್ನುತ್ತಾರೆ ಮಂಗಳೂರಿನ ಸೈಬರ್‌ ತಜ್ಞ ಡಾ| ಅನಂತ ಪ್ರಭು ಜಿ. ಅವರು.

ಪಬ್‌ಜಿಗೂ ಸರ್ಕಂವೆಂಟ್‌ ದಾರಿ
ಪಬ್‌ಜಿ ಆನ್‌ಲೈನ್‌ ಗೇಮ್‌ನಿಂದ ಆಗಿರುವ ಅನಾಹುತಗಳನ್ನು ಮನಗಂಡು ಸರಕಾರ ಕಳೆದ ವರ್ಷವೇ ಇದನ್ನು ನಿಷೇಧಿಸಿತ್ತು. ಈ ಗೇಮ್ಸ್‌ ಈಗ ಮೂಲ ಸ್ವರೂಪದಲ್ಲಿ ಆನ್‌ಲೈನ್‌ನಲ್ಲಿ ಲಭ್ಯವಿಲ್ಲ. ಆದರೆ ಆನ್‌ಲೈನ್‌ನಲ್ಲಿ ಸರ್ಕಂವೆಂಟ್‌(ಪರ್ಯಾಯ ಮಾರ್ಗ) ದಾರಿಯಲ್ಲಿ ಇದೇ ಗೇಮ್‌ ಹೋಲುವ ಗೇಮ್‌ಗಳು ಇವೆ. ಇದು ಮಕ್ಕಳ ಕೈಗೆ ಸುಲಭವಾಗಿ ಸಿಗುತ್ತಿವೆ. ಗೂಗಲ್‌ ಬ್ರೌಸರ್‌ ಆಧಾರಿತವಾಗಿ ನೇರವಾಗಿ ಇದು ಲಭ್ಯವಾಗುತ್ತಿರುವುದೇ ಈಗ ಎದುರಾಗಿರುವ ದೊಡ್ಡ ಸಮಸ್ಯೆ ಎನ್ನುತ್ತಾರೆ ತಜ್ಞರು.

ಹೆತ್ತವರ ಖಾತೆಗೂ ಕನ್ನ!
ಕೆಲವು ಗೇಮ್ಸ್‌ಗಳು ಉಚಿತವಾಗಿರುತ್ತವೆ, ಇನ್ನು ಕೆಲವು ಗೇಮ್ಸ್‌ಗಳಿಗೆ ಮೊದಲೇ ಹಣ ಪಾವತಿ ಮಾಡಬೇಕಾಗಿರುತ್ತದೆ. ಹಲವಾರು ಸಂದರ್ಭಗಳಲ್ಲಿ ಮಕ್ಕಳು ತಮ್ಮ ಹೆತ್ತವರಿಗೆ ತಿಳಿಯದೇ ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ ನಿಂದ ಹಣ ಪಾವತಿಸಿರುವುದು ಗೊತ್ತಾಗಿದೆ ಎನ್ನುತ್ತಾರೆ ಅನಂತ ಪ್ರಭು ಅವರು.

ಪೋಷಕರೇ ಎಚ್ಚೆತ್ತುಕೊಳ್ಳಿ…
ಮಕ್ಕಳ ಕೈಗೆ ಮೊಬೈಲ್‌ ನೀಡುವುದು ಸಾಮಾನ್ಯ ಎಂಬಂತಾಗಿದೆ. ಈ ರೀತಿ ನೀಡುವಾಗ ಮೊಬೈಲ್‌ನಲ್ಲಿ ಯಾವುದನ್ನು ಮಾತ್ರ ಬಳಸಬೇಕು ಎಂಬ ವಿವೇಚನೆ ಹೆತ್ತವರಲ್ಲಿ ಇರಬೇಕು. ಅನಗತ್ಯ, ಅಪಾಯಕಾರಿಯಾದುದನ್ನು ನೋಡಲು, ಬಳಕೆ ಮಾಡಲು ಸಾಧ್ಯವಾಗದಂತೆ ಬ್ಲಾಕ್‌ ಮಾಡಬೇಕು. ಗೊತ್ತಿಲ್ಲವಾದರೆ ತಿಳಿದವರಿಂದ ಅರಿತುಕೊಳ್ಳಬೇಕು. ಹೆತ್ತವರು ಮತ್ತು ಶಿಕ್ಷಕರ ಪಾತ್ರ ಇದರಲ್ಲಿ ದೊಡ್ಡದು ಎನ್ನುವುದು ತಜ್ಞರ ಸಲಹೆ.

ಇಂಟರ್‌ನೆಟ್‌ ಬ್ರೌಸಿಂಗ್‌: ಮಕ್ಕಳ ಮೇಲೆ ಸಿಐಡಿ ನಿಗಾ?
ಅಂತರ್ಜಾಲದಲ್ಲಿ ಅಪಾಯಕಾರಿ ಯಾಗಿರುವ, ನಿಷೇಧಿಸಲ್ಪಟ್ಟ ಕೆಲವು ಸೈಟ್‌ಗಳನ್ನು ಬ್ರೌಸ್‌ ಮಾಡುತ್ತಿರುವ ನಿರ್ದಿಷ್ಟ ವಯಸ್ಸಿನವರ ಬಗ್ಗೆ ಸಿಐಡಿ ಮಾಹಿತಿ ಸಂಗ್ರಹಿಸುತ್ತಿದ್ದು ಈ ಸಂಬಂಧವಾಗಿ ಸ್ಥಳೀಯ ಸೈಬರ್‌ ಪೊಲೀಸ್‌ ಠಾಣೆಗಳಿಂದಲೂ ಮಾಹಿತಿ ಕೋರಲಾಗಿದೆ ಎಂದು ತಿಳಿದುಬಂದಿದೆ. ಸೈಬರ್‌ ಪ್ರಕರಣಗಳನ್ನು ಸಿಐಡಿ ನಿಭಾಯಿಸುತ್ತಿದೆ. ಇಂತಹ ಅಪರಾಧಗಳಿಗೆ ಮಾಹಿತಿ ತಂತ್ರಜ್ಞಾನ ಕಾಯಿದೆ 2020ರಂತೆ 3ರಿಂದ 5 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

“ಗೇಮರ್ ಕಮ್ಯುನಿಟಿ’ಯ ಅಪಾಯ
ಪಬ್‌ಜಿಯಂತಹ ಆನ್‌ಲೈನ್‌ ಗೇಮ್‌ಗಳು ಇನ್ನೊಂದು ಕಾರಣಕ್ಕೂ ಅಪಾಯಕಾರಿ. ಒಂದು ವೇಳೆ ಆ ಆಟಕ್ಕೆ ಅಡಿಕ್ಟ್ ಆಗದೇ ಇದ್ದರೂ ಕೂಡ ಹೆಚ್ಚಿನ ಸಂದರ್ಭಗಳಲ್ಲಿ ಅದರಿಂದ ಹೊರಗೆ ಬರಲಾಗುವುದಿಲ್ಲ. ಅದರಿಂದ ಹೊರಬರಬೇಕು ಅಂದು ಕೊಂಡರೂ “”ಗೇಮರ್ ಕಮ್ಯುನಿಟಿ’ ಮತ್ತೆ ಮತ್ತೆ ಅದರತ್ತ ಸೆಳೆಯುತ್ತದೆ. ಈ ರೀತಿಯ ಗೇಮ್‌ಗಳನ್ನು ಆಡುವವರದ್ದೇ ಗುಂಪಿಗೆ ಗೇಮರ್ ಕಮ್ಯುನಿಟಿ ಎನ್ನಲಾಗುತ್ತದೆ. ಉದಾಹರಣೆಗೆ ಪಬ್‌ಜಿ ಆಟ ಆಡುವವರದ್ದೇ ಒಂದು ಗುಂಪು ಇರುತ್ತದೆ. ಆ ಗುಂಪು ವಾಟ್ಸ್‌  ಆ್ಯಪ್‌ ಅಥವಾ ಇತರ ರೀತಿಯಲ್ಲಿ ಬೇರೆ ಬೇರೆ ಗುಂಪುಗಳನ್ನು ಮಾಡಿಕೊಂಡು ತನ್ನ ಸದಸ್ಯರನ್ನು ಸದಾ ಉತ್ತೇಜಿಸುತ್ತಾ ಪ್ರೇರೇಪಿಸುತ್ತಾ ಇರುತ್ತದೆ. ಅಲ್ಲದೆ ಈ ಗುಂಪು ಅಶ್ಲೀಲ ದೃಶ್ಯಗಳು, ಡ್ರಗ್ಸ್‌ ಮೊದಲಾದ ಅಕ್ರಮಗಳ ಬಗ್ಗೆಯೂ ಯುವಜನತೆಯನ್ನು ಆಕರ್ಷಿಸಿ ಅವರು ಆ ಗುಂಪು ಬಿಡದಂತೆ ಮಾಡುವ ಸಾಧ್ಯತೆಗಳು ಇರುತ್ತವೆ ಎನ್ನುತ್ತಾರೆ ಡಾ| ಪ್ರಭು.

ಯುವ ಸಮುದಾಯ ಕೆಡಿಸುವ ಸಂಚು
ಇಂತಹ ಗೇಮ್‌ಗಳು ಮಕ್ಕಳು, ಯುವ ಸಮುದಾಯಕ್ಕೆ ಸುಲಭವಾಗಿ ದೊರೆಯುವಂತೆ ಮಾಡುವ ಸಂಚು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿದೆ. ಕೆಲವು ಗೇಮ್‌ಗಳನ್ನು ಉಚಿತವಾಗಿಯೂ ನೀಡಲಾಗುತ್ತಿದೆ. ಇದರ ಚಟ ಯುವಜನತೆ ಬೆಳೆಸಿಕೊಂಡರೆ ಅವರು ಯಾವುದೇ ರೀತಿಯಲ್ಲಿ ದೇಶದ ಸಂಪನ್ಮೂಲವಾಗುವುದಿಲ್ಲ. ಈ ಮೂಲಕ ಯುವಜನತೆಯನ್ನು ಬಲಿ ತೆಗೆದುಕೊಳ್ಳುವ ಯತ್ನ ನಡೆಯುತ್ತಿದೆ.

ಬೆಳವಣಿಗೆಗೆ ಮಾರಕ
ಆನ್‌ಲೈನ್‌ ಗೇಮ್‌ಗಳು ಮಕ್ಕಳ ಬೆಳವಣಿಗೆಗೆ ಮಾರಕ. ಅದರಲ್ಲಿ ಬರುವ ಹೆಚ್ಚಿನ ಪಾತ್ರಗಳು ಮಕ್ಕಳಲ್ಲಿ ಋಣಾತ್ಮಕ ಮನೋಭಾವ, ಬೆಳೆಸುತ್ತವೆ. ಹೆತ್ತವರು ತಮ್ಮ ಮಕ್ಕಳಿಗೆ ಮೊಬೈಲ್‌ ನೀಡಿ ಸಮಾಧಾನ ಪಡಿಸುವ ಅಭ್ಯಾಸವನ್ನು ಆರಂಭಿಸಬಾರದು. ಬದಲಾಗಿ ಆಟಿಕೆ, ಪುಸ್ತಗಳ ಅಭ್ಯಾಸ ಮಾಡಿಸಿದರೆ ಉತ್ತಮ. ಅನಿವಾರ್ಯ ಸಂದರ್ಭದಲ್ಲಿ ಮೊಬೈಲ್‌ ನೀಡುವಾಗ ಅನಗತ್ಯ ವಿಚಾರಗಳು ತೆರೆದುಕೊಳ್ಳದಂತೆ ಲಾಕ್‌ ಮಾಡಬೇಕು.
– ಡಾ| ಗಿರೀಶ್‌, ಮಕ್ಕಳ ತಜ್ಞರು, ಲೇಡಿಗೋಶನ್‌ ಸರಕಾರಿ ಆಸ್ಪತ್ರೆ, ಮಂಗಳೂರು

ಟಾಪ್ ನ್ಯೂಸ್

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ

ravi-kumar

BJP ಸೋಲಿಗೆ ರಾಜ್ಯಾಧ್ಯಕ್ಷ ಒಬ್ಬರೇ ಹೊಣೆಯಲ್ಲ: ಎನ್‌. ರವಿಕುಮಾರ್‌

1-nikkki

JDS ಕಳೆದುಕೊಂಡಲ್ಲೇ ಹುಡುಕುತ್ತೇನೆ: ನಿಖಿಲ್‌ ಕುಮಾರಸ್ವಾಮಿ

Renukacharya

Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

Dawwod-Arrest

Mangaluru: ಕುಖ್ಯಾತ ರೌಡಿಶೀಟರ್‌ ದಾವೂದ್‌ ಬಂಧಿಸಿದ ಸಿಸಿಬಿ ಪೊಲೀಸರು

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

1-ewew

ಸಂಗೀತ ವಿವಿಯಲ್ಲಿ ಕೋರ್ಸ್‌ ಆರಂಭ: ಕುಲಪತಿ ನಾಗೇಶ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

CT RAVI 2

C T Ravi; ಸನಾತನ ಧರ್ಮ ಉಳಿದರೆ ದೇಶದ ಉಳಿವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.