ಸರಕಾರಿ ವೈದ್ಯರಿಗೆ ಖಾಸಗಿ ಪ್ರಾಕ್ಟೀಸ್ ನಿಷೇಧ: ಶಿಫಾರಸು
Team Udayavani, Jun 23, 2023, 7:21 AM IST
ಬೆಂಗಳೂರು: ಕಡ್ಡಾಯ ಗ್ರಾಮೀಣ ಸೇವೆಯಲ್ಲಿರುವ ಎಂಬಿಬಿಎಸ್ ವೈದ್ಯರನ್ನು ನಗರ ಪ್ರದೇಶಗಳಲ್ಲೂ ಬಳಸಿಕೊಳ್ಳುವಂತೆ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ನೇತೃತ್ವದ ಆಡಳಿತ ಸುಧಾರಣ ಆಯೋಗ-2 ಸರಕಾರಕ್ಕೆ ಶಿಫಾರಸನ್ನು ಸಲ್ಲಿಸಿದೆ. ಇದನ್ನು ಕಾಯಿದೆ ತಿದ್ದುಪಡಿ ಮೂಲಕ ಅನುಷ್ಠಾನಕ್ಕೆ ತರಲು ಸರಕಾರ ಸಿದ್ಧವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸರಕಾರಿ ವೈದ್ಯರಿಗೆ ಖಾಸಗಿ ಪ್ರಾಕ್ಟೀಸ್ ನಿಷೇಧಿಸುವಂತೆ ವರದಿಯಲ್ಲಿ ಸಲಹೆ ನೀಡಲಾಗಿದೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಿ ವರದಿ ಸಲ್ಲಿಸಿದ ವಿಜಯ ಭಾಸ್ಕರ್ ನೇತೃತ್ವದ ಆಯೋಗವು ಪ್ರಮುಖ 21 ಅಂಶಗಳನ್ನು ಒಳಗೊಂಡಿರುವ ವರದಿ ಸಲ್ಲಿಸಿದೆ.
ವರದಿಯ ಮುಖ್ಯಾಂಶಗಳು
ಆರೋಗ್ಯ ಇಲಾಖೆಯಲ್ಲಿ ನರ್ಸರಿಂಗ್ ನಿರ್ದೇಶನಾಲಯ ಸ್ಥಾಪನೆಗೆ ಶಿಫಾರಸು.
ಸರಕಾರಿ ಆಸ್ಪತ್ರೆಗಳಲ್ಲಿ ಸಂಜೆ ಒಪಿಡಿಗಳನ್ನು ಪ್ರಾರಂಭಿಸಲು ಸಲಹೆ.
ಒಳರೋಗಿಗಳು ಮತ್ತು ಹೆರಿಗೆಗಳ ಸಂಖ್ಯೆಯನ್ನು ಅವಲಂಬಿಸಿ, ಹೆಚ್ಚಿನ ಕೆಲಸದ ಹೊರೆ ಹೊಂದಿರುವ ತಾಲೂಕು ಆಸ್ಪತ್ರೆಗಳಿಗೆ ಹೆಚ್ಚುವರಿಯಾಗಿ 50 ಹೊಸ ಸಾಮಾನ್ಯ ಹಾಸಿಗೆಗಳನ್ನು ಮಂಜೂರು ಮಾಡಲು ಶಿಫಾರಸು.
ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸ್ತ್ರೀರೋಗ ತಜ್ಞರು, ಮಕ್ಕಳ ವೈದ್ಯರು, ಅರಿವಳಿಕೆ ತಜ್ಞರು, ದಂತ ಶಸ್ತ್ರಚಿಕಿತ್ಸಕರು ವಾರಕ್ಕೊಮ್ಮೆ ಗಂಟೆಯ ಆಧಾರದಲ್ಲಿ ಮತ್ತು ಮೂಳೆಚಿಕಿತ್ಸಕ, ಮನೋವೈದ್ಯರು, ಫಿಸಿಯೋಥೆರಪಿಸ್ಟ್ ತಿಂಗಳಿಗೊಮ್ಮೆ ಗಂಟೆಯ ಆಧಾರದಲ್ಲಿ ತಜ್ಞರ ಸೇವೆಗಳನ್ನು ಪಡೆಯಲು ಎಆರ್‌ಎಸ್‌ಗೆ ಹಣ ಒದಗಿಸಬಹುದು.
ಎಲ್ಲ ಜಿಲ್ಲಾ ಆಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಡಳಿತಾಧಿಕಾರಿಯ ಅಡಿಯಲ್ಲಿ ಆಸ್ಪತ್ರೆ ವ್ಯವಸ್ಥಾಪಕರ ಹುದ್ದೆ ನೇಮಕಕ್ಕೆ ಸಲಹೆ.
ಎಎನ್‌ಎಂಗಳು ಮತ್ತು ಪುರುಷ ಆರೋಗ್ಯ ಕಾರ್ಯಕರ್ತರು ದ್ವಿ-ಚಕ್ರ ವಾಹನಗಳನ್ನು ಖರೀದಿಸಲು 20 ಕೋಟಿ ರೂ. ವೆಚ್ಚದಲ್ಲಿ ಶೇ.50ರ ಸಬ್ಸಿಡಿ
100 ಹಾಸಿಗೆಗಳ ಸಾಮರ್ಥ್ಯದ ತಾಲೂಕು ಆಸ್ಪತ್ರೆಗಳಲ್ಲಿ ಜಿಎನ್‌ಎಂ ಅಥವಾ ಬಿಎಸ್‌ಸಿ ನರ್ಸಿಂಗ್ ಕೋರ್ಸ್‌ಗಳನ್ನು 20 ಸೀಟ್‌ಗಳೊಂದಿಗೆ ನರ್ಸಿಂಗ್ ಕಾಲೇಜು ಹಾಗೂ 10 ಪ್ಯಾರಾಮೆಡಿಕಲ್ ಸೀಟುಗಳೊಂದಿಗೆ ಪ್ಯಾರಾ ಮೆಡಿಕಲ್ ಕೋರ್ಸ್ ಪ್ರಾರಂಭಿಸುವುದು.
ವಿಭಾಗಿಯ ಮಟ್ಟದಲ್ಲಿ ಸಿಸ್ಟಂ ಇಂಪ್ರೂಮೆಂಟ್ ಟೀಮ್ (ಎಸ್‌ಐಟಿ) ರಚನೆ.
ಪ್ರತಿ ಬುಧವಾರ ತಾಯಿಯ ಆರೋಗ್ಯ, ಮರಣ ಪ್ರಮಾಣ ಕುರಿತು ಇಲಾಖೆಯಿಂದ ಸ್ಕ್ರೀನಿಂಗ್‌ಗೆ ಸೂಚನೆ.
ಸಮುದಾಯ ಆರೋಗ್ಯ ಕೇಂದ್ರಗಳು, ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಸಂಜೆ ಕ್ಲಿನಿಕ್ ತೆರೆಯಲು ಪ್ರಸ್ತಾವ.
ಆರೋಗ್ಯ ಕರ್ನಾಟಕ ಆಯುಷ್ಮಾನ್ ಭಾರತ್ ಆರೋಗ್ಯ ವಿಮೆ ಯೋಜನೆಯಡಿ ವಿಕಲಚೇತನರಿಗೆ ಚಿಕಿತ್ಸೆ.
ಪುರುಷ ಆರೋಗ್ಯ ಕಾರ್ಯಕರ್ತರಿಗೆ ಡ್ರೆಸ್ ಕೋಡ್ ಕಡ್ಡಾಯ.
ವಿಶೇಷ ಕೌಶಲಗಳನ್ನು ಹೊಂದಿರುವ ಆಯುಷ್ ಪಿಜಿ ವೈದ್ಯರ ಸೇವೆಯನ್ನೂ, ಔಷಧಾಲಯಗಳ ಬದಲು ಆಯುಷ್ ಆಸ್ಪತ್ರೆಗಳಿಗೆ ಮಾತ್ರ ನಿಯೋಜನೆಗೆ ನಿರ್ಧಾರ ಕೈಗೊಳ್ಳಲು ಸಲಹೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.