ದೇಶದಲ್ಲಿ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ಅನಿವಾರ್ಯ
Team Udayavani, Apr 10, 2021, 7:00 AM IST
ವರ್ಷಗಳುರುಳಿದಂತೆಯೇ ಕೃಷಿ ಕಾರ್ಮಿಕರ ಕೊರತೆ ದೇಶವ್ಯಾಪಿ ಸಮಸ್ಯೆಯಾಗಿ ಮಾರ್ಪಟ್ಟಿದ್ದು ಇದು ಕೃಷಿ ಕ್ಷೇತ್ರದ ಮೇಲೆ ಗಂಭೀರ ಪರಿಣಾಮವನ್ನುಂಟು ಮಾಡುತ್ತಿದೆ. ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸುವ ದೇಶದ ಕನಸು ಸಾಕಾರಗೊಳ್ಳುವಲ್ಲಿ ಕಾರ್ಮಿಕರ ಸಮಸ್ಯೆ ಬಲುದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ.
ಭಾರತ ಕೃಷಿ ಆಧಾರಿತ ದೇಶವಾಗಿದ್ದು ಇಲ್ಲಿನ ಆರ್ಥಿಕತೆ ಕೃಷಿಯನ್ನೇ ಅವಲಂಬಿಸಿದೆ. ಕೃಷಿ ವಲಯಕ್ಕೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ಸರಕಾರಗಳಿಂದ ನಿರಂತರವಾಗಿ ಪ್ರಯತ್ನಗಳು ನಡೆಯುತ್ತಲೇ ಬಂದಿವೆ. ಆದರೆ ವರ್ಷಗಳುರುಳಿದಂತೆಯೇ ಒಟ್ಟಾರೆ ಕೃಷಿ ಸಂಬಂಧಿ ಚಟುವಟಿ ಕೆ ಗಳು ಕ್ಷೀಣಿಸುತ್ತಿವೆ. ಕೃಷಿ ಕ್ಷೇತ್ರದಲ್ಲಿನ ಈ ಹಿನ್ನಡೆಗೆ ಹತ್ತು ಹಲ ವು ಕಾರಣ ಗಳನ್ನು ಪಟ್ಟಿ ಮಾಡಬಹುದಾದರೂ ಕೃಷಿಕರಲ್ಲಿ ತಮ್ಮ ವೃತ್ತಿಯ ಬಗೆಗೆ ವಿಶ್ವಾಸ ಮೂಡಿಸುವಂತಹ ಉಪಕ್ರಮಗಳನ್ನು ಕೈಗೊಳ್ಳು ವಲ್ಲಿ ಸರಕಾರಗಳು ಎಡವಿರುವುದೇ ಬಲುಮುಖ್ಯ ಕಾರಣ ಎನ್ನಬಹುದು.
ಕೇಂದ್ರ ಸಾಂಖೀಕ ಮತ್ತು ಯೋಜನಾ ಅನುಷ್ಠಾನ ಇಲಾಖೆಯು ಬಿಡುಗಡೆ ಮಾಡಿರುವ “ಭಾರತದಲ್ಲಿನ ಮಹಿಳೆಯರು ಮತ್ತು ಪುರುಷರು-2020′ ವರದಿಯ ಪ್ರಕಾರ, ಕೃಷಿ ಕ್ಷೇತ್ರದಲ್ಲಿ ಪುರುಷ ಮತ್ತು ಮಹಿಳಾ ಕಾರ್ಮಿಕರ ಸಂಖ್ಯೆ ಕಳೆದ ಕೆಲವು ವರ್ಷಗಳಿಂದೀಚೆಗೆ ಗಣ ನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಈ ಅವಧಿಯಲ್ಲಿ ನಗರ ಪ್ರದೇಶ ಗಳಲ್ಲಿನ ವ್ಯಾಪಾರ, ಹೊಟೇಲ್ ಮತ್ತಿತರ ಕ್ಷೇತ್ರಗಳಲ್ಲಿ ಕಾರ್ಮಿಕರ ಸಂಖ್ಯೆ ಏರಿಕೆಯನ್ನು ಕಂಡಿದೆ.
ಉನ್ನತ ಶಿಕ್ಷಣ ಪಡೆದವರು ಉದ್ಯೋಗಗಳನ್ನು ಅರಸಿ ನಗರಗಳತ್ತ ಪ್ರಯಾಣ ಬೆಳೆಸಿದರೆ ಇತರರು ನಗರಗಳಲ್ಲಿ ಸಣ್ಣಪುಟ್ಟ ವೃತ್ತಿಗಳನ್ನು ಅವಲಂಬಿಸುವ ಮೂಲಕ ತಮ್ಮತಮ್ಮ ಜೀವನೋಪಾಯವನ್ನು ಕಂಡು ಕೊಳ್ಳತೊಡಗಿದ್ದಾರೆ. ಯಾರಿಗೂ ತಮ್ಮ ಹಿರಿಯರಿಂದ ಬಳುವಳಿಯಾಗಿ ಬಂದ ಜಮೀನಿನಲ್ಲಿ ಕೃಷಿ ಚಟುವಟಿಕೆ ನಡೆಸಲು ಆಸಕ್ತಿ ಇಲ್ಲವಾಗಿದೆ.
ಹಳ್ಳಿಗಳಿಂದ ನಗರಗಳಿಗೆ ವಲಸೆ ಹೋಗಿ ಅಲ್ಲಿ ಯಾವುದಾದರೊಂದು ಉದ್ಯೋಗದಲ್ಲಿ ತೊಡಗಿಕೊಂಡಿದ್ದವರು ಕಳೆದ ವರ್ಷ ಕೊರೊನಾದ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ಘೋಷಿಸಿದಾಗ ತಮ್ಮ ಹುಟ್ಟೂರಿಗೆ ವಾಪಸಾಗಿದ್ದರು. ಈ ಸಂದರ್ಭದಲ್ಲಿ ಅವೆಷ್ಟೋ ವರ್ಷ ಗಳಿಂದ ಪಾಳುಬಿದ್ದಿದ್ದ ಕೃಷಿ ಭೂಮಿಯನ್ನು ಹದಗೊಳಿಸಿ ಕೃಷಿ ಚಟು ವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಇದರಿಂದಾಗಿ ಸಹಜವಾಗಿಯೇ ಕೃಷಿ ಬೆಳೆಗಳ ಉತ್ಪಾದನೆ ಹೆಚ್ಚಿತ್ತು. ಈ ಬೆಳವಣಿಗೆ ದೇಶದ ಸದ್ಯದ ವಾಸ್ತವ ಚಿತ್ರಣಕ್ಕೆ ಕನ್ನಡಿ ಹಿಡಿದದ್ದಂತೂ ಸುಳ್ಳಲ್ಲ.
ಕೃಷಿ ವಲಯ ಎದುರಿಸುತ್ತಿರುವ ನೈಜ ಸಮಸ್ಯೆಗಳ ಬಗೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರಕಾರವಾಗಲಿ, ಕೃಷಿ ಸಂಬಂಧಿತ ಸಂಶೋಧನ ಸಂಸ್ಥೆಗಳಾಗಲಿ ಗಂಭೀರವಾದ ಪ್ರಯತ್ನಗಳನ್ನೇ ನಡೆಸುತ್ತಿಲ್ಲ. ಸರಕಾರ ಕೈಗೊಳ್ಳುತ್ತಿರುವ ಕ್ರಮಗಳೆಲ್ಲವೂ ಕೇವಲ ತಾತ್ಕಾಲಿಕ ಪರಿಹಾರ ಗಳಾಗಿವೆಯೇ ವಿನಾ ರೈತರನ್ನು ಸಮಸ್ಯೆಗಳಿಂದ ಮುಕ್ತರನ್ನಾಗಿಸುವಲ್ಲಿ ಸಹಕಾರಿ ಆಗಿಲ್ಲ. ಸರಕಾರ ಒಂದಿಷ್ಟು ಯೋಜನೆ, ಪರಿಹಾರ ಕ್ರಮಗಳನ್ನು ಘೋಷಿಸಿ ಕೃಷಿಕರ ಮೂಗಿಗೆ ಬೆಣ್ಣೆ ಸವರುವ ಬದಲು ರೈತರು ಎದುರಿಸುತ್ತಿರುವ ನೈಜ ಸಮಸ್ಯೆಗಳು, ಇದರ ಪಶ್ಚಾತ್ ಪರಿಣಾಮಗಳ ಬಗೆಗೆ ಆಳವಾದ ಚಿಂತನೆ ನಡೆಸಿ ಸಮಗ್ರವಾದ ಕಾರ್ಯಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸಬೇಕು. ಈ ದಿಸೆಯಲ್ಲಿ ಕೃಷಿ ವಿವಿಗಳು, ಸಂಶೋಧನ ಸಂಸ್ಥೆಗಳೂ ಸರಕಾರದೊಂದಿಗೆ ಕೈಜೋಡಿಸಬೇಕಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.