ಎನ್‌ಐಟಿಕೆ ಟೋಲ್ ವಿರುದ್ಧ ಕೆಸರಲ್ಲಿ ಕುಳಿತು ಪ್ರತಿಭಟನೆ!
ಆಪದ್ಭಾಂಧವ ಆಸೀಫ್ ನೇತೃತ್ವದಲ್ಲಿ ಅಹೋರಾತ್ರಿ ಪ್ರತಿಭಟನೆ ಐದನೇ ದಿನಕ್ಕೆ
Team Udayavani, Feb 11, 2022, 12:49 PM IST
ಸುರತ್ಕಲ್ : ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್ ಎನ್ ಐಟಿಕೆ ಬಳಿ ಇರುವ ಟೋಲ್‌ಗೇಟ್ ತೆರವುಗೊಳಿಸುವಂತೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಆಪದ್ಭಾಂಧವ ಆಸೀಫ್ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಪ್ರತಿಭಟನೆ ಶುಕ್ರವಾರ ಐದನೇ ದಿನಕ್ಕೆ ಕಾಲಿರಿಸಿದೆ.
ಗುರುವಾರ ಸ್ಥಳೀಯವಾಗಿ ತೋಡಲಾದ ಹೊಂಡದ ಕೆಸರು ನೀರಿನಲ್ಲಿ ಕುಳಿತು, ಮಲಗಿ ಪ್ರತಿಭಟನೆ ನಡೆಸಿದರು. ಸುರತ್ಕಲ್ ಪೊಲೀಸ್ ನಿರೀಕ್ಷಕ ಚಂದ್ರಪ್ಪ ಆಗಮಿಸಿ ಹೆದ್ದಾರಿ ಇಲಾಖೆಯ ಅನುಮತಿ ಮೇರೆಗೆ ಟೋಲ್ ಸಂಗ್ರಹಿಸುತ್ತಿರುವ ವಿಚಾರವನ್ನು ಗಮನಕ್ಕೆ ತಂದರಲ್ಲದೆ, ಕೇಂದ್ರ ಹೆದ್ದಾರಿ ಇಲಾಖೆಯೇ ಇದಕ್ಕೆ ಕ್ರಮ ಕೈಗೊಳ್ಳಬೇಕಿದೆ ಎಂದು ಮನವರಿಕೆ ಮಾಡಿದರು. ಆಸಿಫ್ ಅವರು ಜಿಲ್ಲಾಧಿಕಾರಿಗಳೇ ಸ್ಥಳಕ್ಕೆ ಆಗಮಿಸಿ ಅಹವಾಲು ಸ್ವೀಕರಿಸ ಬೇಕೆಂದು ಪಟ್ಟು ಹಿಡಿದಿದ್ದಾರೆ. ಇಲ್ಲಿ ಎರಡೆರಡು ಟೋಲ್‌ಗೇಟ್ ಅಗತ್ಯವಿಲ್ಲ; ತತ್‌ಕ್ಷಣ ಇದನ್ನು ತೆರವುಗೊಳಿಸಿ ಇಲ್ಲವಾದರೆ ವಿವಿಧ ಸಂಘಟನೆಗಳ ಜತೆಗೂಡಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.