ಶಿರಸಿ: ನ. 28 ಕ್ಕೆ ಅಪ್ಪು ನುಡಿ ನಮನ
Team Udayavani, Nov 26, 2021, 5:45 PM IST
ಶಿರಸಿ: ಕದಂಬ ಕಲಾ ವೇದಿಕೆ ಶಿರಸಿ, ಶಿರಸಿ ಕರೋಕೆ ಸ್ಟುಡಿಯೊ ಹಾಗೂ ಅರುಣೋದಯ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ನ.28 ರಂದು ಸಂಜೆ 5 ಗಂಟೆಯಿಂದ ನಗರದ ಹೊಟೆಲ್ ಸುಪ್ರಿಯಾ ಇಂಟರ್ನ್ಯಾಷನಲ್ ನ ಸಭಾಭವನದಲ್ಲಿ ಮರಣೋತ್ತರ ಕರ್ನಾಟಕ ರತ್ನ ಗೌರವಕ್ಕೆ ಭಾಜನರಾದ ಮರೆಯಲಾಗದ ನಟ ಪುನೀತ್ ರಾಜ್ ಕುಮಾರ್ ಅವರಿಗೆ ನಮನ, ‘ಕರ್ನಾಟಕ ರತ್ನ ನುಡಿ ನಮನ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ನುಡಿನಮನವನ್ನು ಚಿಂತಕ ಪ್ರೊ. ಕೆ.ಎನ್.ಹೊಸ್ಮನಿ ಹಾಗೂ ಪತ್ರಕರ್ತ ರಾಘವೇಂದ್ರ ಬೆಟಕೊಪ್ಪ ಜಂಟಿಯಾಗಿ ಉದ್ಘಾಟಿಸುವರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲ, ನೋಟರಿ ಸತೀಶ್ ನಾಯ್ಕ ವಹಿಸುವರು. ಅತಿಥಿಗಳಾಗಿ ಶಿರಸಿ ಶಾಮಿಯಾನ ಡೆಕೋರೇಶನ್ ಸಂಘದ ಅಧ್ಯಕ್ಷ ಕೃಷ್ಣ ಗುಡಿಗಾರ್ ಹಾಗೂ ಕರೋಕೆ ಸ್ಟುಡಿಯೋ, ಕದಂಬ ವೇದಿಕೆಯ ನಿರ್ದೇಶಕಿ ಗೀತಾ ಸಂತೋಷ್ ಭಾಗವಹಿಸಲಿದ್ದಾರೆ. ನಂತರ ಕರೋಕೆ ಕ್ಲಬ್ ಹಾಗೂ ಕದಂಬ ಕಲಾ ವೇದಿಕೆಯ ಗಾಯಕರಿಂದ ಗಾನ ನಮನ ನಡೆಯಲಿದೆ ಎಂದು ಸಂಘಟಕ ಗಾಯಕ ಶಿರಸಿ ರತ್ನಾಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.