ಮಣ್ಣಲ್ಲಿ ‘ಕಾಣದಂತೆ ಮಾಯವಾದ’ ಅಭಿಮಾನಿಗಳ ‘ಯುವರತ್ನ’
Team Udayavani, Oct 31, 2021, 7:56 AM IST
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಂತ್ಯಕ್ರಿಯೆ ಭಾನುವಾರ ಬೆಳಗ್ಗೆ ಸಕಲ ಸರಕಾರಿ ಗೌರವಗಳೊಂದಿಗೆ ನಡೆಯಿತು.
ಪುನೀತ್ ರಾಜಕುಮಾರ್ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ವೇಳೆ ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ ಹಲವು ಸಚಿವರು, ಮಾಜಿ ಸಿಎಂ ಗಳಾದ ಯಡಿಯೂರಪ್ಪ, ಸಿದ್ದರಾಮಯ್ಯ,ಚಿತ್ರರಂಗದ ನೂರಾರು ಗಣ್ಯರು ಹಾಜರಿದ್ದು ಅಂತಿಮ ನಮನ ಸಲ್ಲಿಸಿದರು.
ನಸುಕಿನಲಿ ಪುನೀತ್ ರಾಜ್‍ಕುಮಾರ್ ಅಂತಿಮಯಾತ್ರೆ ಮುಕ್ತಾಯಗೊಂಡಿತು. ಸೂರ್ಯ ಉದಯಿಸುವ ಮುಂಚೆಯೇ ಪುನೀತ್ ಪಾರ್ಥೀವ ಶರೀರ ಕಂಠೀರವ ಸ್ಟೇಡಿಯಂ ತಲುಪಿತು.
ನಿಗದಿಗಿಂತ ಸಮಯಕ್ಕಿಂತ ಎರಡು ಗಂಟೆ ಮುಂಚೆ ಆರಂಭವಾದ ಅಂತಿಮಯಾತ್ರೆ ಆರಂಭವಾಯಿತು.
ಬೆಳಿಗ್ಗೆ 6.30 ಕ್ಕೆ ಕ್ರೀಡಾಂಗಣ ಬಿಟ್ಟು, 8 ಕ್ಕೆ ಸ್ಟೂಡಿಯೋ ತಲುಪಲು ಉದ್ದೇಶಿಸಲಾಗಿತ್ತು.ಆದರೆ, ಅಭಿಮಾನಿಗಳ ದಟ್ಟಣೆ ಕಡಿಮೆಯಾಗದ ಮತ್ತು ರಸ್ತೆಯಲ್ಲಿ ಅಭಿಮಾನಿಗಳ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ 4 ಗಂಟೆಗೆ ಅಂತಿಮ ದರ್ಶನ ಸ್ಥಗಿತಗೊಳಿಸಲಾಯಿತು. ಸರಿಯಾಗಿ ಬೆಳಗಿನ ಜಾವ 5 ಕ್ಕೆ ಅಂತಿಮಯಾತ್ರೆ ಆರಂಭವಾಯಿತು. ಗಾಜಿನ ಛಾವಣಿಯ ತೆರೆದ ವಾಹನದಲ್ಲಿ ಪುನೀತ್ ಪಾರ್ಥೀವ ಶರೀರ ಕಾಣುವಂತೆ ಇಡಲಾಗಿದ್ದು, ಕುಟುಂಬಸ್ಥರು ಪಕ್ಕದಲ್ಲಿ ಕುಳಿತಿದ್ದರು.
ಬೆಳಿಗ್ಗೆ 5.05ಕ್ಕೆ ಕಂಠೀರವ ಕ್ರೀಡಾಂಗಣದಿಂದ ಹೊರಟು ಹಡ್ಸನ್ ಸರ್ಕಲ್, ಕೆ.ಜಿ.ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಕೆ.ಆರ್.ಸರ್ಕಲ್, ಮಹಾರಾಣಿ ಕಾಲೇಜು, ಚಾಲುಕ್ಯ ಸರ್ಕಲ್, ವಿಂಡ್ಸರ್ ಮ್ಯಾನರ್ ಹೋಟೆಲ್ ವೃತ್ತ, ಬಿಡಿಎ, ಗುಟ್ಟಹಳ್ಳಿ, ಕಾವೇರಿ ಜಂಕ್ಷನ್, ಬಾಷ್ಯಂ ಸರ್ಕಲ್, ಸ್ಯಾಂಕಿ ರಸ್ತೆ, ಮಲ್ಲೇಶ್ವರ, ಐಐಎಸ್ಸಿ, ಯಶವಂತಪುರ ಮೇಲ್ಸೇತುವೆ, ಗೋವರ್ಧನ್ ಥಿಯೇಟರ್, ಗೊರಗುಂಟೆಪಾಳ್ಯ ಮೆಟ್ರೋನಿಲ್ದಾಣ ಮೂಲಕ 5.47ಕ್ಕೆ ಕಂಠೀರವ ಸ್ಟುಡಿಯೋ ತಲುಪಿತು.
ಪೊಲೀಸ್ ಬಗಿ ಭದ್ರತೆಯಲ್ಲಿ ಯಾತ್ರೆ ಸಾಗಿದ್ದು, ಒಂದು ಕಿ.ಮೀ ಅಂತರದಲ್ಲಿ ಸಾರ್ವಜನಿಕರ ವಾಹನ ನಿಷೇಧಿಸಲಾಗಿತ್ತು.
ಗುಟ್ಟಹಳ್ಳಿ, ಮಲ್ಲೇಶ್ವರ, ಯಶವಂತಪುರ, ತುಮಕೂರು ರಸ್ತೆಯ ಇಕ್ಕೆಲಗಳಲ್ಲಿ ಅಭಿಮಾನಿಗಳು ನಿಂತು ಅಂತಿಯಯಾತ್ರೆ ಕಣ್ತುಂಬಿಕೊಂಡರು.
ಮುಖ್ಯಮಂತ್ರಿ ಬೊಮ್ಮಾಯಿ ಅವರು ಪುನೀತ್ ಅವರ ಪತ್ನಿ ಅಶ್ವಿನಿ ಅವರಿಗೆ ರಾಷ್ಟ್ರಧ್ವಜವನ್ನು ಹಸ್ತಾಂತರಿಸಿದರು.
ಆತ್ಮೀಯ ಮಿತ್ರನಿಗೆ ಸಿಎಂ ಮುತ್ತಿನ ವಿದಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
MUST WATCH
ಹೊಸ ಸೇರ್ಪಡೆ
MUDA Scam: ಕೇಸ್ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು
Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?
Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ
Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ
ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.