Allu Arjun: 10 ಕೋಟಿ ರೂ.ವಿನ ಜಾಹೀರಾತು ಆಫರ್ನ್ನು ರಿಜೆಕ್ಟ್ ಮಾಡಿದ ಅಲ್ಲು ಅರ್ಜುನ್
Team Udayavani, Dec 16, 2023, 1:50 PM IST
ಹೈದರಾಬಾದ್: ಸ್ಟೈಲಿಸ್ಟ್ ಸ್ಟಾರ್ ಅಲ್ಲು ಅರ್ಜುನ್ ಅಭಿಮಾನಿಗಳು ʼಪುಷ್ಪ-2ʼ ಸಿನಿಮಾಕ್ಕಾಗಿ ಕಾಯುತ್ತಿದ್ದಾರೆ. ಅಲ್ಲು ಅರ್ಜುನ್ ಅವರಿಗೆ ದೊಡ್ಡ ಫ್ಯಾನ್ ಬೇಸ್ ಇದೆ. ಅಭಿಮಾನಿಗಳ ಮನಸ್ಸು ಗೆಲ್ಲುವ ಕೆಲಸವೊಂದನ್ನು ನಟ ಮತ್ತೆ ಮಾಡಿದ್ದಾರೆ.
ಜಾಹೀರಾತುಗಳ ಆಯ್ಕೆ ವಿಚಾರದಲ್ಲಿ ‘ಬನ್ನಿ’ ಮೊದಲಿನಿಂದಲೂ ಎಚ್ಚರಿಕೆಯಿಂದಲೇ ಹೆಜ್ಜೆಯಿಡುತ್ತಾರೆ. ಜನರಿಗೆ ತೊಂದರೆ ಅಥವಾ ದಿಕ್ಕು ತಪ್ಪಿಸುವ ಜಾಹೀರಾತಿನಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಳ್ಳುವುದಿಲ್ಲ. ತಂಬಾಕು, ಮದ್ಯಪಾನ ಕಂಪೆನಿಗಳ ಜಾಹೀರಾತಿನಲ್ಲಿ ಅಲ್ಲು ಮೊದಲಿನಿಂದಲೂ ಕಾಣಿಸಿಕೊಳ್ಳುವುದಿಲ್ಲ.
ಇದೀಗ 10 ಕೋಟಿ ರೂಪಾಯಿ ಜಾಹೀರಾತನ್ನು ಅಲ್ಲು ಅರ್ಜುನ್ ತಿರಸ್ಕರಿಸಿದ್ದಾರೆ ಎನ್ನುವ ಬಗ್ಗೆ ವರದಿಯಾಗಿದೆ.
ಇದನ್ನೂ ಓದಿ: Video: ಅತ್ತೆ ಜೊತೆ ಆಳಿಯನ ಲವ್ವಿಡವ್ವಿ; ರೊಮ್ಯಾನ್ಸ್ ವೇಳೆ ಗ್ರಾಮಸ್ಥರ ಕೈಗೆ ಸಿಕ್ಕ ಜೋಡಿ
ಮದ್ಯ ಮತ್ತು ಪಾನ್ ಬ್ರ್ಯಾಂಡ್ ಆಫರ್ ಅನ್ನು ತಿರಸ್ಕರಿಸಿದ್ದಾರೆ. ಈ ಕಂಪೆನಿ ʼಪುಷ್ಪಾ-2ʼ ಸಿನಿಮಾದಲ್ಲಿ ಅಲ್ಲು ಅರ್ಜುನ್ ಪ್ರತಿಬಾರಿ ತಂಬಾಕು ಜಗಿಯುವಾಗ ಅಥವಾ ಮದ್ಯವನ್ನು ಸೇವಿಸುವಾಗ ತಮ್ಮ ಕಂಪೆನಿಯ ಲೋಗೋವನ್ನು ಸ್ಕ್ರೀನ್ ಮೇಲೆ ತೋರಿಸಬೇಕು. ಇದಕ್ಕೆ 10 ಕೋಟಿ ನೀಡುತ್ತೇವೆ ಎಂದು ಚಿತ್ರತಂಡಕ್ಕೆ ಆಫರ್ ನೀಡಿತ್ತು. ಆದರೆ ಇದನ್ನು ನಟ ಅಲ್ಲು ಅರ್ಜುನ್ ರಿಜೆಕ್ಟ್ ಮಾಡಿದ್ದಾರೆ.
ತಾನು ಇಂತಹ ಜಾಹೀರಾತು ಬ್ರ್ಯಾಂಡ್ ಗಳನ್ನು ಪ್ರಚಾರ ಮಾಡುವುದಕ್ಕೆ ಇಷ್ಟಪಡಲ್ಲ ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ.
ಈ ರೀತಿಯ ಬ್ರ್ಯಾಂಡ್ ಗಳ ಜಾಹೀರಾತನ್ನು ಅಲ್ಲು ಅರ್ಜುನ್ ತಿರಸ್ಕರಿಸುವುದು ಇದೇ ಮೊದಲಲ್ಲ. ಈ ಹಿಂದೆ ʼಪುಷ್ಪʼ ಸಿನಿಮಾದ ಬಳಿಕ ಅವರಿಗೆ ಕೋಟಿ ನೀಡುವ ಪಾನ್ ಮಸಾಲ ಕಂಪೆನಿಯ ಜಾಹೀರಾತು ಆಫರ್ ಬಂದಿತ್ತು. ಆದರೆ ಅದನ್ನು ಅವರು ತಿರಸ್ಕರಿಸಿದ್ದರು.
ಅಲ್ಲು ಅರ್ಜುನ್ ಸದ್ಯ ʼಪುಷ್ಪಾ-2ʼ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಸುಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ಫಾಹದ್ ಫಾಸಿಲ್, ರಶ್ಮಿಕಾ ಮಂದಣ್ಣ, ಸುನೀಲ್, ಪ್ರಕಾಶ್ ರಾಜ್ , ಡಾಲಿ ಧನಂಜಯ ಜಗಪತಿ ಬಾಬು ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.
2024 ರ ಆಗಸ್ಟ್ 15 ರಂದು ಸಿನಿಮಾ ತೆರೆ ಕಾಣಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.