ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅನಾರೋಗ್ಯ ಬಚ್ಚಿಡಲು ದೇಹ ತ್ಯಾಜ್ಯವೂ ಸಂಗ್ರಹ
ಪುಟಿನ್ ಅನಾರೋಗ್ಯ ಬಚ್ಚಿಡಲು ಇಂಥ ಕ್ರಮ ಎಂದು ಪ್ರತಿಪಾದನೆ
Team Udayavani, Jun 15, 2022, 6:50 AM IST
ಮಾಸ್ಕೋ: ಉಕ್ರೇನ್ ವಿರುದ್ಧ ರಷ್ಯಾ ದಾಳಿ ಶುರು ಮಾಡಿದ ಬಳಿಕ ಜಗತ್ತಿನ ಮಾಧ್ಯಮಗಳಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆರೋಗ್ಯದ ಬಗ್ಗೆಯೇ ಚರ್ಚೆ ನಡೆದಿದೆ.
ಈಗಾಗಲೇ ಬಿಗಿ ಭದ್ರತೆಯಲ್ಲಿ ಸಂಚರಿಸುವ ಪುಟಿನ್ ಅನಾರೋಗ್ಯ ಬಾಧಿಸುತ್ತಿದೆಯೋ ಇಲ್ಲವೋ ಎಂಬುದು ಜಗತ್ತಿಗೆ ಗೊತ್ತಾಗಲೇ ಬಾರದು ಎಂಬ ಕಾರಣಕ್ಕೆ ಹೊಸ ಕ್ರಮವನ್ನೂ ಅನುಸರಿಸಲಾಗುತ್ತಿದೆಯಂತೆ. ಅವರ ಉಗುಳಿದ್ದನ್ನು, ಮಲ, ಮೂತ್ರಗಳನ್ನು ಸಂಗ್ರಹಿಸುವುದಕ್ಕೂ ವಿಶೇಷ ಸಿಬ್ಬಂದಿಯನ್ನು ರಷ್ಯಾ ಸರ್ಕಾರ ಏರ್ಪಾಡು ಮಾಡಿದೆ ಎಂದು ಫ್ರಾನ್ಸ್‌ನ ಮಾಧ್ಯಮವೊಂದು ವರದಿ ಮಾಡಿದೆ.
ಅದರ ಪ್ರಕಾರ ಪುಟಿನ್ ಅವರು ವಿದೇಶ ಪ್ರವಾಸ ಕೈಗೊಂಡಲ್ಲಿ ಅವರ ದೇಹದ ತ್ಯಾಜ್ಯಗಳನ್ನು ಸಂಗ್ರಹಿಸಿ ನೇರವಾಗಿ ಮಾಸ್ಕೋಗೆ ಕಳುಹಿಸಲಾಗುತ್ತದೆಯಂತೆ.
ಪುಟಿನ್ ಅವರ ದೇಹದ ತ್ಯಾಜ್ಯಗಳನ್ನು ಶತ್ರು ರಾಷ್ಟ್ರಗಳು ಸಂಗ್ರಹಿಸಿ, ಅದನ್ನು ಪರಿಶೀಲಿಸಿ “ರಷ್ಯಾ ಅಧ್ಯಕ್ಷರಿಗೆ ಅನಾರೋಗ್ಯ ಇದೆ’ ಎಂದು ವದಂತಿ ಹಬ್ಬಿಸುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗುತ್ತಿದೆಯಂತೆ.
ಹಿಂದೆಯೂ ಕೈಗೊಳ್ಳಲಾಗಿತ್ತು:
ಈ ಉದ್ದೇಶಕ್ಕಾಗಿ ರಷ್ಯಾದ ಫೆಡರಲ್ ಗಾರ್ಡ್ ಸರ್ವಿಸ್ ವಿಶೇಷ ಸಿಬ್ಬಂದಿ, ವಿಶೇಷ ಸೂಟ್‌ಕೇಸ್‌ಗಳನ್ನೂ ವ್ಯವಸ್ಥೆ ಮಾಡಿದೆ. ರಷ್ಯಾ ಬಗ್ಗೆ ಪುಸ್ತಕಗಳನ್ನು ಬರೆದು ಜನಪ್ರಿಯರಾಗಿರುವ ಮಿಖಾಯಿಲ್ ರುಬಿನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ ಇದೊಂದು ಹೊಸ ಕ್ರಮ ಅಲ್ಲವೆಂದಿದ್ದಾರೆ.
ಇದನ್ನೂ ಓದಿ:ಸಾಮಾನ್ಯರಿಗೆ ಅನ್ವಯವಾಗುವ ಕಾನೂನು ಗಾಂಧಿ ಕುಟುಂಬಕ್ಕೂ ಅನ್ವಯವಾಗುತ್ತದೆ: ತೇಜಸ್ವಿ ಸೂರ್ಯ
2017ರ ಮೇ 29ರಂದು ಪುಟಿನ್ ಫ್ರಾನ್ಸ್‌ಗೆ ಭೇಟಿ ನೀಡಿದ್ದಾಗ ಮತ್ತು 2019ರ ಅಕ್ಟೋಬರ್‌ನಲ್ಲಿ ಸೌದಿ ಅರೇಬಿಯಾ ಪ್ರವಾಸ ಕೈಗೊಂಡಿದ್ದಾಗ ಇದೇ ರೀತಿಯ ಕ್ರಮ ಅನುಸರಿಸಲಾಗಿತ್ತು ಎಂದು ಹೇಳಿದ್ದಾರೆ.
ಇನ್ನೂ ಒಂದು ಮಾಹಿತಿ ಪ್ರಕಾರ ಪುಟಿನ್ ರಷ್ಯಾದ ಅಧ್ಯಕ್ಷರಾಗಿ ಅಧಿಕಾರ ವಹಿಸಿದ ದಿನದಿಂದ ಇಂಥ ಕ್ರಮವನ್ನು ಭದ್ರತಾ ಕಾರಣಗಳಿಗಾಗಿ ಅನುಸರಿಸಲಾಗುತ್ತಿದೆಯಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್‌ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.