![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Sep 11, 2024, 2:52 PM IST
ವಾಷಿಂಗ್ಟನ್: ಅಮೆರಿಕ ಪ್ರವಾಸದಲ್ಲಿರುವ ವಿಪಕ್ಷ ನಾಯಕ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸದಾ ಭಾರತ ವಿರೋಧಿ ಹೇಳಿಕೆಗಳನ್ನು ನೀಡುವ ಮೂಲಕ ವಿವಾದ ಹುಟ್ಟುಹಾಕಿರುವ ನಡುವೆಯೇ ಭಾರತ ವಿರೋಧಿ ನಿಲುವು ಹೊಂದಿದ್ದ ಅಮೆರಿಕ ಸಂಸದೆ ಇಲ್ಹಾನ್ ಓಮರ್ ಭೇಟಿಯಾಗಿರುವುದಾಗಿ ವರದಿ ತಿಳಿಸಿದೆ.
ರಾಹುಲ್ ಗಾಂಧಿ ಅಮೆರಿಕದಲ್ಲಿ ಸಂಸದರಾದ ಬ್ರಾಡ್ಲೈ ಜೇಮ್ಸ್ ಶೆರ್ಮಾನ್, ಜೋನಾಥನ್ ಜಾಕ್ಸನ್, ರೋ ಖನ್ನಾ, ರಾಜಾ ಕೃಷ್ಣಮೂರ್ತಿ, ಬಾರ್ಬರಾ ಲೀ, ಶ್ರೀ ಥಾಣೆದಾರ್, ಜೇಸಸ್ ಜಿ ಚುಯಾ ಗಾರ್ಸಿಯಾ, ಇಲ್ಹಾನ್ ಓಮರ್, ಹಾಂಕ್ ಜಾನ್ಸನ್ ಸೇರಿದಂತೆ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಯಾರೀಕೆ ಇಲ್ಹಾನ್ ಓಮರ್?
ಇಲ್ಹಾನ್ ಓಮರ್ ತನ್ನ ಭಾರತ ವಿರೋಧಿ ನಿಲುವಿನಿಂದಲೇ ಪ್ರಚಾರದಲ್ಲಿದ್ದು, ಓಮರ್ ಮಿನ್ನೆಸೋಟಾದ 5ನೇ Congressional ಜಿಲ್ಲೆಯ ಅಮೆರಿಕದ ಜನಪ್ರತಿನಿಧಿಯಾಗಿದ್ದಾರೆ. 2019ರಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಇಲ್ಹಾನ್, ಅಮೆರಿಕ ಸಂಸತ್ ಪ್ರವೇಶಿಸಿದ ಮೊದಲ ಆಫ್ರಿಕನ್ ನಿರಾಶ್ರಿತೆ. ಇಲ್ಹಾನ್ ಸೋಮಾಲಿಯಾದಲ್ಲಿ ಜನಿಸಿದ್ದು, ಆಕೆಯ ಕುಟುಂಬ ಸದಸ್ಯರು ಮತ್ತು 8ವರ್ಷದ ಇಲ್ಹಾನ್ ಸೋಮಾಲಿಯಾದಲ್ಲಿನ ನಾಗರಿಕ ದಂಗೆ ಬಳಿಕ ದೇಶ ತೊರೆದಿದ್ದರು.
ಸುಮಾರು ನಾಲ್ಕು ವರ್ಷಗಳ ಕಾಲ ನಿರಾಶ್ರಿತರ ಶಿಬಿರದಲ್ಲಿದ್ದ ಓಮರ್ ಮತ್ತು ಕುಟುಂಬ 1990ರಲ್ಲಿ ಅಮೆರಿಕಕ್ಕೆ ವಲಸೆ ಬಂದಿದ್ದರು. 1997ರಲ್ಲಿ ಓಮರ್ ಕುಟುಂಬ ಮಿನ್ನೆಪೊಲಿಸ್ ನಲ್ಲಿ ನೆಲೆ ನಿಂತಿದ್ದರು ಎಂದು ವರದಿ ತಿಳಿಸಿದೆ.
ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜಾರ್ ಹ*ತ್ಯೆ ಪ್ರಕರಣದಲ್ಲಿ ಭಾರತ ಮತ್ತು ಕೆನಡಾ ನಡುವೆ ರಾಯಭಾರಿ ಘರ್ಷಣೆ ಏರ್ಪಟ್ಟಾಗ, ಭಾರತದ ವಿರುದ್ಧದ ಕೆನಡಾ ತನಿಖೆಗೆ ಅಮೆರಿಕ ಪೂರ್ಣ ಪ್ರಮಾಣದಲ್ಲಿ ಬೆಂಬಲ ನೀಡಬೇಕು ಎಂದು ಇಲ್ಹಾನ್ ಓಮರ್ ಭಾರತ ವಿರೋಧಿ ಧೋರಣೆ ಪ್ರದರ್ಶಿಸಿದ್ದಳು.
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
You seem to have an Ad Blocker on.
To continue reading, please turn it off or whitelist Udayavani.