ಮಳೆ, ಪ್ರವಾಹ: ಹಿಮಾಚಲದಲ್ಲಿ ಮುಂದುವರಿದ ಅನಾಹುತ- ಇದುವರೆಗೆ 164 ಸಾವು
20 ಸಾವಿರ ಪ್ರವಾಸಿಗರು ಅತಂತ್ರ
Team Udayavani, Jul 13, 2023, 7:03 AM IST
ನವದೆಹಲಿ: ಉತ್ತರ ಭಾರತದಲ್ಲಿ ಮಳೆಯ ಪ್ರಕೋಪ ಇನ್ನೂ ಆರಿಲ್ಲ. ಬುಧವಾರದ ಮಟ್ಟಿಗೆ ಹೇಳುವುದಿದ್ದರೆ ಮಳೆಯ ಅಬ್ಬರ ಕೊಂಚ ತಗ್ಗಿದ್ದರೂ, ಮುಂದಿನ ಐದು ದಿನಗಳಿಗೆ ಅನ್ವಯವಾಗುವಂತೆ ಬಿರುಸಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಹಿಮಾಚಲ ಪ್ರದೇಶವೊಂದರಲ್ಲಿಯೇ ಸಾವಿನ ಸಂಖ್ಯೆ 88ಕ್ಕೆ ಏರಿಕೆಯಾಗಿದೆ. ಪಂಜಾಬ್, ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದಲ್ಲಿ ಇದುವರೆಗೆ ಮಳೆಯಿಂದಾಗಿ ಅಸುನೀಗಿದವರ ಸಂಖ್ಯೆ 164ಕ್ಕೆ ಏರಿಕೆಯಾಗಿದೆ.
20 ಸಾವಿರ ಮಂದಿಗೆ ಸಂಕಷ್ಟ: ಹಿಮಾಚಲ ಪ್ರದೇಶದಲ್ಲಿ ಮಳೆ, ಪ್ರವಾಹದಿಂದಾಗಿ ಇದುವರೆಗೆ 88 ಮಂದಿ ಅಸುನೀಗಿದ್ದಾರೆ. ಒಟ್ಟು 3 ಸಾವಿರ ಕೋಟಿ ರೂ.ಗಳಿಂದ 4 ಸಾವಿರ ಕೋಟಿ.ರೂ.ವರೆಗೆ ನಷ್ಟ ಉಂಟಾಗಿರುವ ಅಂದಾಜು ಇದೆ ಎಂದು ಸಿಎಂ ಸುಖ್ವೀಂದರ್ ಸಿಂಗ್ ಸುಖು ಬುಧವಾರ ತಿಳಿಸಿದ್ದಾರೆ. ಕುಲ್ಲು ಜಿಲ್ಲೆಯ ಕಸೋಲ್ ಎಂಬಲ್ಲಿಂದ 2 ಸಾವಿರ ಮಂದಿ ಪ್ರವಾಸಿಗರನ್ನು ಪ್ರವಾಹ ಸಂಕಷ್ಟದಿಂದ ಪಾರು ಮಾಡಲಾಗಿದೆ. ಇದರ ಹೊರತಾಗಿಯೂ 20 ಸಾವಿರ ಮಂದಿ ವಿವಿಧ ಸ್ಥಳಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ ಎಂದಿದ್ದಾರೆ. ಇದುವರೆಗೆ ಒಟ್ಟು 50 ಸಾವಿರ ಮಂದಿಯನ್ನು ಪಾರು ಮಾಡಿದ್ದೇವೆ. ಕುಲ್ಲು ಮತ್ತು ಮನಾಲಿಯಲ್ಲಿ ತಾತ್ಕಾಲಿಕವಾಗಿ ಮೊಬೈಲ್ ಸಂಪರ್ಕ ಪುನಸ್ಥಾಪಿಸಲಾಗಿದೆ ಎಂದಿದ್ದಾರೆ ಹಿಮಾಚಲ ಸಿಎಂ.
ಲಾಹುಲ್‌ನಲ್ಲಿ ಸಿಕ್ಕಿ ಹಾಕಿಕೊಂಡಿದ್ದ 300ಕ್ಕೂ ಅಧಿಕ ಪ್ರವಾಸಿಗರ ವಾಹನಗಳು ತಮ್ಮ ತಮ್ಮ ಗಮ್ಯಸ್ಥಾನಗಳತ್ತ ತೆರಳಲಾರಂಭಿಸಿವೆ. ಕಸೋಲ್-ಭುಂಟಾರ್ ರಸ್ತೆಯಲ್ಲಿ ಉಂಟಾಗಿದ್ದ ಭೂಕುಸಿತವನ್ನು ತೆರವುಗೊಳಿಸುವ ಕೆಲಸ ನಡೆದಿದೆ. ನಾನೇ ಖುದ್ದಾಗಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಯ ಉಸ್ತುವಾರಿ ವಹಿಸುತ್ತಿದ್ದೇನೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಪ್ರವಾಹದಲ್ಲಿ ತೊಂದರೆಗೆ ಒಳಗಾಗಿರುವ ಪ್ರವಾಸಿಗರಿಗೆ ಹಲವಾರು ಹೋಟೆಲ್‌ಗಳು, ಪ್ರವಾಸಿ ಯುನಿಟ್‌ಗಳು ಉಚಿತವಾಗಿ ಆಹಾರ ಪೂರೈಕೆ ಮಾಡಿ ಗಮನ ಸೆಳೆದಿವೆ. ಎಟಿಎಂಗಳಿಗೆ ನೀರು ನುಗ್ಗಿದ್ದರಿಂದ ಹಿಮಾಚಲ ಪ್ರದೇಶದ ಹಲವೆಡೆ ದೂರದ ಊರುಗಳಿಂದ ಬಂದವರಿಗೆ ಹಣ ವಿಥ್‌ಡ್ರಾ ಮಾಡಲು ಸಮಸ್ಯೆಯಾಗಿದೆ. ಜು.15, ಜು.16ರಂದು ಕೂಡ ಬಿರುಸಿನ ಮಳೆಯಾಗುವ ಎಚ್ಚರಿಕೆ ಇದೆ. ರಾಜ್ಯಕ್ಕೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಹರ್ಯಾಣದಲ್ಲಿ ಮುಳುಗಿದ ಗೃಹ ಸಚಿವರ ನಿವಾಸ
ಪಂಜಾಬ್ ಮತ್ತು ಹರ್ಯಾಣಗಳಲ್ಲಿ ಪ್ರವಾಹ ಪರಿಸ್ಥಿತಿ ಕೈಮೀರಿದೆ. ಎರಡೂ ರಾಜ್ಯಗಳಲ್ಲಿ ವರ್ಷ ಪ್ರಕೋಪಕ್ಕೆ ಅಸುನೀಗಿದವರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. ಪಂಜಾಬ್‌ನ ಪಟಿಯಾಲ, ರೂಪ್‌ನಗರ, ಮೋಗಾ, ಲುಧಿಯಾನ, ಮೊಹಾಲಿ, ಎಸ್‌ಬಿಎಸ್ ನಗರ ಮತ್ತು ಫತೇಘರ್ ಸಾಹಿಬ್ ಜಿಲ್ಲೆಗಳಿಂದ ತೊಂದರೆಗೆ ಒಳಗಾದ ಸುಮಾರು 10 ಸಾವಿರ ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಪಂಜಾಬ್‌ನಲ್ಲಿ 11 ಮಂದಿ ಅಸುನೀಗಿದ್ದಾರೆ. ರಾಜ್ಯದ ಸುಲ್ತಾನ್‌ಪುರದಲ್ಲಿ ತೊಂದರೆಗೆ ಈಡಾಗಿದ್ದ 200 ಮಂದಿಯನ್ನು ಎನ್‌ಡಿಆರ್‌ಎಫ್, ಭೂಸೇನೆ ಪಾರು ಮಾಡಿದೆ. ಇನ್ನು ಹರ್ಯಾಣದ ಅಂಬಾಲದಲ್ಲಿ ಗೃಹ ಸಚಿವ ಅನಿಲ್ ವಿಜ್ ಅವರ ನಿವಾಸ ನೀರಿನಲ್ಲಿ ಮುಳುಗಿದೆ. ಅವರ ಜಿಲ್ಲೆ ಅಂಬಾಲದಲ್ಲಿಯೇ ಮಳೆಯಿಂದ ಹೆಚ್ಚು ಹಾನಿ ಉಂಟಾಗಿದೆ.
ಉತ್ತರ ಪ್ರದೇಶದಲ್ಲಿ ಸಾವು ನೋವು
ಮೂರು ದಿನಗಳ ಅವಧಿಯಲ್ಲಿ ಉತ್ತರ ಪ್ರದೇಶದಲ್ಲಿ ಮಳೆಯಿಂದಾಗಿ ಅಸುನೀಗಿದವರ ಸಂಖ್ಯೆ 42 ಮಂದಿ ಅಸುನೀಗಿದ್ದಾರೆ. ಹವಾಮಾನ ಇಲಾಖೆ ವತಿಯಿಂದಲೂ ಮುಂದಿನ ದಿನಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುವ ಮುನ್ನೆಚ್ಚರಿಕೆ ಲಭ್ಯವಾಗಿದೆ. ಹೀಗಾಗಿ, ರಾಜ್ಯದ ನದಿಗಳ ಲ್ಲಿನ ಪ್ರವಾಹದ ಮಟ್ಟ ಏರುವ ಆತಂಕ ಉಂಟಾಗಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ಬಿರುಸಾಗಿವೆ. ಒಟ್ಟು 53 ಜಿಲ್ಲೆಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮಳೆಯಾಗಲಿದೆ. ರಾಜ್ಯ ಸರ್ಕಾರ ನೀಡಿದ ಮಾಹಿತಿ ಪ್ರಕಾರ ಪ್ರಸಕ್ತ ವರ್ಷ 24 ಜಿಲ್ಲೆಗ ಳಲ್ಲಿ ಅಗತ್ಯಕ್ಕಿಂತ ಹೆಚ್ಚು ಮಳೆಯಾಗಿದೆ.
4 ದಿನ ಭಾರೀ ಮಳೆ
ಮಧ್ಯಪ್ರದೇಶದ ಹದಿನಾರು ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗಲಿದೆ. ಖರಗೋನ್ ಜಿಲ್ಲೆಯಲ್ಲಿ ಶಾಲಾ ವಾಹನದ ಮೇಲೆ ಮರ ಬಿದ್ದ ಪರಿಣಾಮವಾಗಿ 8 ಮಂದಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಉತ್ತರಾಖಂಡದಲ್ಲಿ ಕೂಡ ಮಳೆ ಪ್ರಕೋಪ ಮುಂದುವರಿದಿದೆ. ಬುಧವಾರ ಮಾತನಾಡಿದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ “ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದೆ. ಹೀಗಾಗಿ, ಸಾರ್ವಜನಿಕರು ವಿನಾಕಾರಣ ಪ್ರಯಾಣ ಮಾಡಬಾರದು’ ಎಂದು ಮನವಿ ಮಾಡಿದ್ದಾರೆ. ಈಗಾಗಲೇ ಮಳೆಯಿಂದಾಗಿ ಅಲ್ಲಲ್ಲಿ ಭೂಕುಸಿತ ಉಂಟಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.