ಮಳೆ ಕೊಯ್ಲಿಗೆ ಮೋದಿ ಕರೆ : ಮನ್ ಕಿ ಬಾತ್‌ನಲ್ಲಿ 100 ದಿನಗಳ ಅಭಿಯಾನ ಘೋಷಣೆ
Team Udayavani, Mar 1, 2021, 7:10 AM IST
ಹೊಸದಿಲ್ಲಿ: ಮಳೆ ನೀರು ಕೊಯ್ಲು ನಡೆಸುವ ಮೂಲಕ ಜಲ ಸಂಪನ್ಮೂಲ ಸದ್ಬಳಕೆಗಾಗಿ ಕೇಂದ್ರ ಸರಕಾರ ಹೊಸ ಅಭಿಯಾನವನ್ನು ಆರಂಭಿಸಲಿದೆ.
ರವಿವಾರದ “ಮನ್ ಕಿ ಬಾತ್’ ರೇಡಿಯೊ ಭಾಷಣದಲ್ಲಿ ಈ ಬಗ್ಗೆ ಪ್ರಸ್ತಾವಿಸಿದ ಪ್ರಧಾನಿ ಮೋದಿ, ಮಳೆಗಾಲ ಆರಂಭಕ್ಕೆ ಮುನ್ನ ಇಂಥದ್ದೊಂದು ಸಂಕಲ್ಪ ಮಾಡುವ ಬಗ್ಗೆ ಕರೆ ನೀಡಿದರು.
ಭಾರತದಲ್ಲಿ ಮೇ- ಜೂನ್ ತಿಂಗಳಿನಲ್ಲಿ ಮಳೆ ಆರಂಭಗೊಳ್ಳಲಿದೆ. ಕೆರೆ, ಬಾವಿಗಳನ್ನು ಸ್ವಚ್ಛಗೊಳಿಸಿ 100 ದಿನಗಳ ಮಳೆ ಕೊಯ್ಲು ಅಭಿಯಾನ ಆರಂಭಿಸೋಣವೇ? ಈ ಪರಿಕಲ್ಪನೆಯನ್ನು ಆಧರಿಸಿ ಜಲಶಕ್ತಿ ಸಚಿವಾಲಯ ಶೀಘ್ರದಲ್ಲೇ “ಕ್ಯಾಚ್ ದಿ ರೈನ್’ ಅಭಿಯಾನ ಆರಂಭಿಸಲಿದೆ ಎಂದು ತಿಳಿಸಿದರು.
ಬಬಿತಾ ರಾಜಪುತ್ ಶ್ಲಾಘನೆ
ಮಧ್ಯಪ್ರದೇಶದ ಛತರ್‌ಪುರ್ ಜಿಲ್ಲೆಯ ಅಗ್ರೌತಾ ಎಂಬ ಹಳ್ಳಿಯಲ್ಲಿ ಬತ್ತಿದ ಕೆರೆಯನ್ನು ಪುನರುಜ್ಜೀವನಗೊಳಿಸಿದ ಬಬಿತಾ ರಾಜಪುತ್ ಅವರನ್ನು ಮೋದಿ ಸ್ಮರಿಸಿದರು ಮತ್ತು ಅವರಂತಹ ನಾರಿಯರು ದೇಶಕ್ಕೆ ಸ್ಫೂರ್ತಿ ಎಂದರು.
ಮಾಘ ಪುಣ್ಯಸ್ನಾನ
“ಮಾಘ ಮಾಸದಲ್ಲಿ ನದಿ ಸ್ನಾನ ಪವಿತ್ರ ಎಂದು ನಮ್ಮ ಸಂಸ್ಕೃತಿ ಭಾವಿಸುತ್ತದೆ. ಶತಮಾನಗಳಿಂದ ಮನುಕುಲಕ್ಕೆ ನೀರು ನಿರ್ಣಾಯಕವಾಗಿದೆ. ನೀರು ನಮ್ಮ ಜೀವನಕ್ಕೆ ಆವಶ್ಯಕವಾದಂತೆ ದೇಶದ ಅಭಿವೃದ್ಧಿಗೂ ಅತ್ಯವಶ್ಯ’ ಎಂದು ವಿವರಿಸಿದರು.
ನುಗ್ಗೆ ಕೃಷಿಕನಿಗೆ ನಮೋ
ಸೂಕ್ಷ್ಮ ನೀರಾವರಿ ಬಳಸಿ ನುಗ್ಗೆ ಕೃಷಿಯಲ್ಲಿ ಸಾಧನೆಗೈದ ಗುಜರಾತ್‌ನ ಪಠಾಣ್ ಜಿಲ್ಲೆಯ ಕಾಮರಾಜ್ ಚೌಧರಿ ಅವರನ್ನು ಪ್ರಧಾನಿ ಭಾಷಣದಲ್ಲಿ ನೆನೆದರು. “ಲ್ಯಾಬ್ ಟು ಲ್ಯಾಂಡ್’ ಮಂತ್ರದೊಂದಿಗೆ ವಿಜ್ಞಾನವನ್ನು ಆ ಜಿಲ್ಲೆಯ ಜನ ಮುಂಚೂಣಿಗೆ ಒಯ್ಯುತ್ತಿದ್ದಾರೆ ಎಂದರು. ಸಾವಯವ ಕೃಷಿ ವಿಧಾನದಲ್ಲಿ 10 ವರ್ಷಗಳಿಂದ ಕಾಮರಾಜ್ ಬೆಳೆಯುತ್ತಿರುವ ನುಗ್ಗೆ ಫಸಲು ಪ. ಬಂಗಾಲ, ತ.ನಾಡು, ಒಡಿಶಾಕ್ಕೂ ರವಾನೆಯಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.